• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪ್ರಾಚೀನ ಯೋಗಿನಿ ದೇವಾಲಯ: ಶಿವನನ್ನು ಕೇಂದ್ರವಾಗಿಸಿದ ದೇವಿಯ 65 ರೂಪಗಳು

Santhosh Kumar Mudradi Posted On October 13, 2023
0


0
Shares
  • Share On Facebook
  • Tweet It

ಇದು ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ ಮಿತಾವಲಿ ಎನ್ನುವ ಹಳ್ಳಿಯಲ್ಲಿರುವ ದೇಶದ ಏಕೈಕ ಯೋಗಿನಿ ದೇವಾಲಯ. ದಿಲ್ಲಿಯ ಸಂಸತ್ ಭವನವನ್ನು ಹೋಲುವ ಅತ್ಯಂತ ವೈಶಿಷ್ಟ ಪೂರ್ಣವಾದ ಆಕಾರವುಳ್ಳ ಶಿವನ ಮಂದಿರ.

ಶಿವನನ್ನು ಕೇಂದ್ರವಾಗಿಸಿಕೊಂಡು ತಾಯಿ ಪಾರ್ವತಿಯಿಂದ ಕೂಡಿ ಅರವತ್ತನಾಲ್ಕು ಗುಡಿಗಳು ಇಲ್ಲಿಯ ವಿಶೇಷತೆ. ಒಟ್ಟಿಗೆ ದೇವಿಯ 65 ರೂಪಗಳಿಗೆ ಪ್ರತ್ಯೇಕವಾಗಿ ಗರ್ಭಗೃಹ ಹಾಗೂ ಮಧ್ಯದಲ್ಲಿ ಶಿವನ ಮಂದಿರ. ಎಲ್ಲವೂ ವರ್ತುಲಾಕಾರದಲ್ಲಿದೆ.

ರಜಪೂತ ರಾಜ ದೇವಪಾಲ ಎನ್ನುವವನಿಂದ 13ನೇ ಶತಮಾನದಲ್ಲಿ ಈ ದೇವಾಲಯ ನಿರ್ಮಿಸಲ್ಪಟ್ಟಿದೆ. ಪುರುಷ ಪ್ರಕೃತಿ ಎನ್ನುವ ಅನುಬಂಧದಿಂದ ಶಿವ ಪಾರ್ವತಿಯರು ಈ ದೇವಸ್ಥಾನದ ಅಧಿಷ್ಠಾತೃ ದೇವತೆಗಳು. ಆದ್ದರಿಂದ ಭೂಮಿಯು ವರ್ತುಲ ಆಕಾರ ಎನ್ನುವ ಉದ್ದೇಶದಿಂದ ಈ ದೇವಾಲಯವನ್ನು ವರ್ತುಲಾಕಾರದಲ್ಲಿ ಮಾಡಲ್ಪಟ್ಟಿದೆ ಎನ್ನಬಹುದು.

ದೇಶದಲ್ಲಿ ಸುಮಾರು 10 ಕಡೆ ಯೋಗಿನಿ ದೇವಾಲಯಗಳು ನಮಗೆ ಕಾಣುತ್ತವೆ. ಸಾಧಾರಣ ಎಲ್ಲಾ ಕಡೆಯೂ ಗರ್ಭಗೃಹದ ಗೋಡೆಯಲ್ಲಿ ಅಥವಾ ಹೊರಾವರಣದ ಒಳಭಾಗದ ಗೋಡೆಗಳಲ್ಲಿ ಅಥವಾ ಕಂಬಗಳಲ್ಲಿ ಯೋಗಿನಿ ದೇವತೆಗಳು ಕೆತ್ತಲ್ಪಟ್ಟಿರುತ್ತದೆ. ಆದರೆ ಪ್ರತ್ಯೇಕವಾಗಿ ಗರ್ಭಗುಡಿಯನ್ನು ಹೊಂದಿರುವಂತಹ ದೇವಾಲಯ ಇದು ಮಾತ್ರವಾಗಿರಬಹುದು.

ಎಲ್ಲಾ ದೇವಾಲಯಗಳಂತೆ ಪರಕೀಯರ ಆಕ್ರಮಣಕ್ಕೆ ತುತ್ತಾಗಿ ಇಲ್ಲಿ ಯೋಗಿನಿ ದೇವತೆಗಳ ಮೂರ್ತಿ ನಾಶವಾಗಿದೆ. ಗರ್ಭಗೃಹಗಳಲ್ಲಿ ಶಿವಲಿಂಗ ಪ್ರತಿಷ್ಠಾಪಿತವಾಗಿದೆ. ಆದರೆ ಗರ್ಭಗೃಹದ ಹೊರಭಾಗದಲ್ಲಿ ಯೋಗಿನಿ ದೇವತೆಗಳ ಕೆತ್ತನೆಗಳು ಕಾಣುತ್ತವೆ. ಮತ್ತೆ ಉಳಿದಂತೆ ಬಹು ಭಾಗ ನಾಶವಾದಂತೆ ಕಾಣುತ್ತದೆ. ದೇವಸ್ಥಾನದ ಪ್ರಧಾನ ಅಂಗವಾದ ಶಿಖರ ಇಲ್ಲಿ ನಮಗೆ ಕಾಣುವುದಿಲ್ಲ. ಕಟ್ಟುವಾಗಲೇ ಅರ್ಧಕ್ಕೆ ನಿಂತಿದೆಯೋ ಅಥವಾ ನಷ್ಟವಾಗಿರುವ ದೇವಸ್ಥಾನವನ್ನು ಸರಿ ಮಾಡಿ ಇಷ್ಟರಮಟ್ಟಿಗೆ ತಂದು ನಿಲ್ಲಿಸಿದ್ದಾರೆಯೋ ಎನ್ನುವುದು ಅಸ್ಪಷ್ಟ ಮಾಹಿತಿ. ಆದರೆ ಮತ್ತುಳಿದ ಭಾಗಗಳೆಲ್ಲವೂ ಆದಷ್ಟು ಮಟ್ಟಿಗೆ ತನ್ನ ನೈಜತೆಯನ್ನು ಉಳಿಸಿಕೊಂಡಿದೆ.

ನೆಲದಿಂದ ನೂರು ಅಡಿ ಎತ್ತರದ ಪರ್ವತದಲ್ಲಿ ಈ ದೇವಸ್ಥಾನಕ್ಕೆ ಕಟ್ಟಲ್ಪಟ್ಟಿರುವುದು. ಯಾವುದೇ ಭೂಕಂಪ ಬಿರುಗಾಳಿಗೆ ಬಲಿಯಾಗದೆ ಗಟ್ಟಿಯಾಗಿ ನಿಂತಿದೆ. ಹಾಗೆಯೇ ಪ್ರಾಚೀನ ಕಾಲದಲ್ಲಿ ಭೌಗೋಳಿಕವಾದಂತಹ ಅಧ್ಯಯನ ಕೇಂದ್ರವಾಗಿತ್ತು ಎನ್ನುತ್ತದೆ ಕೆಲವು ಇತಿಹಾಸಗಳು. ಸಂಸತ್ ಭವನದ ನಿರ್ಮಾಣದ ಸಮಯದಲ್ಲೂ ಕೂಡ ವೃತ್ತಾಕಾರದ ತೀರ್ಮಾನವನ್ನು ಈ ಮಂದಿರವನ್ನು ನೋಡಿಯೇ ಸ್ವೀಕರಿಸಿದ್ದಾರೆ ಎನ್ನುವ ವದಂತಿಯಿದೆ. ಏನೇ ಆಗಲಿ ಮಧ್ಯಪ್ರದೇಶದ ಒಂದು ಸಣ್ಣ ಹಳ್ಳಿಯಲ್ಲಿ ದಿಲ್ಲಿಯನ್ನು ಹೋಲುವ ವೈಭವ ನಾವಿಲ್ಲಿ ಕಾಣುತ್ತೇವೆ.

0
Shares
  • Share On Facebook
  • Tweet It




Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Santhosh Kumar Mudradi June 16, 2026
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Santhosh Kumar Mudradi May 21, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
  • Popular Posts

    • 1
      ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ

  • Privacy Policy
  • Contact
© Tulunadu Infomedia.

Press enter/return to begin your search