ಹೆಂಗ್ ಪುಂಗ್ಲಿ ಅಂದರೂ ಅದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ!
ಮೊದಲನೆಯದಾಗಿ ಚಕ್ರವರ್ತಿ ಅವರ Social Media ವನ್ನು Handle ಮಾಡೋದು ಅವರ Team….
ಹೀಗಾಗಿ ಅಂದಿನ ಆ ಕಮೆಂಟ್ ಅನ್ನು ಅದೇ team ಮಾಡಿರೋದು ಅನ್ನೋದು ನನ್ನ ಅನಿಸಿಕೆ.
ಉರಿ ಅನ್ನೋ ಪದವನ್ನು ಸಾಕಷ್ಟು Context ಗಳಲ್ಲಿ ಅನೇಕ ಬಾರಿ ಮಾತನಾಡುವಾಗ ಜನ ಬಳಸುತ್ತಾರೆ….
ನಿನಗೆ ಅಸಮಾಧಾನ ಮತ್ತು ಅಸಹನೆ ಇದೆಯಾ ಅಂತ ಕೇಳೋದಕ್ಕೂ ಜನ ಉರಿ ಯಾಕೆ ಅಥವಾ ಉರಿ ಇದೆಯಾ ಅಂತ ಕೇಳೋದುಂಟು… ಇದು ಲೋಕಾರೂಢಿಯಲ್ಲಿ ಬಂದಿರುವ ಮಾತುಗಳು…..
ಇದನ್ನೇ ಕಾಂಗ್ರೆಸ್ ನವರು ವ್ಯಕ್ತಿಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವ ಭಾಷೆ ಎಂದುಕೊಂಡರೆ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ದ ಕಾಂಗ್ರೆಸ್ ನ ಅನೇಕ ಜನಪ್ರತಿನಿಧಿಗಳು, ಕಾಂಗ್ರೆಸ್ ನ ಪೂರಾ Eco System ಬಳಸುವ, ಬಳಸಿರುವ ಭಾಷೆಯನ್ನು ಏನೆಂದು ಕರೆಯಬೇಕೋ…..
ಚಕ್ರವರ್ತಿ ಸೂಲಿಬೆಲೆ ಆಗಲಿ ಅಥವಾ ಅವರ ಅಭಿಮಾನಿಗಳೇ ಆಗಲಿ ಕಾಂಗ್ರೆಸ್ ನವರು ಮಾಡಿದ ಕಮೆಂಟ್, ಅಪಪ್ರಚಾರ, ಮತ್ತು ಅದಕ್ಕಾಗಿ ಬಳಸಿದ ಭಾಷೆ ಯಾವುದನ್ನೂ ಗಂಭೀರವಾಗಿ ಆಗಿ ತೆಗೆದುಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಾ ಬಂದರು…
ನಿರಾಧಾರವಾಗಿ ಹೆಂಗ್ ಪುಂಗ್ಲಿ ಅಂದರೂ ಅದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ…
ಏಕೆಂದರೆ ಜನಕ್ಕೆ ಸತ್ಯ ಅರ್ಥ ಆದರೆ ಸಾಕು ಎಂಬುದು ಅವರ ನಿಲುವಾಗಿತ್ತು….
ಅಷ್ಟು ವರ್ಷದಿಂದ ಚಕ್ರವರ್ತಿ ಸೂಲಿಬೆಲೆ Fact ಗಳ ಆಧಾರದಲ್ಲಿ ಇಡೀ ಕಾಂಗ್ರೆಸ್ ಅನ್ನ ಉಗಿದು ಉಪ್ಪು ಹಾಕಿದರೂ ಅವರ ಒಂದೇ ಒಂದು ಕೂದಲು ಕೊಂಕಿಸೋಕೂ ಕಾಂಗ್ರೆಸ್ ನಿಂದ ಆಗಿರಲಿಲ್ಲ…
ಬರೀ ಅಪಪ್ರಚಾರ ಮಾಡಿದರು ಅಷ್ಟೇ….. ಚಕ್ರವರ್ತಿ ಬರೀ ಸುಳ್ಳು ಹೇಳಿದ್ದಾರೆ ಅಂತ ಅವರನ್ನು ಹೆಂಗ್ ಪುಂಗ್ಲಿ ಅಂತ ಕರೆಯಲಾಯಿತೇ ವಿನಃ ಚಕ್ರವರ್ತಿ ಸೂಲಿಬೆಲೆ ಇಂತಹ ವಿಷಯದಲ್ಲಿ ಸುಳ್ಳು ಹೇಳಿದ್ದಾರೆ…. ಸತ್ಯ ಹೀಗಿದೆ ಅಂತ ದಾಖಲೆ ಸಮೇತ ಒಂದೇ ಒಂದು ದೂರನ್ನೂ ಕಾಂಗ್ರೆಸ್ ಇದುವರೆಗೂ ಕೊಟ್ಟಿಲ್ಲ…. ಅಲ್ಲಿಗೆ ಚಕ್ರವರ್ತಿ ಸೂಲಿಬೆಲೆ ಇಷ್ಟು ವರ್ಷ ಹೇಳಿದ್ದು ಸತ್ಯ… ಮತ್ತು ತಾವು ಅವರನ್ನು ಹೆಂಗ್ ಪುಂಗ್ಲಿ ಅಂತ ಕರೆದದ್ದು ಕೇವಲ ಉರಿಯಿಂದಲೇ ಹೊರತು ಆ ಆರೋಪದಲ್ಲಿ ಹುರುಳಿರಲಿಲ್ಲ ಅಂತ ಸ್ವತಃ ಕಾಂಗ್ರೆಸ್ ನವರೇ ಇಡೀ ರಾಜ್ಯಕ್ಕೆ ಹೇಳಿದ ಹಾಗಾಯ್ತು.
ಇನ್ನು ಈ ಪ್ರಕರಣ…
ಮೊದಲಿಗೆ ಬರೀ ಪಿಟೀಷನ್ ದಾಖಲಾಗಿದ್ದ ಈ ಪ್ರಕರಣದಲ್ಲಿ ಪೋಲೀಸರ ಬೆನ್ನು ಬಿದ್ದು FIR ಮಾಡಿಸಿ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಏನೋ ಸಾಧಿಸಿಬಿಟ್ವಿ ಅಂತ ಇಡೀ ಕಾಂಗ್ರೆಸ್ ಪಾಳಯ ಚಕ್ರವರ್ತಿ ಸೂಲಿಬೆಲೆ ವಿರುದ್ದ ಎಷ್ಟು ಉರ್ಕೊಂಡಿತ್ತು ಮತ್ತು ಒಂದೇ ಒಂದು ಅವಕಾಶಕ್ಕಾಗಿ ಎಷ್ಟು ಗಂಭೀರವಾಗಿ ಆಗಿ ಕಾಯುತ್ತಿತ್ತು ಅನ್ನೋದು ಇದರಿಂದಲೇ ತಿಳಿಯುತ್ತದೆ.
ಶಿವಮೊಗ್ಗದಲ್ಲಿ ಕಳೆದ ಮೂರು ದಿನದಿಂದ #ಇನ್ನೂಮಲಗಿದರೆಏಳುವಾಗಭಾರತಇರುವುದಿಲ್ಲ ಕಾರ್ಯಕ್ರಮ ನಡೆಯುತ್ತಿದ್ದುದು ನಿಮಗೆಲ್ಲ ಗೊತ್ತೇ ಇದೆ.
ಇದೊಂದು ಕೇಸಿನಲ್ಲಿ ಪೂಲಿಸರ ಮೇಲೆ ಎಷ್ಟು ಒತ್ತಡ ತರಲಾಗಿತ್ತೆಂದರೆ ಆ ಕಾರ್ಯಕ್ರಮ ಮುಗಿಯುತ್ತಿದ್ದ ಹಾಗೆಯೇ ಪೋಲೀಸರು ಚಕ್ರವರ್ತಿ ಅಣ್ಣನ ಹತ್ತಿರ ಒಂದು ನೋಟೀಸ್ ಕೊಡುತ್ತೇವೆ….ನೀವು ಒಂದು ಹದಿನೈದು ನಿಮಿಷ ಸ್ಟೇಶನ್ ಗೆ ಬಂದು ಹೋಗಬೇಕು ಅಂತ ಹೇಳುವ ಮಟ್ಟಿಗೆ ಪೋಲೀಸರ ಮೇಲೆ ಈ ಪ್ರಕರಣದಲ್ಲಿ ಒತ್ತಡ ಇತ್ತು.
ಕಾನೂನಿಗೆ ತಲೆಬಾಗುವ ಚಕ್ರವರ್ತಿ ಅಣ್ಣ ಪೋಲೀಸರಿಗೆ Fresh Up ಆಗಿ ಬರ್ತೀನಿ ಅಂತ ಹೇಳಿ ಅನಂತರ Fresh up ಆಗಿ ಸ್ಟೇಶನ್ ಬಳಿ ಹೋದರು ಕೂಡ…
ಆದರೆ ಕೇವಲ ಹತ್ತು- ಹದಿನೈದು ನಿಮಿಷದೊಳಗೇ ಪೋಲೀಸರು ಚಕ್ರವರ್ತಿ ಸೂಲಿಬೆಲೆ ಅವರನ್ನು ಸ್ಟೇಶನ್ ಗೆ ಕರೆದಿರುವ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು ಮತ್ತು ಇದರಿಂದಾಗಿ ಕೇವಲ ಹತ್ತು ನಿಮಿಷದೊಳಗೆ ಮುನ್ನೂರಕ್ಕೂ ಹೆಚ್ಚು ಕಾರ್ಯಕರ್ತರು ಚಕ್ರವರ್ತಿ ಅವರಿಗೆ ಬೆಂಬಲವಾಗಿ ಸ್ಟೇಶನ್ ನ ಬಳಿ ಬಂದು ನಿಂತು ಜೋರಾಗಿ ಘೋಷಣೆ ಕೂಗೋಕೆ ಶುರು ಮಾಡಿದ್ದರು.
ನಾನು ಇಡೀ ಕಾಂಗ್ರೆಸ್ ಪಕ್ಷಕ್ಕೆ ಚಕ್ರವರ್ತಿ ಸೂಲಿಬೆಲೆ ಅವರ ಅಭಿಮಾನಿಗಳ ಪರವಾಗಿ ಒಂದು ವಿಷಯ ಹೇಳೋಕೆ ಇಷ್ಟ ಪಡ್ತೀನಿ….
ಚಕ್ರವರ್ತಿ ಸೂಲಿಬೆಲೆ ಅವರನ್ನು ಸ್ಟೇಶನ್ ಬಳಿ ಕರೆಸಿದ್ದಕ್ಕೇ ಕೇವಲ ಹತ್ತು ನಿಮಿಷದೊಳಗೆ ಯಾರೂ ಹೇಳದೆ ಮುನ್ನೂರಕ್ಕೂ ಹೆಚ್ಚು ಜನ ಚಕ್ರವರ್ತಿ ಅವರ ಪರವಾಗಿ ಸ್ಟೇಶನ್ ಬಳಿ ಬಂದು ನಿಂತಿದ್ದರು.
ಚಕ್ರವರ್ತಿ ಅನ್ನೋದು ಒಂದು ಬೆಂಕಿ…
Leave A Reply