ಬಸ್ ಕಂಡಕ್ಟರ್ ಗೆ ಚಾಕು ಹಾಕಿದವನ ಕಾಲಿಗೆ ಶೂಟ್ ಮಾಡಿ ಬಂಧಿಸಿದ ಯುಪಿ ಪೊಲೀಸರು

ಬಸ್ ಟಿಕೆಟ್ ದರದ ವಿಷಯದಲ್ಲಿ ಗಲಾಟೆ ನಡೆದು ಲಾರೆಬ್ ಹಶ್ಮಿ ಎನ್ನುವ ಇಂಜಿನಿಯರಿಂಗ್ ವಿದ್ಯಾರ್ಥಿ ಬಸ್ ನಿರ್ವಾಹಕನಿಗೆ ತನ್ನಲ್ಲಿದ್ದ ಆಯುಧದಿಂದ ದಾಳಿ ಮಾಡಿದ್ದ. ಇದರಿಂದ ಕಂಡಕ್ಟರ್ ಹರಿಕೇಶ್ ವಿಶ್ವಕರ್ಮನ ಕುತ್ತಿಗೆ ಮತ್ತು ದೇಹದ ಭಾಗಗಳ ಮೇಲೆ ಗಾಯಗಳಾಗಿ ಆತ ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ದಾಳಿ ನಡೆದ ಕೂಡಲೇ ಬಸ್ಸಿನಿಂದ ಓಡಿ ತಪ್ಪಿಸಿಕೊಂಡ ಲಾರೆಬ್ ತನ್ನ ಕಾಲೇಜಿನ ಕ್ಯಾಂಪಸ್ ಒಳಗೆ ಹೋಗಿ ಅಡಗಿಕುಳಿತುಕೊಂಡಿದ್ದ. ಆ ಬಳಿಕ ಅಲ್ಲಿಂದಲ್ಲೇ ವಿಡಿಯೋ ಮಾಡಿ ” ಆತ ಮುಸಲ್ಮಾನರನ್ನು ಅವಹೇಳನ ಮಾಡಿದ್ದಕ್ಕೆ ಹಲ್ಲೆ ಮಾಡಿದೆ. ಅವನು ಸಾಯಬೇಕು” ಹೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಉತ್ತರ ಪ್ರದೇಶದ ಪೊಲೀಸರು ಆರೋಪಿಯನ್ನು ಹುಡುಕುತ್ತಿದ್ದರು.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಈ ಘಟನೆಯ ಬಗ್ಗೆ ಅನೇಕರು ತೀವ್ರ ಅಸಮಾಧಾನ ಹೊಂದಿದ್ದರು. ಭೀಕರವಾಗಿ ಹಲ್ಲೆ ಮಾಡಿದ್ದಲ್ಲದೇ, ವಿಡಿಯೋ ಮಾಡಿ, ಅದರಲ್ಲಿ ಕೊನೆಗೆ ಹಲ್ಲೆಗೆ ಬಳಸಿದ ಆಯುಧ ತೋರಿಸಿ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯ ಮತಾಂಧತೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿತ್ತು. ಅಷ್ಟರಲ್ಲಿ ಪೊಲೀಸರು ಅವನ ಬಂಧನಕ್ಕೆ ಬಲೆ ಬೀಸಿದ್ದರು. ಅವನು ಪೊಲೀಸರು ಬಂಧಿಸಲು ಬಂದಾಗ ತಪ್ಪಿಸಿಕೊಳ್ಳಲು ಯತ್ನಿಸಿದ. ಈ ಹಂತದಲ್ಲಿ ಅವನ ಕಾಲಿಗೆ ಶೂಟ್ ಮಾಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹಶ್ಮಿ ತಂದೆ ಮೊಹಮ್ಮದ್ ಯೂನಸ್ ಪ್ರಯಾಗ್ ರಾಜ್ ನಗರದಲ್ಲಿ ಕೋಳಿ ಫಾರಂ ಉದ್ಯಮ ನಡೆಸುತ್ತಿದ್ದಾರೆ.
Leave A Reply