ಅರುಣಾಚಲ ಪ್ರದೇಶದಲ್ಲಿ ಸಿಎಂ ಸೇರಿ ಐದು ಬಿಜೆಪಿ ಅಭ್ಯರ್ಥಿಗಳಿಗೆ ಎದುರಾಳಿಗಳೇ ಇಲ್ಲ!

ರಾಷ್ಟ್ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ಈ ಸಂದರ್ಭದಲ್ಲಿ ಅರುಣಾಚಲ ವಿಧಾನಸಭೆಗೂ ಮತದಾನ ನಡೆಯಲಿದೆ. ಒಟ್ಟು ಅರವತ್ತು ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಅರುಣಾಚಲ ಪ್ರದೇಶದಲ್ಲಿ ನಾಮಪತ್ರ ಸಲ್ಲಿಕೆಗೆ ಮಾರ್ಚ್ 28 ಕೊನೆಯ ದಿನವಾಗಿತ್ತು. ಆವತ್ತು ಮುಖ್ಯಮಂತ್ರಿ ಪೆಮಾ ಖಂಡು ಅವರು ಪ್ರತಿನಿಧಿಸುವ ಮುಕ್ತೋ ವಿಧಾನಸಭಾ ಕ್ಷೇತ್ರವನ್ನು ಸೇರಿಸಿಕೊಂಡು ಸಾಗ್ಲಿ ವಿಧಾನಸಭಾ ಕ್ಷೇತ್ರ, ತಲಿಹಾ ವಿಧಾನಸಭಾ ಕ್ಷೇತ್ರ, ರೋಯಿಂಗ್ ವಿಧಾನಸಭಾ ಕ್ಷೇತ್ರ, ತಾಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿಗೆ ಯಾರೂ ಎದುರಾಳಿಗಳೇ ಇಲ್ಲ ಎನ್ನುವುದು ಸಾಬೀತಾಗಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿವಸ ಈ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಅಲ್ಲಿ ಹಾಲಿ ಸಿಎಂ ಸಹಿತ ಐದು ಜನ ಅವಿರೋಧವಾಗಿ ಆಯ್ಕೆಯಾದಂತೆ ಆಗಿದೆ.
ಈ ಬಗ್ಗೆ ಏಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಕಿರಣ್ ರಿಜ್ಜು ಅವರು ಅರುಣಾಚಲ ಪ್ರದೇಶ ದೇಶದ ಚುನಾವಣೆಯ ದಿಕ್ಸೂಚಿಯಾಗಿದೆ. ನಾಮಪತ್ರ ಸಲ್ಲಿಸುವ ಕೊನೆಯ ದಿನವೂ ಮುಖ್ಯಮಂತ್ರಿಯವರ ಕ್ಷೇತ್ರವೂ ಸೇರಿದಂತೆ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಯಾವ ವಿಪಕ್ಷಗಳೂ ಕೂಡ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿಲ್ಲ ಎನ್ನುವುದರ ಅರ್ಥ ಏನು ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸಿಗೆ ತಲುಪಿರುವುದರಿಂದ ವಿಪಕ್ಷಗಳಿಗೆ ಹಿಮಾಚಲ ಪ್ರದೇಶದಲ್ಲಿ ನೆಲೆ ಇಲ್ಲದಂತಾಗಿದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಏಕ್ಸ್ ನಲ್ಲಿ ತಮ್ಮ ಅಭಿಪ್ರಾಯ ಬರೆದಿರುವ ಬಿಜೆಪಿ ಮುಖಂಡ ಅಶೋಕ್ ಸಿಂಘಾಲ್ ಅವರು ಅಭಿವೃದ್ಧಿ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯಾವಾಗಲೂ ಈಶಾನ್ಯ ರಾಷ್ಟ್ರಗಳನ್ನು ಪ್ರಥಮ ಆದ್ಯತೆಯಾಗಿ ತೆಗೆದುಕೊಂಡಿದ್ದಾರೆ. ಅರುಣಾಚಲ ಪ್ರದೇಶದ ಫಲಿತಾಂಶ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುತ್ತಿರುವುದರ ಮುನ್ನುಡಿ ಎಂದು ಬರೆದಿದ್ದಾರೆ.
Leave A Reply