ಭಾರತದಲ್ಲಿ ಚಾಲಕ ರಹಿತ ಕಾರುಗಳಿಗೆ ಪ್ರವೇಶ ಇಲ್ಲ, ಯಾಕೆ?
ಭಾರತದಲ್ಲಿ ಚಾಲಕರಹಿತ ಕಾರುಗಳಿಗೆ ಮಾರುಕಟ್ಟೆ ಒದಗಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಭಾರತದಂತಹ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಭವಿಷ್ಯದಲ್ಲಿ ಚಾಲಕರಿಲ್ಲದ ಕಾರುಗಳನ್ನು ರಸ್ತೆಯ ಮೇಲೆ ಇಳಿಸಲು ಅನುಮತಿ ನೀಡಿದರೆ ನಿರುದ್ಯೋಗ ಸಮಸ್ಯೆ ಬಿಗಡಾಯಿಸುವ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.
ಇದರಿಂದ ಆಗುವ ಲಾಭ ನಮ್ಮ ದೇಶಕ್ಕೆ ಹೇಳಿದ್ದಲ್ಲ, ಜನಸಂಖ್ಯೆ ಅತ್ಯಂತ ಕಡಿಮೆ ದೇಶಗಳಲ್ಲಿ ಚಾಲಕರಹಿತ ವಾಹನ ವರದಾನವಾಗಬಹುದು. ಆದರೆ ನಮ್ಮಲ್ಲಿ ಹಾಗೆ ಮಾಡಿದರೆ ಸುಮಾರು 80 ಲಕ್ಷ ಚಾಲಕರಿಗೆ ಜೀವನದ ಪ್ರಶ್ನೆ ಉದ್ಭವಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ” ನಾನು ಅಮೇರಿಕಾದಲ್ಲಿಯೇ ಈ ವಿಷಯವನ್ನು ಒತ್ತಿ ಹೇಳಿದ್ದೇನೆ. ನಮ್ಮಲ್ಲಿ ದೇಶದ ಜನಸಂಖ್ಯೆಯಲ್ಲಿ ಚಾಲನೆ ಬಹಳ ದೊಡ್ಡ ಉದ್ಯೋಗ, ಸೇವಾ ಕ್ಷೇತ್ರ. ನಾವು ಚಾಲಕರಹಿತ ವಾಹನಗಳಿಗೆ ಪ್ರೋತ್ಸಾಹ ನೀಡಿದರೆ ಚಾಲಕರ ಬದುಕುವ ಹಕ್ಕನ್ನೇ ಕಸಿದುಕೊಂಡಂತೆ ಆಗುತ್ತದೆ” ಎಂದು ಹೇಳಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೆ ಚಾಲಕರಹಿತ ವಾಹನ ನಮ್ಮ ದೇಶದಲ್ಲಿ ಅನುಮತಿ ನೀಡುವ ಯಾವುದೇ ಚಿಂತನೆ ಇಲ್ಲ ಎಂದು ಅವರು ಹೇಳಿದ್ದಾರೆ.
Leave A Reply