ದಾವೂದ್ ಹತ್ಯೆಗೆ ಅಜಿತ್ ದೋವಲ್ ಮಾಡಿದ ಪ್ಲಾನ್ ವಿಫಲಗೊಳಿಸಿದ್ದು ಯಾರು?

ಭಾರತ ವಿರೋಧಿ ಶಕ್ತಿಗಳು ಜಗತ್ತಿನ ಯಾವ ಭಾಗದಲ್ಲಿ ಇದ್ದರೂ ಈಗ ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಂತಹ ಶಕ್ತಿಗಳು ಪಾಕಿಸ್ತಾನದಲ್ಲಿ ಇರಲಿ ಅಥವಾ ಕೆನಡಾದಲ್ಲಿರಲಿ, ಥೈಲ್ಯಾಂಡ್, ಆಸ್ಟ್ರೇಲಿಯಾದಲ್ಲಿ ಇರಲಿ, ಅಂತವರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಅದನ್ನೆಲ್ಲಾ ಮೌನದಲ್ಲಿಯೇ ಮಾಡುತ್ತಿರುವ ಶಕ್ತಿಯ ಹೆಸರು ಅಜಿತ್ ದೋವಲ್. ವಿದೇಶದಲ್ಲಿ ಕುಳಿತು ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ಹೂಡುತ್ತಿರುವ ಬೆನ್ನುಮೂಳೆಯನ್ನು
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು
ಮುರಿಯುತ್ತಿದ್ದಾರೆ.
ಏನಾಗಿತ್ತು ಹಯಾತ್ ಹೋಟೇಲಿನಲ್ಲಿ!
ಅವರು 2005 ರಲ್ಲಿಯೇ ಭಾರತದ ಮೋಸ್ಟ್ ವಾಟೆಂಡ್ ದಾವೂದ್ ಇಬ್ರಾಹಿಂನನ್ನು ದುಬೈಯಲ್ಲಿಯೇ ಹತ್ಯೆ ಮಾಡಲು ಪ್ಲಾನ್ ರೂಪಿಸಿದ್ದರು. ಅದು ಯಶಸ್ವಿಯಾಗಲು ಎಲ್ಲಾ ತಂತ್ರಗಳನ್ನು ಮಾಡಲಾಗಿತ್ತು. ಆದರೆ ಅದನ್ನು ವಿಫಲಗೊಳಿಸಲು ಭಾರತದ ಕೆಲವು ರಾಜಕೀಯ ಶಕ್ತಿಗಳು ಸಂಚು ಹೂಡಿದ್ದವು. ಅದು ಹೇಗೆ ಎನ್ನುವುದನ್ನು ನೋಡೋಣ.
ಆವತ್ತು ಜುಲೈ 23, 2005. ದಾವೂದ್ ಮಗಳ ಮದುವೆಯ ಅದ್ದೂರಿ ರಿಸೆಪ್ಷನ್ ಗಾಗಿ ದುಬೈಯ ಹಯಾತ್ ಹೋಟೇಲಿನ ಸಭಾಂಗಣ ಸಿಂಗಾರಗೊಂಡಿತು. ಅಲ್ಲಿ ದಾವೂದ್ ಆಗಮಿಸುತ್ತಾನೆ ಎಂಬ ಮಾಹಿತಿ ಅಜಿತ್ ದೋವಲ್ ಅವರಿಗೆ ದೊರಕಿತ್ತು. ಅವರು ಇಬ್ಬರು ಶಾರ್ಪ್ ಶೂಟರ್ ಗಳನ್ನು ತಯಾರು ಮಾಡಿಕೊಂಡರು. ಒಬ್ಬನ ಹೆಸರು ವಿಕ್ಕಿ ಮಲೋತ್ರಾ. ಇನ್ನೊಬ್ಬನ ಹೆಸರು ಫರೀದ್ ತನಾಶಾ. ಇಬ್ಬರೂ ಈ ಚೋಟಾ ರಾಜನ್ ಗ್ಯಾಂಗಿನವರಾಗಿದ್ದರು. ಈ ವಿಷಯ ಹೇಗೋ ಆಗ ಕೇಂದ್ರದಲ್ಲಿದ್ದ ಯುಪಿಎ ಸರಕಾರಕ್ಕೆ ಸಿಕ್ಕಿತು. ಆ ವಿಷಯ ಮಹಾರಾಷ್ಟ್ರ ಸರಕಾರಕ್ಕೆ ತಲುಪಲು ತಡವಾಗಲಿಲ್ಲ. ಆಗ ಮಹಾರಾಷ್ಟ್ರದಲ್ಲಿದ್ದ NCP ಆಡಳಿತದ ಗೃಹ ಇಲಾಖೆಯಿಂದ ತಕ್ಷಣ ಡಿಸಿಪಿ ಧನಂಜಯ್ ಕಮಲಾಕರ್ ಅವರನ್ನು ದುಬೈಗೆ ಕಳುಹಿಸಿ ವಿಕ್ಕಿ ಮಲೋತ್ರಾ ಹಾಗೂ ಫರೀದ್ ತನಾಶಾ ಅವರನ್ನು ಬಂಧಿಸಲು ಸೂಚಿಸಲಾಯಿತು. ಡಿಸಿಪಿ ತಮಗೆ ಸಿಕ್ಕಿರುವ ಸೂಚನೆಯನ್ನು ಅನುಷ್ಠಾನಗೊಳಿಸಲು ಮುಂದಾಗುತ್ತಿದ್ದಂತೆ ದೋವಲ್ ಅವರಿಗೆ ಮಾಹಿತಿ ಹೋಯಿತು. ದಾವೂದ್ ಹತ್ಯೆಯನ್ನು ಕಾರ್ಯರೂಪಕ್ಕೆ ಇಳಿಸಲು ಆಂತರಿಕ ಗುಪ್ತಚರ ಇಲಾಖೆಯ ಸೂಚನೆಯಂತೆ ಶಾರ್ಪ್ ಶೂಟರ್ ಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮುಂಬೈ ಪೊಲೀಸರಿಗೆ ತಿಳಿಸಲಾಯಿತಾದರೂ ಅವರು ಅದನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.
ಎಲ್ಲಿಯ ತನಕ ಅಂದರೆ ಸರಕಾರಿ ಸೇವೆಯಲ್ಲಿದ್ದಾರೆಂದು ಗೊತ್ತಿದ್ದರೂ ಉನ್ನತ ರಾಜಕೀಯ ಒತ್ತಡದಿಂದ ಮುಂಬೈ ಪೊಲೀಸರು ದೋವಲ್ ಅವರನ್ನು ಕೂಡ ಬಂಧಿಸಲು ವಿಫಲ ಯತ್ನ ನಡೆಸಿದ್ದರು.
ಅಂತಿಮವಾಗಿ ಈ ವಿಷಯ ಪಾಕಿಸ್ತಾನದ ಐಎಸ್ ಐ ಸಂಸ್ಥೆಗೆ ಗೊತ್ತಾಗಿ ದಾವೂದ್ ಭದ್ರತೆಯನ್ನು ಹಲವಾರು ಪಟ್ಟು ಹೆಚ್ಚಿಸಲಾಯಿತು.
ಸರಕಾರದ ಇಚ್ಚಾಶಕ್ತಿ ಮುಖ್ಯ..
ಆವತ್ತು ಯುಪಿಎ ಮತ್ತು ಮಹಾರಾಷ್ಟ್ರ ಸರಕಾರ ಹಸ್ತಕ್ಷೇಪ ಮಾಡದೇ ಇದ್ದಿದ್ದರೆ ಆವತ್ತೇ ದಾವೂದ್ ಅಂತ್ಯವಾಗುತ್ತಿತ್ತು.
ಆದರೆ ಈಗ ಮೋದಿ ಸರಕಾರ ಯಾಕೆ ದಾವೂದ್ ಬಂಧನ ಮಾಡುತ್ತಿಲ್ಲ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.
ಈಗಾಗಲೇ ಭಾರತಕ್ಕೆ ಬೇಕಾಗಿರುವ ಸುಮಾರು 17 ಪ್ರಮುಖ ವಾಟೆಂಡ್ ವ್ಯಕ್ತಿಗಳನ್ನು ಅವರು ಎಲ್ಲಿದ್ದಾರೋ ಅಲ್ಲಿಯೇ ಮುಗಿಸಿಹಾಕಲಾಗಿದೆ. ಅದು ಮುಂಬೈ ಮಾಸ್ಟರ್ ಮೈಂಡ್ ಗಳು ಇರಬಹುದು, ಖಲಿಸ್ತಾನದ ಉಗ್ರರಿರಬಹುದು, ಯಾರನ್ನೂ ನಮ್ಮ RAW ಬಿಟ್ಟಿಲ್ಲ. ಯಾವಾಗ ದೇಶದ ಭದ್ರತೆಗೆ ದಕ್ಕೆ ತರುವ ವ್ಯಕ್ತಿಗಳು ಎಲ್ಲಿ ಇರುತ್ತಾರೋ ಅಲ್ಲಿಂದಲೇ ಯಮಲೋಕಕ್ಕೆ ಕಳುಹಿಸುವ ಕೆಲಸ ನಡೆಯುತ್ತಿದೆ. ರಣಬೇಟೆ ಮುಂದುವರೆದಿದೆ. ಇಂತಹ ಕಾಲಘಟ್ಟದಲ್ಲಿ ದಾವೂದ್ ಐಎಸ್ ಐ ಮುಖ್ಯಸ್ಥನಾಗಿದ್ದಾನೆ!.
Leave A Reply