• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅಯೋಧ್ಯಾ ರೈಲ್ವೆ ನಿಲ್ದಾಣವನ್ನು ಲೈಟಿಂಗ್ ಮೂಲಕ ಅಲಂಕರಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯವರು!

Tulunadu News Posted On January 18, 2024
0


0
Shares
  • Share On Facebook
  • Tweet It

ಅಯೋಧ್ಯಾ ರೈಲ್ವೆ ನಿಲ್ದಾಣವನ್ನು ಲೈಟಿಂಗ್ ಮೂಲಕ ಅಲಂಕರಿಸಿದ ಮೂಡಬಿದ್ರೆಯ ಲೆಕ್ಸಾ ಲೈಟಿಂಗ್ ಸಂಸ್ಥೆ.
ಸ್ಪೆಷಲೈಸ್ಡ್ ಲೈಟಿಂಗ್ ನಲ್ಲಿ ಹೆಸರುವಾಸಿಯಾದ ಮೂಡಬಿದ್ರೆಯ ಲೆಕ್ಸಾ ಲೈಟಿಂಗ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಉತ್ತರ ಪ್ರದೇಶದ ಅಯೋಧ್ಯಾ ರೈಲ್ವೆ ನಿಲ್ದಾಣದಲ್ಲಿ ಸುಮಾರು 300 ಕ್ಕೂ ಅಧಿಕ RGBW ಕಲರ್ ಲೈಟ್ ಗಳನ್ನು ತಯಾರಿಸಿ ಅಳವಡಿಸುವ ಮೂಲಕ ಲಕ್ಷಾನುಲಕ್ಷ ಬಣ್ಣಗಳನ್ನು ದಿನಕ್ಕೊಂದರಂತೆ ಪ್ರದರ್ಶಿಸಿ ಪ್ರವಾಸಿಗರನ್ನು ಕಣ್ಮನಸೆಳೆಯಲು ಸಿದ್ಧವಾಗಿದೆ.

ಜಪಾನೀಸ್ ಉತ್ಪಾದನಾ ವ್ಯವಸ್ಥೆಯನ್ನು ಅಳವಡಿಸಿಕೊಂಡು ಪ್ರಾರಂಭವಾದ ಈ ಉದ್ಯಮ ಪ್ರಸ್ತುತ 250 ಕ್ಕೂ ಅಧಿಕ ಉತ್ಸಾಹಿ ಸ್ಥಳೀಯ ಪ್ರತಿಭೆಗಳಿಂದ ಬೆಳಗುತ್ತಿದೆ ಎಂದರೆ ಬಹುಶಃ ಅತಿಶಯೋಕ್ತಿ ಆಗದು.

ಭಾರತೀಯ ಲೈಟಿಂಗ್ ಉತ್ಪಾದನ ಸಂಸ್ಥೆಯಾದ ಲೆಕ್ಸಾ ಲೈಟಿಂಗ್ ಮೇಕ್ ಇನ್ ಇಂಡಿಯಾ ತತ್ವವನ್ನು ಸಾಕಾರಗೊಳಿಸುತ್ತಿದೆ.
ಸಂಶೋಧನೆ ಮತ್ತು ಅಭಿವೃದ್ಧಿ, ಪರಿಕಲ್ಪನೆ, ಕಚ್ಚಾ ವಸ್ತುಗಳನ್ನು ಪಡೆಯುವುದು, ಯೋಜನೆ, ವಿನ್ಯಾಸ, ಉತ್ಪಾದನೆ ಮತ್ತು ವಿತರಣೆ ಎಂಬ ಪರಿಕಲ್ಪನೆಯ ಆಧಾರದಲ್ಲಿ 500 ಕ್ಕೂ ಅಧಿಕ ವಿಶೇಷ ಬೆಳಕಿನ ಉತ್ಪನ್ನಗಳನ್ನು ಉತ್ಪಾದಿಸಿ ಭಾರತದ ಪ್ರಮುಖ ಬ್ರಾಂಡ್ ಆಗಿ ಹೊರಹೊಮ್ಮುತ್ತಿದೆ.

ಲೆಕ್ಸಾ ಸಂಸ್ಥೆಯ ಗರಿಮೆಗೆ ಸಾರಥಿಯಾದ ಶ್ರೀ ರೊನಾಲ್ಡ್ ಸಿಲ್ವನ್ ಡಿಸೋಜ ಅವರಿಗೆ ಆತ್ಮನಿರ್ಭರ ಭಾರತ ಅವಾರ್ಡ್, ಹೈ ಪ್ಲೈಯರ್ಸ್ ಗ್ಲೋಬಲ್ ಇಂಡಿಯನ್ಸ್ ಅವಾರ್ಡ್ , ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ವ ಪ್ರಶಸ್ತಿ ಹಾಗು ಇನ್ನೂ ಅನೇಕ ಗೌರವಗಳು ದೊರಕಿದೆ.

ಕೆಲವೇ ದಿನಗಳ ಹಿಂದೆ ಲೆಕ್ಸಾ ಸಂಸ್ಥೆಯೂ ಕರ್ನಾಟಕದ ಸುವರ್ಣ ವಿಧಾನ ಸೌಧವನ್ನು ಲೈಟಿಂಗ್ ಮೂಲಕ ಅಲಂಕರಿಸಿ ಹೆಸರುವಾಸಿಯಾಗಿದೆ ಹಾಗೂ ದೇಶ ವಿದೇಶಗಳಲ್ಲಿ ಅನೇಕ ಕೆಲಸಗಳನ್ನು ಯಶಸ್ವಿಯಾಗಿ ಪೂರೈಸಿದೆ ಮತ್ತು ಈ ಎಲ್ಲಾ ಸಾಧನೆಗಳ ಪಟ್ಟಿಗೆ ಹೆಚ್ಚುವರಿಯಾಗಿ ಅಯೋಧ್ಯೆಯ ಶ್ರೀ ರಾಮ ಮಂದಿರವನ್ನು ತಲುಪಲು ಪ್ರಮುಖ ಸಾರಿಗೆ ವಿಧಾನವಾದ ಅಯೋಧ್ಯಾ ರೈಲ್ವೆ ನಿಲ್ದಾಣವನ್ನು ಲೈಟಿಂಗ್ ಮೂಲಕ ಅಲಂಕೃತಗೊಳಿಸಿ ಇನ್ನೊಂದು ಮೈಲಿಗಲ್ಲನ್ನು ತನ್ನದಾಗಿಸಿಕೊಂಡಿದೆ.

0
Shares
  • Share On Facebook
  • Tweet It




Trending Now
ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
Tulunadu News March 11, 2026
ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
Tulunadu News March 11, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
    • ಇರಾನ್ ನಾಯಕ‌ ಅಲಿ ಖಮೇನಿ ಆತ್ಮಕ್ಕೆ ಶಾಂತಿ ಕೋರಿದ ಸಿಎಂ ಸಿದ್ದರಾಮಯ್ಯ
    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
  • Popular Posts

    • 1
      ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • 2
      ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • 3
      ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!

  • Privacy Policy
  • Contact
© Tulunadu Infomedia.

Press enter/return to begin your search