ದಿಶಾ ಸಾಲಿಯಾನ್ ಅನುಮಾನಾಸ್ಪದ ಸಾವಿಗೆ ಮರುಜೀವ ನೀಡಿದ ಸರಕಾರ!
ಮಹಾರಾಷ್ಟ್ರದ ಮುಂಬೈ ಪೊಲೀಸ್ ವಿಶೇಷ ತನಿಖಾ ದಳ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯಾನ್ ಅವರ ಅನುಮಾನಾಸ್ಪದ ಸಾವಿನ ತನಿಖೆಗೆ ಮರುಜೀವ ನೀಡಿದೆ. ದಿಶಾ ಸಾಲಿಯಾನ್ ಅವರು ಸುಶಾಂತ್ ಆತ್ಮಹತ್ಯೆಗೆ ಶರಣಾದ ಹಿಂದಿನ ದಿನವಷ್ಟೇ ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದರು.
28 ವರ್ಷದ ಆಕರ್ಷಕ ನಿಲುವಿನ ಸುಂದರಿ ದಿಶಾ 2020 ರ ಜೂನ್ 8 ರಂದು 12 ನೇ ಮಹಡಿಯಿಂದ ಬಿದ್ದು ಸಾವನ್ನು ಅಪ್ಪಿದ್ದರು ಎಂದು ವರದಿಯಾಗಿತ್ತು. ಈ ಸಾವು ಆಕಸ್ಮಿಕ ಅಲ್ಲ, ಇದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ ಎಂದು ಭಾರತೀಯ ಜನತಾ ಪಾರ್ಟಿಯ ಶಾಸಕ ನಿತೇಶ್ ರಾಣೆಯವರು ಆಗ್ರಹಿಸಿದ ಬಳಿಕ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಗೃಹಸಚಿವರಾದ ದೇವೇಂದ್ರ ಪಡ್ನವೀಸ್ ಅವರು ಎಸ್ ಐಟಿ ತನಿಖೆಗೆ ಆದೇಶಿಸಿದ್ದಾರೆ.
ಎಸಿಪಿ ರಾಜೀವ್ ಜೈನ್ ಅವರು ತನಿಖಾ ತಂಡದ ಮುಖ್ಯಸ್ಥರಾಗಿದ್ದು, ಅವರ ತಂಡ ದಿಶಾ ಮರಣ ಹೊಂದಿದ ಫ್ಲಾಟಿಗೆ ತೆರಳಿ ತನಿಖೆಯನ್ನು ಮತ್ತೆ ಆರಂಭಿಸಿದೆ. ಈ ಪ್ರಕರಣದ ಅಂಗವಾಗಿ ದಿಶಾ ಪೋಷಕರನ್ನು ಕೂಡ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದ್ದು, ದಿಶಾ ತಂದೆ ಮಾತ್ರ ಈಗಾಗಲೇ ತನಿಖೆ ನಡೆದು ಮುಚ್ಚಿ ಹೋಗಿರುವ ಪ್ರಕರಣವನ್ನು ಮತ್ತೆ ತೆರೆಯುವ ಮೂಲಕ ಏನು ಸಾಧಿಸಿದಂತೆ ಆಗುತ್ತದೆ ಎನ್ನುವ ಅರ್ಥದ ಮಾತುಗಳನ್ನು ಆಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಆದಿತ್ಯ ಠಾಕ್ರೆಯವರ ಹೆಸರು ಕೂಡ ತಳುಕು ಹಾಕಿರುವ ಹಿನ್ನಲೆಯಲ್ಲಿ ಈ ಪ್ರಕರಣದ ನಿಜಾಂಶ ಜನರಿಗೆ ತಿಳಿಯಬೇಕಾಗಿದೆ. ಇನ್ನು ದಿಶಾ ಸಾಲ್ಯಾನ್ ಕೇಸಿನ ಬಗ್ಗೆ ಸತ್ಯ ಹೊರಬರಬೇಕಾದರೆ ಆದಿತ್ಯ ಠಾಕ್ರೆ ನಾರ್ಕೋ ಟೆಸ್ಟಿಗೆ ಒಳಗಾಗಬೇಕು ಎಂದು ನಿತೀಶ್ ರಾಣೆ ಆಗ್ರಹಿಸಿದ್ದಾರೆ.
Leave A Reply