ನೂಪೂರ್ ಶರ್ಮಾ ರಾಯಬರೇಲಿ ಬಿಜೆಪಿ ಅಭ್ಯರ್ಥಿ ಆಗ್ತಾರಾ?
ಬಹುತೇಕ ಎರಡು ವರ್ಷಗಳಿಂದ ಅಜ್ಞಾತವಾಸದಲ್ಲಿರುವ ಭಾರತೀಯ ಜನತಾ ಪಾರ್ಟಿಯ ಯುವ ನಾಯಕಿ ನೂಪೂರ್ ಶರ್ಮಾ ಅವರಿಗೆ ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಪಕ್ಷದ ವರಿಷ್ಟರು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ.
ಸುಮಾರು 20 ವರ್ಷಗಳಿಂದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ರಾಯಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಭೇರಿ ಬಾರಿಸುತ್ತಿದ್ದಾರೆ. ಆದರೆ ಈ ಬಾರಿ ಸೋನಿಯಾ ಗಾಂಧಿ ಲೋಕಸಭೆಗೆ ಸ್ಪರ್ಧಿಸುತ್ತಿಲ್ಲ. ಅವರು ಈಗಾಗಲೇ ರಾಜಸ್ಥಾನದಿಂದ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇನ್ನು ಗಾಂಧಿ ಕುಟುಂಬದಿಂದ ಯಾರೂ ಕೂಡ ರಾಯಬರೇಲಿ ಮತ್ತು ಅಮೇಠಿಯಿಂದ ಸ್ಪರ್ಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಹಂತದಲ್ಲಿ ಫೈರ್ ಬ್ರಾಂಡ್ ಲೀಡರ್, ವಕೀಲೆ ನುಪೂರ್ ಶರ್ಮಾ ಅವರಿಗೆ ಅಲ್ಲಿ ಟಿಕೆಟ್ ಕೊಟ್ಟು ಗೆಲ್ಲಿಸಿದರೆ ಕಾಂಗ್ರೆಸ್ಸಿನ ಗಾಂಧಿ ಕುಟುಂಬದ ಮತ್ತೊಂದು ಪಾರಂಪರಿಕ ಸೀಟು ವಶಪಡಿಸಿಕೊಂಡಂತೆ ಆಗುತ್ತದೆ ಎನ್ನುವುದು ಬಿಜೆಪಿ ಚಿಂತನೆ.
ಇನ್ನು ನುಪೂರ್ ಶರ್ಮಾ ಅವರ ಹಿನ್ನಲೆ ಕೂಡ ಕುತೂಹಲಭರಿತವಾಗಿದೆ. ಪ್ರತಿಷ್ಟಿತ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಗೆಲ್ಲುವುದು ಕಷ್ಟಸಾಧ್ಯದ ವಾತಾವರಣ ಇದ್ದಾಗ 2008 ರಲ್ಲಿ ಮೊತ್ತಮೊದಲಬಾರಿಗೆ ಏಕಾಂಗಿಯಾಗಿ ಗೆದ್ದು ಎಬಿವಿಪಿ ಬಾವುಟ ಹಾರಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಈ ಮೂಲಕ ಎಬಿವಿಪಿಯ ಆರು ವರ್ಷದ ಗೆಲುವಿನ ಬರವನ್ನು ಅವರು ನೀಗಿಸಿದ್ದರು. ಅವರಿಗೆ ರಾಯಬರೇಲಿಯಲ್ಲಿ ಟಿಕೆಟ್ ದೊರೆತರೆ ಗೆಲುವು ನಿಶ್ಚಿತ ಎನ್ನುವುದು ಎಲ್ಲರ ಅಭಿಪ್ರಾಯ.
Leave A Reply