• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯದುವೀರ ಒಡೆಯರ್ ಬಳಿ ಕಾರು, ಸೈಟ್, ಭೂಮಿ ಏನಿಲ್ಲ!

Tulunadu News Posted On April 1, 2024
0


0
Shares
  • Share On Facebook
  • Tweet It

ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮೈಸೂರಿನ ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಬಳಿ ಎಷ್ಟು ಆಸ್ತಿ ಇರಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಇತ್ತು. ಮೈಸೂರಿನ ರಾಜರೆಂದರೆ ಸುಮ್ಮನೇನಾ? ಅವರ ವೈಭೋಗ ಕಡಿಮೆನಾ ಎಂದು ಜನರಿಗೆ ಅನಿಸದೇ ಇರದು. ಈಗ ಮೊದಲ ಬಾರಿ ಜನರಿಗೆ ರಾಜರ ಬಳಿ ಅಧಿಕೃತವಾಗಿರುವ ಸಂಪತ್ತಿನ ಪರಿಚಯ ಸಾರ್ವಜನಿಕವಾಗಿ ಆಗಿದೆ. ಲೋಕಸಭಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವಾಗ ನಿಯಮಗಳ ಪ್ರಕಾರ ಅವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಬಳಿ ಸ್ವಂತ ಕಾರು, ಕೃಷಿ ಭೂಮಿ, ಸೈಟ್, ಮನೆ ಆಗಲಿ ಇಲ್ಲ ಎಂದು ಅಫಿಡಾವಿಟ್ ನಲ್ಲಿ ಬರೆದಿದ್ದಾರೆ.

ಯದುವೀರ್ ಒಡೆಯರ್ ಅವರ ಕೈಯಲ್ಲಿ ಸದ್ಯ ಒಂದು ಲಕ್ಷ ರೂ ನಗದು ಹಣ ಇದ್ದು, ವಿವಿಧ ಬ್ಯಾಂಕ್ ಅಕೌಂಟ್ ಗಳಲ್ಲಿ 1.36 ಕೋಟಿ ರೂ ಹಣ ಇದೆ. 3.25 ಕೋಟಿ ರೂ ಮೌಲ್ಯದ 4 ಕೆ.ಜಿ ಚಿನ್ನ, 14 ಲಕ್ಷ ರೂ ಮೌಲ್ಯದ 20 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಒಟ್ಟು 4.99 ಕೋಟಿ ರೂ ಚರಾಸ್ತಿಯನ್ನು ಯದುವೀರ್ ಈ ವೇಳೆ ಘೋಷಿಸಿಕೊಂಡಿದ್ದಾರೆ.

ಅವರ ಪತ್ನಿ ರಾಜವಂಶ ಕುಲದಿಂದ ಬಂದಿರುವ ತ್ರಿಷಿಕಾ ಅವರ ಬಳಿ 75 ಸಾವಿರ ರೂ ನಗದು ಇದ್ದು, ಎಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ 1 ಲಕ್ಷ ರೂ ಹೊಂದಿದ್ದಾರೆ. 90 ಲಕ್ಷ ರೂ ಮೌಲ್ಯದ 2 ಕೆಜಿ ಚಿನ್ನ, 5.5 ಲಕ್ಷ ರೂ ಮೌಲ್ಯದ 100 ಗ್ರಾಂ ಚಿನ್ನದ ಗಟ್ಟಿಗಳಿದ್ದು, 7 ಲಕ್ಷ ರೂ ಮೌಲ್ಯದ 10 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಒಟ್ಟು 1.04 ಕೋಟಿ ರೂ ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದಾರೆ.
ಯದುವೀರ್ ಅವರ ಅವಲಂಬಿತರ ಬಳಿ ಇರುವ ಆಸ್ತಿಪಾಸ್ತಿಯ ಮಾಹಿತಿ ಕೂಡ ಅಫಿದಾವಿತ್ ನಲ್ಲಿ ದಾಖಲಿಸಲಾಗಿದ್ದು, ಅವರ ಹೆಸರಲ್ಲಿ ಒಟ್ಟು 3.63 ಕೋಟಿ ರೂ ಚರಾಸ್ತಿ ಇದೆ ಎಂದು ಹೇಳಿದ್ದಾರೆ.

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
  • Popular Posts

    • 1
      ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!

  • Privacy Policy
  • Contact
© Tulunadu Infomedia.

Press enter/return to begin your search