ಕಾಶ್ಮೀರದ ಮಾರ್ತಾಂಡ ದೇಗುಲಕ್ಕೆ ಹೊಸ ಕಾಯಕಲ್ಪ ಎಂದ ಶಾ!
ಕಾಶ್ಮೀರದ ಅನಂತನಾಗ ಜಿಲ್ಲೆಯಲ್ಲಿರುವ ಮಾರ್ತಾಂಡ ದೇವಸ್ಥಾನವನ್ನು ಪುನರುಜ್ಜೀವನಗೊಳಿಸುವ ಪ್ರಕ್ರಿಯೆ ಶೀಘ್ರ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಈ ಮೂಲಕ ಎಂಟನೇ ಶತಮಾನದಲ್ಲಿ ಲಲಿತಾದಿತ್ಯ ಮುಕ್ತಾಪೀಡಾ ನಿರ್ಮಿಸಿದ ಬೃಹತ್ ದೇವಾಲಯಕ್ಕೆ ಮತ್ತೆ ಹೊಸ ವೈಭವ ಬರಲಿದೆ. ಈ ದೇವಾಲಯವನ್ನು 14 ನೇ ಶತಮಾನದಲ್ಲಿ ಸಿಕಂದರ್ ಶಾ ಮಿರಿ ಎಂಬ ಅರಸ ನಾಶ ಮಾಡಿದ್ದ ಎನ್ನುವ ಉಲ್ಲೇಖ ಇತಿಹಾಸದಲ್ಲಿ ದೊರಕುತ್ತದೆ. ಆಗ ಈ ದೇವಾಲಯದ ಕಟ್ಟಡಗಳ ನಡುವೆ ಬೃಹತ್ ಮರದ ದಿಂಬಿಗಳನ್ನು ಇಟ್ಟು ಬೆಂಕಿ ಹಚ್ಚಿ ಸುಟ್ಟು ಹಾಕಿದರು ಎಂದು ಇತಿಹಾಸಕಾರರು ಬಣ್ಣಿಸುತ್ತಾರೆ. ಆ ಬೆಂಕಿಯ ಜ್ವಾಲೆ ಹಲವು ವರ್ಷಗಳ ತನಕ ಉರಿದು ದೇವಾಲಯದ ಅವನತಿಗೆ ಕಾರಣವಾಯಿತು ಎಂದು ಹೇಳಲಾಗುತ್ತದೆ.
ಮಾರ್ತಾಂಡಾ ದೇವಸ್ಥಾನ ಯಾವ ರೀತಿ ಕಟ್ಟಲ್ಪಟ್ಟಿತ್ತು ಎಂದರೆ ದೇವಾಲಯದ ಪರಿಸರದಲ್ಲಿ ನಿಂತು ನೋಡಿದರೆ ಇಡೀ ಕಾಶ್ಮೀರದ ಸುಂದರ ವಾತಾವರಣ ನಮ್ಮ ಕಣ್ಣಿಗೆ ಬೀಳುತ್ತದೆ. ಈ ದೇವಸ್ಥಾನದ ವಾಸ್ತು ಮತ್ತು ಸೌಂದರ್ಯ ಹೇಗಿದೆ ಎಂದರೆ ಗಾಂಧಾರಣ್, ಗುಪ್ತಾ ಮತ್ತು ಚೈನೀಶ್ ಪರಂಪರೆಯನ್ನು ಮಿಶ್ರಣ ಮಾಡಿ ಇದನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನವನ್ನು ನಮ್ಮ ದೇಶದ ಮೇಲೆ ದಾಳಿ ಮಾಡಿದ ಪರಕೀಯರು ನಾಶ ಮಾಡಿದರೂ ಅಲ್ಲಿ ಭೇಟಿ ನೀಡುವ ಪ್ರವಾಸಿಗರಿಗೆ ಅಲ್ಲಿನ ಗೈಡ್ ಗಳು ಬೇರೆಯದ್ದೇ ಉತ್ತರ ಹೇಳುತ್ತಾರೆ. ಕೆಲವರು ಹಿಮಪಾತದಿಂದ ನಾಶವಾಯಿತು ಎಂದರೆ, ಇನ್ನು ಕೆಲವು ಗೈಡ್ ಗಳು ಭೂಕಂಪದಿಂದ ಅವನತಿ ಹೊಂದಿತು ಎನ್ನುತ್ತಾರೆ. ಕೆಲವರು ವಿಪರೀತ ನೆರೆಗೆ ದೇವಸ್ಥಾನ ಬಿದ್ದು ಹೋಯಿತು ಎನ್ನುತ್ತಾರೆ. ಆದರೆ ವಾಸ್ತವ ಹೆಚ್ಚಿನವರಿಗೆ ತಿಳಿದಿದೆ.
ಇಂತಹ ಇತಿಹಾಸ ಪ್ರಸಿದ್ಧ ದೇವಾಲಯವನ್ನು ಮತ್ತೆ ವೈಭವಕ್ಕೆ ತಂದು ಅಲ್ಲಿ ಅದರ ಮೂಲ ನಿರ್ಮಾತೃರಾದ ರಾಜಾ ಲಲಿತಾದಿತ್ಯ ಅವರ ಪುತ್ಥಳಿಯನ್ನು ನಿರ್ಮಿಸಿ ದೇವಸ್ಥಾನದ ಆವರಣದಲ್ಲಿ ನಿಲ್ಲಿಸಲು ಕೇಂದ್ರ ಸರಕಾರ ಮನಸ್ಸು ಮಾಡಿದೆ.
Leave A Reply