ಭಾರತ್ ಮಾತಾ ಕೀ ಜೈ ಹೇಳಿದರೆ ಖರ್ಗೆ ಅಪಾರ್ಥ ಮಾಡಿಕೊಳ್ಳಬಾರದು ಎಂದ ಸವದಿ!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಾರಿ ಅಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿರುವ ಲಕ್ಷ್ಮಣ್ ಸವದಿಯವರು ಕಾಂಗ್ರೆಸ್ ಪರ ಚುನಾವಣಾ ಪ್ರಚಾರದಲ್ಲಿ ಹೇಳಿರುವ ಮಾತೊಂದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅವರು ಪಕ್ಷದ ಅಭ್ಯರ್ಥಿಯ ಪರ ಭಾಷಣ ಮಾಡಿ ಕೊನೆಗೆ ಹೇಳಿದ ಮಾತುಗಳು ಈಗ ವೈರಲ್ ಆಗಿದೆ. ಅವರು ವೇದಿಕೆಯಲ್ಲಿದ್ದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರತ್ತ ತಿರುಗಿ “ದಯವಿಟ್ಟು ಖರ್ಗೆ ಸಾಹೇಬ್ರು ಅಪಾರ್ಥ ಮಾಡಿಕೊಳ್ಳಬಾರದು” ಎಂದು ಹೇಳಿ ಜನರತ್ತ ತಿರುಗಿ ತಾನು ಒಂದು ಮಾತು ಹೇಳುತ್ತೇನೆ, ತಾವು ಅದಕ್ಕೆ ಜೈ ಎನ್ನಬೇಕು ಎನ್ನುತ್ತಾರೆ. ನಂತರ ಬೋಲೋ ಭಾರತ್ ಮಾತಾ ಕಿ ಎನ್ನುತ್ತಾರೆ.
ಇದರಿಂದ ಹೋಗಿರುವ ಸಂದೇಶ ಏನೆಂದರೆ ಭಾರತ್ ಮಾತಾ ಕಿ ಜೈ ಎನ್ನುವುದು ಖರ್ಗೆಯವರಿಗೆ ಇಷ್ಟವಿಲ್ಲ, ಆದರೂ ಅನುಮತಿ ಕೇಳಿಕೊಂಡು ತಾನು ಹೇಳುತ್ತಿದ್ದೇನೆ ಎನ್ನುವ ಅರ್ಥದಲ್ಲಿ ಅವರ ಬಾಡಿ ಲ್ಯಾಂಗ್ವೆಜ್ ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ಕುರಿತು ಬಿಜೆಪಿ ತನ್ನ ಏಕ್ಸ್ (ಟ್ವಿಟರ್) ನಲ್ಲಿ ” ಸನ್ಮಾನ್ಯ ಲಕ್ಷ್ಮಣ್ ಸವದಿ ಅವರ ದಯನೀಯ ಸ್ಥಿತಿ ಕಂಡು ನಿಜಕ್ಕೂ ಬೇಸರವಾಗುತ್ತಿದೆ. ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಲು ಕೂಡ ನೀವು ಸ್ವತಂತ್ರರಲ್ಲ. ಅದಕ್ಕೂ ಖರ್ಗೆ ಅವರ ಅನುಮತಿ ಪಡೆಯಲೇಬೇಕು. ಇಂತಹ ದೇಶ ವಿರೋಧಿ ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಲು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆಯೆ ಎಂದು ಪ್ರಶ್ನಿಸಿದೆ.
Leave A Reply