ರಾಮ ಪ್ರತಿಷ್ಠೆ ನಡೆಯುವಾಗ ಗರ್ಭಗುಡಿಯೊಳಗೆ ಯಾರೆಲ್ಲಾ ಇರುತ್ತಾರೆ, ಗೊತ್ತಾ?

2024 ರ ಜನವರಿ 22 ಭಾರತೀಯರ ಪಾಲಿಗೆ ಬಹಳ ಪ್ರಮುಖವಾಗಿರುವ ದಿನ. ಅಂದು 500 ವರ್ಷ ಯಾವ ಕಾರಣಕ್ಕೆ ಸನಾತನಿಗಳು ಹೋರಾಟ ಮಾಡಿದರೋ ಅದರ ಫಲ ಕಾಣುವ ಸಮಯ. ಭಗವಂತ ಶ್ರೀ ರಾಮಚಂದ್ರ ಜನ್ಮ ತಾಳಿದ ಪುಣ್ಯಭೂಮಿ ಅಯೋಧ್ಯೆಯಲ್ಲಿ ಅಂದು ಭವ್ಯ ಮಂದಿರ ಲೋಕಾರ್ಪಣೆಗೊಳ್ಳಲಿರುವ ಶುಭ ದಿನ. ರಾಮಚಂದ್ರ ದೇವರ ಪ್ರಾಣಪ್ರತಿಷ್ಟೆ ಮತ್ತು ಇದರ ಧಾರ್ಮಿಕ ವಿಧಿವಿಧಾನಗಳು ಅಂದು ನಡೆಯಲಿವೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹಿತ ದೇಶದ ಸುಮಾರು 6 ಸಾವಿರದಿಂದ 7 ಸಾವಿರದ ತನಕ ಗಣ್ಯಾತೀಗಣ್ಯರು ಈ ದಿನದಂದು ಅಯೋಧ್ಯೆಯಲ್ಲಿ ಈ ಐತಿಹಾಸಿಕ ಘಳಿಗೆಗೆ ಸಾಕ್ಷಿಯಾಗಲಿದ್ದಾರೆ.
ಎಲ್ಲರೂ ಈ ದೇವಸ್ಥಾನದ ಆವರಣದಲ್ಲಿ ಮತ್ತು ಪ್ರಾಂಗಣದಲ್ಲಿ ಉಪಸ್ಥಿತರಿದ್ದರೆ ಪ್ರಾಣ ಪ್ರತಿಷ್ಟೆ ಆಗುವ ಗರ್ಭಗುಡಿಯೊಳಗೆ ಯಾರೆಲ್ಲ ಹೋಗಬಹುದು ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ. ಯಾರಿಗೆಲ್ಲಾ ಗರ್ಭಗುಡಿಯೊಳಗೆ ಪ್ರವೇಶ ಇದೆ ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಮತ್ತು ಪ್ರಮುಖ ಪುರೋಹಿತರು ಗರ್ಭಗುಡಿಯೊಳಗೆ ಹೋಗಲಿದ್ದಾರೆ. ಪ್ರಾಣ ಪ್ರತಿಷ್ಟೆ ನಡೆಯುವಾಗ ಗರ್ಭಗುಡಿಗೆ ಪರದೆ ಎಳೆಯಲಾಗುತ್ತದೆ.
ಅಯೋಧ್ಯೆಯ ಹೋರಾಟದಲ್ಲಿ ಪ್ರಾಣಾರ್ಪಣೆಗೈದ ಕೊಠಾರಿ ಸಹೋದರರ ಸಹಿತ ಎಲ್ಲಾ ಹೋರಾಟಗಾರರ ಕುಟುಂಬಗಳಿಗೆ ವಿಶೇಷ ಗೌರವ ನೀಡಲು ಅಯೋಧ್ಯೆ ಶ್ರೀ ರಾಮಜನ್ಮಭೂಮಿ ಟ್ರಸ್ಟ್ ನಿರ್ಧರಿಸಿದೆ. ಈ ಹೋರಾಟದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಒಂದು ಸ್ಮಾರಕ ರಚಿಸಲಾಗುವುದು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
Leave A Reply