ಉತ್ಸಾಹ, ಸಾಹಸ ಹಾಗೂ ಧೈರ್ಯವಿಲ್ಲದೆ ಸಾಗರದಾಳಕ್ಕೆ ಇಳಿಯಲು ಸಾಧ್ಯವಿಲ್ಲ!
ಭೀಮನಿಂದ ಹಿಡಿದು ಶಿವಾಜಿಯ ತನಕ, ವಿದುರನಿಂದ ಹಿಡಿದು ಸಾವರ್ಕರ್ ತನಕ ಎಲ್ಲರೂ ಕೃಷ್ಣನ ಆದರ್ಶವನ್ನು ಬೆಳೆಸಿಕೊಂಡ ಪರಿಣಾಮದಿಂದಲೇ ರಾಷ್ಟ್ರಭಕ್ತಿ ,ಹಾಗೂ ಧರ್ಮ ಪ್ರಜ್ಞೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡದ್ದು.
ಪರಮ ಧಾರ್ಮಿಕನಾದಂತಹ ರಾಜನು ದೇಶವನ್ನು ಆಳುತ್ತಿದ್ದನು. ದೇವರು,ಧರ್ಮ,ನ್ಯಾಯ, ನಿಷ್ಠೆ ,ನೀತಿ, ರೀತಿ ಇತ್ಯಾದಿಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿರುವ ರಾಜ ರಾಜ್ಯವನ್ನು ಶ್ರೀಮಂತವಾಗಿಸಿದ್ದನು. ಇಂತಹ ಮಾತುಗಳನ್ನು ನಾವು ಕೇಳಿದ್ದೆವು. ಆದರೆ ಇವತ್ತು ಮೋದಿಯ ಆಡಳಿತದಲ್ಲಿ ಇದನ್ನು ಅನುಭವಿಸುತ್ತಿದ್ದೇವೆ. ಈಗಿನ ರಾಜಕೀಯದ ಚತುರಂಗದಾಟದಲ್ಲಿ ತನ್ನ ಧರ್ಮವನ್ನು ಧೈರ್ಯವಾಗಿ ಆಚರಿಸುವುದಕ್ಕೆ ಎದೆಗಾರಿಕೆ ಬೇಕೇ ಬೇಕು. ಒಂದು ಸಣ್ಣ ಮಾತಾಡಿದರೂ ಕೂಡ ಎಲ್ಲಿ ವೋಟು ತಪ್ಪುತ್ತದೆಯೋ ಸೀಟು ತಪ್ಪುತ್ತದೆಯೋ ಎಂದು ಮೈ ಪರಚಿಕೊಳ್ಳುವವರ ನಡುವೆ ಮೋದಿ ಒಂದು ವಿಶಿಷ್ಟ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಸಮುದ್ರದ ಸ್ವಲ್ಪ ಭಾಗವನ್ನು ದಾಟಿದರೆ ಬೇಟ್ ದ್ವಾರಕೆ ಎನ್ನುವಂತಹ ಸ್ಥಳ ನಮಗೆ ದ್ವಾರಕೆಯಲ್ಲಿ ಸಿಗುತ್ತದೆ. ಅಲ್ಲಿ ಮತೇತರರ ನಡುವೆ ಶ್ವಾಸ ಕಟ್ಟಿಕೊಂಡು ಕೃಷ್ಣ ಬದುಕುತ್ತಿದ್ದಾನೆ. ದ್ವಾರಕೆಗೆ ಹೋದವರೆಲ್ಲ ಅಲ್ಲಿಗೆ ಹೋಗಿ ಆ ಮಂದಿರದಲ್ಲಿ ನಿಂತಿರುವ ಕೃಷ್ಣನಿಗೆ ಕೈ ಮುಗಿದು ಬರುತ್ತಾರೆ. ಆದರೆ ಅದಕ್ಕಿಂತಲೂ ಮಿಗಿಲಾದ ಒಂದು ಸ್ಥಳ ಕೃಷ್ಣನಿಗೆ ಸಂಬಂಧಪಟ್ಟದ್ದು ಸಮುದ್ರದ ಒಳಗಿದೆ ಎನ್ನುವುದು ಪ್ರಾಚ್ಯ ಇಲಾಖೆಗಳು ವರದಿಯನ್ನು ಕೊಟ್ಟಿದ್ದವು. ಕೃಷ್ಣನ ಅವತಾರ ಸಮಾಪ್ತಿಯ ಕಾಲದಲ್ಲಿ ಆತ ಕಟ್ಟಿದ ದ್ವಾರಕೆ ಸಮುದ್ರ ಪಾಲಾಯಿತು ಎನ್ನುವುದನ್ನು ಭಾಗವತ ಕೂಡ ಉಲ್ಲೇಖಿಸುತ್ತದೆ. ಪುರಾಣಗಳನ್ನು ಸುಳ್ಳಿನ ಕಂತೆ, ಗೊಡ್ಡು ಕಥೆ ಎಂದೆಲ್ಲಾ ಬೊಗಳಿ ನಮ್ಮನ್ನು ಬೆಳೆಸಿದ ಇತಿಹಾಸಕಾರರಿಗೆ ಇವತ್ತು ಆ ನಗರ ಸ್ಪಷ್ಟವಾಗಿ ಕಾಣುತ್ತಿದೆ. ಪುರಾಣದಲ್ಲಿ ದಾಖಲಾದ ವಿಚಾರಗಳು ಇವತ್ತು ಕೂಡ ಸ್ಪಷ್ಟವಾಗಿ ಕಣ್ಣ ಮುಂದೆ ಇದ್ದರೂ ಕೂಡ ವಿರೋಧಿಸುತ್ತಿದ್ದಾರೆಂದರೆ ಇವರು ತಾಯಿಯನ್ನು ಕೂಡ ವಿರೋಧಿಸಲು ಹೇಸುವುದಿಲ್ಲ.
ಭಾರತದ ಇತಿಹಾಸದಲ್ಲಿ ಈ ದೇಶವನ್ನು ಧರ್ಮಾಧಿಕಾರಿಯ ಛತ್ರದಡಿಯಲ್ಲಿ ನಿಲ್ಲಿಸಿದ ಇತಿಹಾಸ ಪುರುಷ ಶ್ರೀಕೃಷ್ಣ. ದೇಶಕ್ಕಾಗಿ ಅದಕ್ಕಿಂತಲೂ ತನ್ನ ಧರ್ಮಕ್ಕಾಗಿ ತನ್ನ ಜೀವನವನ್ನು ಸಮರ್ಪಿಸಿಕೊಂಡವ ಶ್ರೀ ಕೃಷ್ಣ. ಶ್ರೀ ಕೃಷ್ಣನ ಬಗ್ಗೆ ಈ ನೆಲದಲ್ಲಿ, ಈ ನೆಲದ ಪರಂಪರೆಯಲ್ಲಿ ಹುಟ್ಟಿದವರಿಗೆ ಆಸಕ್ತಿ ಇಲ್ಲದಿರಲು ಸಾಧ್ಯವೇ ಇಲ್ಲ. ಅಂತಹ ಕೃಷ್ಣ ಇವತ್ತು ಮತ್ತೊಬ್ಬರ ಅಧೀನದಲ್ಲಿದ್ದಾನೆ. ಆತ ಕಟ್ಟಿ ಬೆಳೆಸಿದ ನಾಡು ಸಮುದ್ರದೊಳಗೆ ಅಡಗಿ ಹೋಗಿದೆ. ಅಳಿದುಳಿದ ನೆಲ ಪರಕೀಯರ ದಾಳಿಗೆ ಒಳಗಾಗಿದೆ. ರಾಮನ ಮುಕ್ತಿ ಈ ದೇಶಕ್ಕೆ ಎಷ್ಟು ಅನಿವಾರ್ಯವೋ ಅದನ್ನು ಮೀರಿದ ಅನಿವಾರ್ಯತೆ ಕೃಷ್ಣನ ಮುಕ್ತಿಯಲ್ಲಿದೆ. ನಮ್ಮ ದೇಶ ನಮ್ಮ ಧರ್ಮ ಪುನರುತ್ಥಾನಗೊಳ್ಳಬೇಕಾದರೆ ಕೃಷ್ಣಪ್ರಜ್ಞೆಯೊಂದೇ ಜಾಗೃತವಾಗಬೇಕು. ಭೀಮನಿಂದ ಹಿಡಿದು ಶಿವಾಜಿಯ ತನಕ, ವಿದುರನಿಂದ ಹಿಡಿದು ಸಾವರ್ಕರ್ ತನಕ ಎಲ್ಲರೂ ಕೃಷ್ಣನ ಆದರ್ಶವನ್ನು ಬೆಳೆಸಿಕೊಂಡ ಪರಿಣಾಮದಿಂದಲೇ ರಾಷ್ಟ್ರಭಕ್ತಿ ,ಹಾಗೂ ಧರ್ಮ ಪ್ರಜ್ಞೆ ಎದ್ದು ಕಾಣುತ್ತದೆ.
ನಮ್ಮ ದೇಶದ ಪ್ರಧಾನಿಯೊಬ್ಬ ಇವತ್ತು ಕೃಷ್ಣನ ವಿನಮ್ರ ಭಕ್ತನಾಗಿ ಮಂದಿರಕ್ಕೆ ಹೋಗುವುದು ಬಿಡಿ, ಆತ ಕಟ್ಟಿ ಬೆಳೆಸಿದ ಸಮುದ್ರದಾಳದ ನಗರಕ್ಕೆ ಹೋಗಿ ಆತನನ್ನು ಕಂಡು ಪೂಜಿಸಿ ಆತನಿಗೆ ಇಷ್ಟವಾದದ್ದನ್ನು ಸಮರ್ಪಿಸಿ ಬರುತ್ತಿದ್ದಾನೆ ಎಂದರೆ ಮೋದಿಯ ಧರ್ಮ ಪ್ರಜ್ಞೆಗೆ ಸಾಟಿಯಾಗಲು ಸಾಧ್ಯವಿಲ್ಲ. ಕುಚೆಲನ ಅವಲಕ್ಕಿಗೆ ಪ್ರಸನ್ನನಾದ ಕೃಷ್ಣನಿಗೆ ಇದಕ್ಕಿಂತಲೂ ಮಿಗಿಲಾದ ಖುಷಿಯ ವಿಚಾರವಿರಲಿಕ್ಕಿಲ್ಲ. ಭಕ್ತನಾಗಿ ಯೋಗ್ಯತೆಯನ್ನು ಪಡೆದುಕೊಂಡರೆ ಭಗವಂತ ಬೇಕಾದಾಗ ತನ್ನ ಬಳಿ ಬೇಕಾದವರನ್ನು ಕರೆಸಿಕೊಳ್ಳುತ್ತಾನೆ ಎನ್ನುವುದಕ್ಕೆ ಇವತ್ತಿನ ಘಟನೆ ಜ್ವಲಂತ ಸಾಕ್ಷಿ.
ಉತ್ಸಾಹ, ಸಾಹಸ, ಧೈರ್ಯ, ಬುದ್ಧಿಶಕ್ತಿ, ಪರಾಕ್ರಮ, ಇವೆಲ್ಲ ಒಬ್ಬ ಸಾಧಕನಿಗೆ ಇರಬೇಕಾದ ಗುಣಗಳು. ಈ ಎಲ್ಲಾ ಗುಣಗಳನ್ನು ಇವತ್ತು ಮೋದಿಯವರು ಭಕ್ತನಾಗಿ, ದೇಶದ ರಾಜನಾಗಿ, ಒಬ್ಬ ಆದರ್ಶ ವ್ಯಕ್ತಿಯಾಗಿ ತೋರಿಸಿಕೊಟ್ಟಿದ್ದಾರೆ. 70ರ ಈ ಇಳಿ ವಯಸ್ಸಿನಲ್ಲಿ ಉತ್ಸಾಹ ಸಾಹಸ ಹಾಗೂ ಧೈರ್ಯವಿಲ್ಲದೆ ಸಾಗರದಾಳಕ್ಕೆ ಇಳಿಯಲು ಸಾಧ್ಯವಿಲ್ಲ. ದೇವಶಿಲ್ಪಿ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಈ ದ್ವಾರಕೆ ಮತ್ತೊಮ್ಮೆ ಶೋಭಿಸಲಿದೆ ಎನ್ನುವುದನ್ನು ಪುರಾಣದ ಮಾತುಗಳ ಮೂಲಕ ಸಮರ್ಥಿಸಬೇಕಾದರೆ ಎಲ್ಲಿ ಯಾವುದನ್ನು ಉಪಯೋಗಿಸಿಕೊಳ್ಳಬೇಕು ಎನ್ನುವುದು ಬುದ್ಧಿಶಕ್ತಿಯ ಪ್ರಧಾನ ಗುಣ. ತನ್ನ ಅನಿಸಿಕೆಗೆ ತಾನು ಬದ್ಧ ಹಾಗೂ ತನ್ನ ಧರ್ಮ ತನ್ನ ತತ್ವ ತನ್ನ ಜೀವನದ ಧ್ಯೇಯ ಎನ್ನುವುದನ್ನು ಧೈರ್ಯವಾಗಿ ಆಚರಿಸಿಕೊಳ್ಳಬೇಕಾದರೆ ಪರಾಕ್ರಮವಿಲ್ಲದೆ ಸಾಧ್ಯವಿಲ್ಲ. ಹೀಗೆ ಎಲ್ಲವನ್ನೂ ಒಮ್ಮೆಲೆ ತೋರಿಸುತ್ತಲೇ ಸಾಗುತ್ತಿರುವ ಮಹಾಪುರುಷ.
Leave A Reply