ಮಧ್ಯಪ್ರದೇಶದಲ್ಲಿ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ತುಳುನಾಡಿನ ವೈದಿಕ ವೃಂದ!
ತುಳುನಾಡಿನವರು ಎಲ್ಲೇ ಹೋದರೂ ಅಲ್ಲಿ ತಮ್ಮ ಛಾಪನ್ನು ಮೂಡಿಸುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅದೀಗ ಮತ್ತೊಮ್ಮೆ ಸಾಬೀತಾಗಿದೆ. ಹರಿ ಉಪಾಧ್ಯಾಯ ವಾಮಾಂಜೂರು ಅವರ ನೇತೃತ್ವದಲ್ಲಿ ಮಂಗಳಾದೇವಿ ದೇವಸ್ಥಾನದ ಚಂದ್ರಶೇಖರ ಐತಾಳ, ಕಟೀಲಿನ ಉಮೇಶ್ ಭಟ್, ಮಂಜೇಶ್ವರದ ಸತ್ಯನಾರಾಯಣ ಟಿಕೆ ಇವರೆಲ್ಲರೂ ಮಧ್ಯಪ್ರದೇಶದಲ್ಲಿ ವಿಶೇಷವಾಗಿರುವ ಗೌರವ, ಅಭಿನಂದನೆಗೆ ಪಾತ್ರರಾಗಿದ್ದಾರೆ. ಗ್ವಾಲಿಯರ್ ಇದರ ರಾಜಮನೆತನದ ರಾಜಮಾತೆ ಎಂದೇ ಕರೆಯಲ್ಪಡುತ್ತಿದ್ದ ದಿವಂಗತ ವಿಜಯ ರಾಜೇ ಸಿಂಧಿಯಾ ಅವರ ಪ್ರತಿಮೆಯ ಅನಾವರಣ ಗ್ವಾಲೀಯರ್ ಇಲ್ಲಿನ ಶಿವಪುರಿಯಲ್ಲಿ ಆಯೋಜನೆಗೊಂಡಿತ್ತು. ಈ ಸಮಯದಲ್ಲಿ ಪ್ರಧಾನಿ ಮೋದಿಜಿಯವರ ಕಾರ್ಯಕ್ರಮದ ನಿಮಿತ್ತ ದೆಹಲಿಯಲ್ಲಿದ್ದ ಹರಿ ಉಪಾಧ್ಯಾಯ ವಾಮಾಂಜೂರು ಇವರಿಗೆ ಅಲ್ಲಿಂದಲೇ ಮಧ್ಯಪ್ರದೇಶದ ಗ್ವಾಲಿಯರ್ ನ ಶಿವಪುರಿಗೆ ಬರಲು ಆಹ್ವಾನ ಸಿಕ್ಕಿದೆ. ಅವರು ದೆಹಲಿಯಿಂದ ಗ್ವಾಲಿಯರ್ ಅಲ್ಲಿಂದ ಶಿವಪುರಿಗೆ ತಲುಪಿದ್ದಾರೆ.
ಗ್ವಾಲಿಯರ್ ನಲ್ಲಿ ವೇದ ಮಂತ್ರ ಘೋಷಣೆ..
ಅಚಾನಕ್ ಆಗಿ ಸಿಕ್ಕಿರುವ ಇಂತಹ ಆಹ್ವಾನದಿಂದ ಆಶ್ಚರ್ಯಚಕಿತರಾದ ವೈದಿಕರ ತಂಡ ಶಿವಪುರಿಯಲ್ಲಿ ರಾಜಮಾತೆ ವಿಜಯ ರಾಜೇ ಸಿಂಧಿಯಾ ಅವರ ಪ್ರತಿಮೆಯ ಪೂರ್ವಭಾವಿ ಪ್ರಾರ್ಥನೆ, ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿಕೊಟ್ಟ ರೀತಿಗೆ ಮಧ್ಯಪ್ರದೇಶದ ಕ್ರೀಡಾ ಸಚಿವೆ, ಸ್ವತ: ವಿಜಯ ರಾಜೇ ಸಿಂಧಿಯಾ ಅವರ ಮಗಳು ಯಶೋದರಾ ರಾಜೇ ಸಿಂಧಿಯಾ ಅವರು ಖುಷಿಪಟ್ಟಿದ್ದಾರೆ. ಅದರ ಬಳಿಕ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಹರಿ ಉಪಾಧ್ಯಾಯ ಅವರು ಮಾತನಾಡಿದ ಶೈಲಿ ನೋಡಿ ಇನ್ನಷ್ಟು ಪ್ರಭಾವಿತರಾಗಿದ್ದಾರೆ. ಗ್ವಾಲಿಯರ್ ರಾಜಮಾತೆಯನ್ನು, ಅವರ ರಾಜಕುಟುಂಬ ಮತ್ತು ಪಿತೃಪಕ್ಷದಲ್ಲಿ ರಾಜಮಾತೆಯ ಪ್ರತಿಮೆ ಅನಾವರಣ ಹೀಗೆ ಹರಿ ಉಪಾಧ್ಯಾಯ ಅವರು ಹಲವು ವಿಷಯಗಳ ಮೇಲೆ ಮನದಾಳದಿಂದ ಆಡಿದ ಮಾತುಗಳನ್ನು ಕೇಳಿ ಯಶೋದರಾ ರಾಜೇ ಉಲ್ಲಾಸಿತರಾಗಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿರ್ಧಾರ ಇವತ್ತು ಗಟ್ಟಿಯಾಯಿತು ಎಂದ ರಾಜೇ!
ಸಭಾ ಕಾರ್ಯಕ್ರಮದಲ್ಲಿಯೇ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ ಯಶೋದರಾ ರಾಜೇ ಸಿಂಧಿಯಾ ಅವರು ತಮ್ಮ ತಾಯಿಯ ಪ್ರತಿಮೆಯ ಅನಾವರಣ ಕಾರ್ಯಕ್ರಮ ತಮ್ಮ ಪಾಲಿಗೆ ಅವಿಸ್ಮರಣೀಯ ಕ್ಷಣಗಳು. ಅದರೊಂದಿಗೆ ಮಂಗಳೂರು ಭಾಗದ ಪುರೋಹಿತರು ಬಂದು ಇಲ್ಲಿ ಉಪಸ್ಥಿತರಿದ್ದು, ಎಲ್ಲವನ್ನು ನಿರ್ವಹಿಸಿಕೊಟ್ಟಿರುವುದು, ಅವರ ಪ್ರಾರ್ಥನೆ, ವಿಧಿವಿಧಾನಗಳು, ಪಿತೃಪಕ್ಷದ ಬಗ್ಗೆ ಹೇಳಿದ್ದು, ರಾಜಕುಟುಂಬದ ಬಗ್ಗೆ ಹೇಳಿದ್ದು ಎಲ್ಲವನ್ನು ಕೇಳಿ ತುಂಬಾ ಖುಷಿಯಾಯಿತು. ತಾವು ಚುನಾವಣಾ ರಾಜಕೀಯದಲ್ಲಿ ಇನ್ನು ಮುಂದೆ ಸಕ್ರಿಯವಾಗಿ ಇರಲ್ಲ ಎಂದು ಅಂದುಕೊಂಡಿದ್ದೆ. ಆ ನಿರ್ಧಾರ ಇವತ್ತು ಇನ್ನಷ್ಟು ಗಟ್ಟಿಗೊಂಡಿದೆ. ಹೊಸ ಪೀಳಿಗೆಗೆ ಅವಕಾಶ ನೀಡಬೇಕಿದೆ. ನನ್ನ ನಿರ್ಧಾರದೊಂದಿಗೆ ನೀವೆಲ್ಲ ಇರುತ್ತೀರಿ ಎಂದು ನಂಬಿದ್ದೇನೆ ಎಂದು ಹೇಳಿದರು.
ಯಶೋದರಾ ರಾಜೇ ಸಿಂಧಿಯಾ ಅವರು ಬಹಿರಂಗ ವೇದಿಕೆಯಲ್ಲಿ ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿರುವುದು ಚರಿತ್ರೆಯಲ್ಲಿ ದಾಖಲಾಯಿತು. ಅದರೊಂದಿಗೆ ತುಳುನಾಡಿನ ಪುರೋಹಿತರನ್ನು ಅವರು ಮನಸಾರೆ ಹೊಗಳುವ ಮೂಲಕ ತಮ್ಮ ಸರಳತೆಯನ್ನು ಕೂಡ ಮೆರೆದರು. ವೇದಮೂರ್ತಿ ಹರಿಕೃಷ್ಣ ತಂತ್ರಿಗಳ ಶಿಷ್ಯರಾಗಿರುವ ಈ ಪುರೋಹಿತರು ತಮ್ಮ ಗುರುವಿನ ಕೀರ್ತಿಯನ್ನು ಕೂಡ ಹೆಚ್ಚಿಸಿರುವುದು ನಮಗೆಲ್ಲಾ ಸಂತೋಷದ ಸಂಗತಿ. ಇವರ ಸಾಧನೆ ಇನ್ನಷ್ಟು ಮೆರೆಯಲಿ ಎಂದು ತುಳುನಾಡು ನ್ಯೂಸ್ ಹಾರೈಸುತ್ತದೆ
Leave A Reply