• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅಖಿಲ ಭಾರತ ಜಿಎಸ್ ಬಿ ಚೆಸ್ ಟೂರ್ನಮೆಂಟ್ ಯಶಸ್ವಿ

Tulunadu News Posted On November 6, 2023
0


0
Shares
  • Share On Facebook
  • Tweet It

ಆಭರಣ ಟೈಮ್ ಲೆಸ್ ಜ್ಯುವೆಲ್ಲರಿ ಪ್ರಾಯೋಜಿತ ಅಖಿಲ ಭಾರತ ಜಿಎಸ್ ಬಿ ಚೆಸ್ ಟೂರ್ನಮೆಂಟ್ ಬೆಂಗಳೂರಿನ ಖಾಸಗಿ ಹೋಟೇಲಿನಲ್ಲಿ ಭಾನುವಾರ ಯಶಸ್ವಿಯಾಗಿ ನಡೆಯಿತು. ಕೊಡಿಯಾಲ್ ಸ್ಪೋರ್ಟ್ ಅಸೋಸಿಯೇಷನ್, ಕಿಂಗ್ಸ್ ಚೆಸ್ ಅಕಾಡೆಮಿ ಮತ್ತು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಶನ್ ಜಂಟಿಯಾಗಿ ಆಯೋಜಿಸಿದ ಚೆಸ್ ಸ್ಪರ್ಧಾಕೂಟದಲ್ಲಿ 6 ರಿಂದ 67 ವರ್ಷ ವಯೋಮಾನದ ಚೆಸ್ ಆಟಗಾರರು ಭಾಗವಹಿಸಿದರು. ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ ಸಹಿತ ದೇಶದ ವಿವಿಧ ಭಾಗಗಳಿಂದ ಒಟ್ಟು 120 ಸ್ಪರ್ಧಾಳುಗಳು ಪಾಲ್ಗೊಂಡರು. ಫೀಡೆ ಫ್ಲೇಯರ್ ರೇಟಿಂಗ್ ಹೊಂದಿರುವ 16 ಆಟಗಾರರು ಸೇರಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ 26 ಆಟಗಾರರು ಭಾಗವಹಿಸಿ ತಮ್ಮ ನೈಪುಣ್ಯತೆಯನ್ನು ಮೆರೆದರು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಆಭರಣ್ ಟೈಮ್ ಲೆಸ್ ಜ್ಯುವೆಲ್ಲರಿ ಎಂಡಿ ಡಾ. ಪ್ರತಾಪ್ ಕಾಮತ್ ಇಂತಹ ಸ್ಪರ್ಧಾಕೂಟದ ಪ್ರಾಯೋಜಕತ್ವ ವಹಿಸಿರುವುದು ನಮ್ಮ ಸಂಸ್ಥೆಗೆ ಖುಷಿಯ ವಿಷಯ. ಚೆಸ್ ಆಟಕ್ಕೆ ಆಟಗಾರರಿಂದ ಇಷ್ಟು ದೊಡ್ಡ ಸ್ಪಂದನೆ ಸಿಕ್ಕಿರುವುದು ಸಂತಸ ತಂದಿದೆ. ಏಳು ವರ್ಷದ ಕೆಳಗಿನ ಕ್ಯಾಟಗರಿಯಿಂದ ಹಿಡಿದು ಹಿರಿಯರ ತನಕ ಬೇರೆ ಬೇರೆ ವಯೋಮಾನದವರು ಭಾಗವಹಿಸಿ ಕ್ರೀಡಾ ಸ್ಫೂರ್ತಿಯನ್ನು ಮೆರೆದಿರುವುದು ಉತ್ತಮ ಸಂಗತಿ. ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ನಡೆಸುವ ಯಾವುದೇ ಕ್ರೀಡಾಕೂಟ ಬಹಳ ಶಿಸ್ತುಬದ್ಧವಾಗಿ ನಡೆಯುತ್ತದೆ. ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲು ಶ್ರಮಿಸಿದ ಸರ್ವರಿಗೂ ಅಭಿನಂದನೆಗಳು. ನಮ್ಮ ಸಂಸ್ಥೆಯ ಸಹಕಾರ ಎಂದಿನಂತೆ ಯಾವತ್ತೂ ಇರಲಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ, ರಾಜ್ಯ ಮಾಧ್ಯಮ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿ, ಮಾಧ್ಯಮಗಳಲ್ಲಿ ಕ್ರಿಕೆಟ್ ಆಟಕ್ಕೆ ಸಿಕ್ಕಿದಷ್ಟು ಪ್ರಾಶಸ್ತ್ಯ ಬೇರೆ ಆಟಕ್ಕೆ ಸಿಗುವುದಿಲ್ಲ ಎನ್ನುವ ಆಪಾದನೆಯ ಹೊರತಾಗಿಯೂ ಚೆಸ್ ನಂತಹ ಆಟಗಳಿಗೆ ಇಂತಹ ಪ್ರೋತ್ಸಾಹ ಸಿಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು. ಉದ್ಯಮಿ ನಾರಾಯಣ ಪೈ ಶುಭ ಹಾರೈಸಿದರು.

ಸಿಎ ಜಗನ್ನಾಥ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಲ್ಪಾಡಿ ನರೇಶ್ ಶೆಣೈ, ದೀಪಾ ಕಾಮತ್, ಚೇತನ್ ಕಾಮತ್, ಪ್ರವೀಣ್ ಕಾಮತ್, ಸಿದ್ಧಾರ್ಥ್ ಪ್ರಭು ಹಾಗೂ ಗಣ್ಯರು ಉಪಸ್ಥಿತರಿದ್ದರು. ನಾಗೇಂದ್ರ ಶೆಣೈ ನಿರೂಪಿಸಿದರು.

0
Shares
  • Share On Facebook
  • Tweet It




Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
Tulunadu News June 16, 2026
Najlepsze bonusy i sloty w polskim kasynie online
Tulunadu News May 29, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ

  • Privacy Policy
  • Contact
© Tulunadu Infomedia.

Press enter/return to begin your search