ಸೋಮೇಶ್ವರ ಪುರಸಭೆಯ ಫಲಿತಾಂಶ ಪ್ರಕಟ

ಉಳ್ಳಾಲ: ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿದ್ದ ಸೋಮೇಶ್ವರ ಪುರಸಭೆಯಾಗಿ ಮೇಲ್ದಜೆರಗೇರಿದ ಬಳಿಕ ಪ್ರಥಮ ಚುನಾವಣೆ ಡಿಸೆಂಬರ್ 27ರಂದು ನಡೆಯಿತ್ತು. ಶಾಂತಿಯುತವಾಗಿ ಉತ್ಸಾಹದಿಂದ ಮತದಾನದ ಪ್ರಕ್ರಿಯೆಯಲ್ಲಿ ಮತದಾರರು ಪಾಲ್ಗೊಂಡಿದ್ದರು.
23 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 50 ಅಭ್ಯರ್ಥಿಗಳು (25 ಪುರುಷ ಅಭ್ಯರ್ಥಿಗಳು, 25 ಮಹಿಳಾ ಅಭ್ಯರ್ಥಿಗಳು)ಕಣದಲ್ಲಿದ್ದು, 23 ಮತದಾನ ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು.
ಗ್ರಾಮ ಪಂಚಾಯತ ಅವಧಿಯಲ್ಲಿ 30 ವರುಷಗಳ ಕಾಲ ಬಿಜೆಪಿ ಪ್ರಾಬಲ್ಯವಿದ್ದ ಸೋಮೇಶ್ವರದಲ್ಲಿ, ಎಲ್ಲಾ 23 ಸ್ಥಾನಗಳಿಗೆ ಬಿಜೆಪಿ ಸ್ಪರ್ಧಿಸಿದರೆ, ಕಾಂಗ್ರೆಸ್ 22 ಸ್ಥಾನಗಳಿಗೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ಇದೀಗಾ ಫಲಿತಾಂಶ ಹೊರಬಿದ್ದಿದ್ದು,17 ವಾರ್ಡು ಪರಿಯತ್ತೂರು ಕೊಲ್ಯ ಪುರುಷೋತ್ತಮ್ ಗಟ್ಟಿ, ವಾಡ್9 ನಂಬರ್ 9 ಕಾಂಗ್ರೆಸ್ ನ ಪರ್ವೀನ್ ಶಾಜಿದ್,ವಾಡ್9 1 ಕಾಂಗ್ರೆಸ್ನ ಹಾಮಿನ ಬಶೀರ್,ವಾರ್ಡ್ 18 ಬಿಜೆಪಿಯ ರವಿಶಂಕರ್ ಸೋಮೇಶ್ವರ, ವಾರ್ಡ್ 2 ಬಿಜೆಪಿಯ ಯಶವಂತ್, ವಾರ್ಡ್ 3 ಬಿಜೆಪಿಯ ಸಪ್ನಾ ಶೆಟ್ಟಿ,ವಾರ್ಡ್ 11 ಬಿಜೆಪಿಯ ಹರೀಶ್ ಕುಂಪಲ,ವಾರ್ಡ್ 19 ಕಾಂಗ್ರೆಸ್ಸಿನಯ ಪ್ರಿಯ ಜಗದೀಶ್, ಕುಜುಮಗದ್ದೆ ವಾಡ್9 ನಂಬರ್ 12 ಬಿಜೆಪಿಯ ಸುಗಂಧಿ,ವಾಡ್9 20 ಕಾಂಗ್ರೆಸ್ ನ ಅಬ್ದುಲ್ ಸಲಾಂ,ವಾಡ್9 21 ಕಾಂಗ್ರೆಸ್ ನ ರಮ್ಲತ್ ಸಲಾಂ,ವಾರ್ಡ್ 19 ಬಿಜೆಪಿಯ ಶ್ರೀಲತಾ ದಿನೇಶ್ ಗಟ್ಟಿ, ವಾರ್ಡ್ 15 ಬಿಜೆಪಿಯ ಅಮಿತಾ, ವಾಡ್9 18 ಕಾಂಗ್ರೆಸ್ಸಿನ ತಾಹಿರಾ,ವಾಡ್9 ನಂಬರ್ 8 ಬಿಜೆಪಿಯ ಮೋಹನ್ ಶೆಟ್ಟಿ,ವಾಡ್9 ನಂ.23 ಬಿಜೆಪಿಯ ಜಯಶ್ರೀ,ವಾಡ್9 ನಂ. 12 ಬಿಜೆಪಿಯ ಅನಿಲ್ ಕೊಲ್ಯ, ವಾರ್ಡ್ 5 ಬಿಜೆಪಿಯ ಜಯ ಪುಜಾರಿ,ವಾಡ್9 6 ಬಗಂಬಿಲದ ಮಾಲತಿ ನಾಯ್ಕ್ ಜಯ ಸಾಧಿಸಿದ್ದಾರೆ.
ಒಟ್ಟು ಬಿಜೆಪಿಯ 16 ಅಭ್ಯರ್ಥಿಗಳು ಜಯಸಾಧಿಸಿದ್ದರೆ. ಕಾಂಗ್ರೆಸ್‌ನ 7 ಅಭ್ಯರ್ಥಿಗಳು ಗೆಲುವನ್ನು ಸಾದಿಸಿದ್ದಾರೆ.
Leave A Reply