• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಮುಚ್ಚಿಹಾಕಿದ್ದ ಇತಿಹಾಸದ ಅಧ್ಯಾಯ `ರಜಾಕರ್´

Tulunadu News Posted On March 18, 2024
0


0
Shares
  • Share On Facebook
  • Tweet It

ಇತ್ತೀಚಿಗೆ ನಮ್ಮ ದೇಶದ ಸಿನಿಮಾರಂಗದಲ್ಲಿ ಇತಿಹಾಸ ಆಧಾರಿತ ಕಥೆಯನ್ನು ದೃಶ್ಯಕಾವ್ಯವನ್ನಾಗಿಸಿ ಪ್ರೇಕ್ಷಕರಿಗೆ ನೈಜ ಇತಿಹಾಸವನ್ನು ಹೇಳುವ ಪ್ರಯತ್ನ ನಡೆಯುತ್ತಲೇ ಬಂದಿದೆ. ವಿವೇಕ್ ಅಗ್ನಿಹೋತ್ರಿ ಯವರ `ದಿ ಕಾಶ್ಮೀರ್ ಫೈಲ್ಸ್’ ನಂತಹ ಸಿನಿಮಾ ಈ ಸಮಾಜದಲ್ಲಿ ಸಾಕಷ್ಟು ಬದಲಾವಣೆಗೆ ಕಾರಣವಾಗಿದೆ ಅಂದರು ತಪ್ಪಾಗದು.ಕೆಲವೊಂದು ರಾಜಕೀಯ ಹಿತಾಸಕ್ತಿಗಳ ಷಡ್ಯಂತ್ರದ ಭಾಗವಾಗಿ ಈ ದೇಶದ ನೈಜ ಇತಿಹಾಸ ತೆರೆಯ ಮರೆಯಲ್ಲೇ ಅಡಕವಾಗಿತ್ತು ಆದರೆ ಈಗ ಸಿನಿಮಾದ ಮುಖಂತರ ಅದೆಲ್ಲ ಹೊರ ಬರುತ್ತಿದೆ.

ಇದಕ್ಕೆ ಪೂರಕವಾಗಿ ಯಾಟ ಸತ್ಯನಾರಾಯಣ ಅವರ ನಿರ್ದೇಶನದಲ್ಲಿ ಮೂಡಿಬಂದ `ರಜಾಕರ್´ ಎಂಬ ಸಿನಿಮಾ ಬೆಳ್ಳಿಪರದೆಗೆ ಬಂದಪ್ಪಳಿಸಿದೆ.

ಮಾರ್ಚ್ 15 ರಂದು ಬಿಡುಗಡೆಯಾದ ಈ ಸಿನಿಮಾಕ್ಕೆ ಎಲ್ಲೆಡೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಅಷ್ಟಕ್ಕೂ ಈ ಸಿನಿಮಾ ಈಗ ಸದ್ದು ಮಾಡಲು ಮುಖ್ಯ ಕಾರಣ ಇದು ನೈಜ ಇತಿಹಾಸ ಆಧಾರಿತ ಸಿನಿಮಾ, ಹೈದೆರಾಬಾದ್ ಕರ್ನಾಟಕ ಭಾಗದಲ್ಲಿ 1947 ರ ನಂತರ ನಡೆದ ಸಾಮೂಹಿಕ ಹಿಂದೂ ನರಮೇಧದ ಕಥೆ.

ಹೌದು ಹೈದರಾಬಾದ್ ನಲ್ಲಿ 1947 ರ ನಂತರ ಅಂದರೆ ಈ ದೇಶಕ್ಕೆ ಸ್ವಾತಂತ್ರ ದೊರಕಿದ ನಂತರ ಒಂದು ದೊಡ್ಡ ನರಮೇಧ ನಡೆದಿತ್ತು ಆದರೆ ಅದು ಇತಿಹಾಸದ ಪರದೆಯಡಿಯಲ್ಲಿ ಮರೆಯಾಗಿತ್ತು ಆದರೆ ಅದು ಈಗ `ರಜಾಕರ್´ ಸಿನಿಮಾದ ಮೂಲಕ ಬೆಳಕಿಗೆ ಬಂದಿದೆ.
ಹೈದೆರಾಬಾದ್ ಕರ್ನಾಟಕ ಭಾಗವು ರಜಾಕರ ಆಡಳಿತದಲ್ಲಿದ್ದಾಗ ಅಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಕತೆಯ ಜೊತೆಗೆ ಸ್ವಾತಂತ್ರ್ಯದ ನಂತರ ಅಲ್ಲಿನ ರಜಾಕರು (ಮುಸ್ಲಿಮ್ ಆಡಳಿತಗಾರರು) ಹೇಗೆ ಆ ಪ್ರದೇಶವನ್ನು ತಮ್ಮ ತೆಕ್ಕೆಯಲ್ಲೇ ಇಡಲು ಷಡ್ಯಂತ್ರ ಮಾಡಿದರು ಮತ್ತು ಹಿಂದೂಗಳ ಮೇಲೆ ಹೇಗೆಲ್ಲ ದೌರ್ಜನ್ಯ ಮಾಡಿದರು ಎಂಬ ಚಿತ್ರಣವನ್ನು ಈ ದೃಶ್ಯಕಾವ್ಯ ಬಿಚ್ಚಿಡುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹೈದೆರಾಬಾದ್ ಕರ್ನಾಟಕವನ್ನು ಭಾರತಕ್ಕೆ ಹೇಗೆ ಸೇರಿಸಲಾಯಿತು,ಈ ದೇಶದ ಮೊದಲ ಗೃಹ ಸಚಿವರಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ರಜಾಕರ ತೆಕ್ಕೆಯಲ್ಲಿದ್ದ ಹೈದೆರಾಬಾದ್ ಕರ್ನಾಟಕವನ್ನು ಹೇಗೆ ಶಾಂತವನ್ನಗಿಸಿದರು ಎಂಬ ಕಥೆಯನ್ನು ಈ ಸಿನೆಮಾ ಹೇಳುತ್ತದೆ.

 

https://youtu.be/QRtlHmID7n4?si=wSMhRIQfCOz415Tc

0
Shares
  • Share On Facebook
  • Tweet It




Trending Now
ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
Tulunadu News December 15, 2025
ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
Tulunadu News December 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
  • Popular Posts

    • 1
      ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
    • 2
      ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
    • 3
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!

  • Privacy Policy
  • Contact
© Tulunadu Infomedia.

Press enter/return to begin your search