ಬಿಜೆಪಿ ಹಾದಿಯಲ್ಲಿ ಕಾಂಗ್ರೆಸ್, ಕಚೇರಿ ಸ್ಥಳಾಂತರಕ್ಕೆ ನಿರ್ಧಾರ!

ವಾಸ್ತು ಬದಲಾವಣೆಯಿಂದ ಕೆಲವೊಮ್ಮೆ ಪವಾಡಗಳು ಕೂಡ ನಡೆಯುವುದುಂಟು. ಲೋಕಸಭೆ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷ ತನ್ನ ಅಖಿಲ ಭಾರತ ಕಾಂಗ್ರೆಸ್ ಕಚೇರಿಯನ್ನು ಬದಲಾಯಿಸಲು ಚಿಂತನೆ ನಡೆಸಿದೆ. ಪ್ರಸ್ತುತ ನವದೆಹಲಿಯ ಅಕ್ಬರ್ ರಸ್ತೆ – 24, ಸೌತ್ ಬ್ಲಾಕ್, ಮಾನಸಿಂಗ್ ರಸ್ತೆಯಲ್ಲಿರುವ ಎಐಸಿಸಿ ಕಚೇರಿಯು 2024 ರ ಜನವರಿ ಎರಡನೇ ವಾರದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿದೆ. ಹೊಸ ಪ್ರಧಾನ ಕಚೇರಿಯನ್ನು ಇಂದಿರಾ ಭವನ ಎಂದು ಕರೆಯಲಾಗುತ್ತದೆ.
ಈಗಾಗಲೇ ಭಾರತೀಯ ಜನತಾ ಪಾರ್ಟಿಯ ಕೇಂದ್ರ ಕಚೇರಿ ದೀನ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಅತ್ಯಾಧುನಿಕ ಸ್ಪರ್ಶ ಮತ್ತು ವಿಶಾಲವಾದ ಕಟ್ಟಡವಾಗಿದ್ದು 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇದನ್ನು ಉದ್ಘಾಟಿಸಿದ್ದರು. ಚುನಾವಣೆಗಳ ಫಲಿತಾಂಶದ ದಿನದಂದು ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಅಮಿತ್ ಶಾ, ರಾಜನಾಥ್ ಸಿಂಗ್ ಸಹಿತ ಪ್ರಮುಖರು ಈ ಕಚೇರಿಯ ಮೇಲೆ ವೇದಿಕೆಯಾಕಾರದ ಜಾಗದಲ್ಲಿ ನಿಂತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವುದನ್ನು ಟಿವಿಯಲ್ಲಿ ನೋಡಿರಬಹುದು. ಅದು 1.70 ಲಕ್ಷ ಚದರ ಅಡಿಯಲ್ಲಿ ವಿಸ್ತ್ರೀರ್ಣ ಹೊಂದಿದೆ.
ಈಗ ಅದೇ ರಸ್ತೆಯಲ್ಲಿ ಕಾಂಗ್ರೆಸ್ ಕಚೇರಿ ಕೂಡ ನಿರ್ಮಾಣ ಹಂತದಲ್ಲಿದ್ದು ಬಹುತೇಕ ಪೂರ್ಣಗೊಂಡಿದೆ. ನೂತನ ಕಾಂಗ್ರೆಸ್ ಕಚೇರಿ 6 ಮಹಡಿಗಳನ್ನು ಹೊಂದಿದ್ದು, ಎಲ್ಲಾ ಆಧುನಿಕ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಪ್ರಸ್ತುತ ಇರುವ ಕಾಂಗ್ರೆಸ್ ಕಚೇರಿಯನ್ನು 1978 ರಲ್ಲಿ ಇಂದಿರಾ ಗಾಂಧಿ ನಿರ್ಮಿಸಿದ್ದರು. 44 ವರ್ಷಗಳ ಬಳಿಕ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಕಚೇರಿ ಸ್ಥಳಾಂತರಗೊಳ್ಳಲಿದೆ.
Leave A Reply