ಪ್ರೀತಿ ಅದ್ಭುತವು ಹೌದು ಭಯಾನಕವು ಹೌದು!
ನನಗೆ ಸಿಗದ ಹೆಣ್ಣು ಯಾರಿಗೂ ಸಿಗುವಂತಾಗಬಾರದು ಎಂದು ಕತ್ತರಿಸಿ ಬಿಸಾಡುವುದು ಇದೇನು ಮೊದಲೆಲ್ಲ. ಈ ಭೂಮಿ ತಾಯಿ ಇಂತಹ ಅದೆಷ್ಟೋ ಹುಡುಗಿಯರ ರಕ್ತವನ್ನು ಮೌನವಾಗಿ ಕುಡಿದಿದ್ದಾಳೆ. ಇವತ್ತು ನೇಹಾಳನ್ನು ಫಯಾಜ್ ಕತ್ತರಿಸಿ ಬಿಸಾಡಿದ್ದಾನೆ. ಆದರೆ ಇತ್ತೀಚೆಗೆ ಪುತ್ತೂರಿನಲ್ಲಿ ಜಯಶ್ರೀ ಎಂಬವಳನ್ನು ನಡು ರಸ್ತೆಯಲ್ಲಿ ಕೊಚ್ಚಿಕೊಂದದ್ದು ಅವಳ ಪ್ರಿಯಕರ ಉಮೇಶ. ರಾಯಚೂರಿನಲ್ಲಿ ಹಿಂದೊಮ್ಮೆ ಚಂದ್ರಕಲಾ,ಹುಡುಗ ಕಪ್ಪಗಿದ್ದಾನೆ ಎಂದು ಮದುವೆಗೆ ಒಪ್ಪಲಿಲ್ಲ. ಅಷ್ಟಕ್ಕೆ ಹುಡುಗಿಯ ಅಣ್ಣ ಶಾಮ ಸುಂದರ ತಂಗಿಯನ್ನು ಕೊಡಲಿಯಿಂದ ಬಡಿದುಕೊಂಡಿದ್ದಾನೆ.
ಇನ್ನು ಜಿಹಾದಿಗಳ ಕತೆಯನ್ನಂತೂ ಹೇಳುವುದೇ ಬೇಡ. ಮದುವೆಯಾದರೂ ಕೊಚ್ಚಿ ಕೊಲ್ಲುತ್ತಾರೆ. ಮದುವೆಯಾಗದಿದ್ದರೂ ಕೊಚ್ಚಿಕೊಲ್ಲುತ್ತಾರೆ. ಇವರಲ್ಲಿ ತನ್ನವಳೊಂದಿಗೆ ಮಲಗಿದ ಪ್ರಿಯತಮೆಯನ್ನು ಅದೇ ಮಂಚದ ಅಡಿಯಲ್ಲಿ ಗುಂಡಿ ತೆಗೆದು ಹೂತಿಟ್ಟ ಮಹಮದ್ದನಿದ್ದಾನೆ. ಅಂಗಾಂಗವನ್ನು ಕತ್ತರಿಸಿ ಫ್ರಿಜ್ಜಲ್ಲಿ ತಂಪಾಗುವಂತೆ ಇಟ್ಟ ಸಾಹಿಲ್ ಅಫ್ತಾಬರಿದ್ದಾರೆ. ಕ್ಷತ್ರಿಯ ರಾಜನೊಬ್ಬ ಕತ್ತಿಯನ್ನು ಹಿಡಿದು ರಾಜ್ಯವನ್ನು ವಿಸ್ತರಿಸುವಂತೆ ತಮ್ಮ ಮತವನ್ನು ವಿಸ್ತರಿಸುವಲ್ಲಿ ಪ್ರೀತಿ ಇವರಿಗೆ ಅದೇ ರೀತಿಯ ಒಂದು ಅಸ್ತ್ರವಷ್ಟೇ. ಪ್ರಾಣಿಗಳನ್ನು ಹಲಾಲಿನ ಹೆಸರಿನಲ್ಲಿ ಇಂಚಿಂಚು ಕತ್ತರಿಸಿ ತಿಂದು ತೇಗಿ ಬೆಳೆದ ಆ ಶರೀರ ಹಾಗೂ ಮನಸ್ಥಿತಿ ಕತ್ತರಿಸುವುದರಲ್ಲಿ ಯಾವುದೆ ಬೇಸರ ತೋರಿಸಲಿಕ್ಕಿಲ್ಲ.
ಇಷ್ಟೇ ಅಲ್ಲದೆ ಇತ್ತೀಚೆಗೆ ತಂದೆ ಮಗಳನ್ನು ಕೊಲ್ಲುತ್ತಾನೆ ಗಂಡ ಹೆಂಡತಿಯನ್ನು ಕೊಲ್ಲುತ್ತಾನೆ. ಹೆಂಡತಿ ಗಂಡನನ್ನು ಕೊಲ್ಲಿಸುತ್ತಾಳೆ ಅಥವಾ ವಿಷ ಹಾಕುತ್ತಾಳೆ. ಮಗ ಮನೆಯವರನ್ನೆಲ್ಲರನ್ನು ಕೊಂದ ಘಟನೆ ನೇಪಾಳದಲ್ಲಿ ನಡೆದಿತ್ತು. ಅಣ್ಣ ತಮ್ಮಂದಿರ ಕೊಲೆಗಳಿಗೆ ಲೆಕ್ಕವಿರಲಿಕ್ಕಿಲ್ಲ. ಗೆಳೆಯ ಗೆಳತಿಯನ್ನು ಕೊಲ್ಲುತ್ತಾನೆ. ಹೀಗೆ ಸಾಗುತ್ತಲೇ ಹೋಗುತ್ತದೆ ಕೊಲೆಗಳ ಪಟ್ಟಿ.
ಒಂದಷ್ಟು ಕಾಲ ಗೆಳೆತನ ಮಾಡಿ, ಪರಸ್ಪರ ಕಣ್ಣು, ಮನಸ್ಸು ಮಾತ್ರವಲ್ಲ ದೇಹವನ್ನು ಕೂಡ ಒಂದಾಗಿಸಿ ಬೆರೆತು ಬಾಳಿದ ಪ್ರೇಮಿಗಳು ದೂರವಾದರೆ ಹುಡುಗ ಹುಡುಗಿಯನ್ನು ಕೊಲ್ಲುವಷ್ಟರ ಮಟ್ಟಿಗೆ ದ್ವೇಷ ಹುಟ್ಟುತ್ತದೆ. ಮದುವೆ ಮಾಡಿಕೊಂಡು ಒಂದಷ್ಟು ವರ್ಷಗಳ ಕಾಲ ಬದುಕಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಗಂಡ ಹೆಂಡತಿಯರಲ್ಲಿ ಏಕಾಏಕಿ ಕೊಲ್ಲುವಷ್ಟರ ಮಟ್ಟಿಗೆ ದ್ವೇಷ ಬೆಳೆಯುತ್ತದೆ. ಒಟ್ಟಿಗೆ ಹುಟ್ಟಿ ಒಂದೇ ತಟ್ಟೆಯಲ್ಲಿ ತಿಂದುಂಡು ಬೆಳೆದ ಅಣ್ಣ ತಮ್ಮಂದಿರು ಬೆಳೆಯುತ್ತಾ ಕೊಲೆ ಮಾಡುವಷ್ಟರ ಮಟ್ಟಿಗೆ ಅವರ ಬಾಂಧವ್ಯ ಬಂದು ನಿಲ್ಲುತ್ತದೆ. ಈ ರೀತಿಯಾಗಿ ಮನುಷ್ಯ ಬದಲಾಗುತ್ತಾನೆಂದರೆ ಆತನ ಆ ಪ್ರೀತಿ ಅಥವಾ ಮನಸ್ಥಿತಿ ಎಷ್ಟು ದುರ್ಬಲವಾಗಿದೆ ಎಂದು ತಿಳಿದುಕೊಳ್ಳಬೇಕು.
ಸುಖವನ್ನು ಅನುಭವಿಸಿ ಖುಷಿಪಡುವ ನಾವು ದುಃಖವನ್ನು ಅನುಭವಿಸಿ ನೋವುಣ್ಣಲು ಕೂಡ ತಯಾರಾಗಿರಬೇಕು. ಸುಖಕ್ಕೆ ಮಾತ್ರ ತಯಾರಾಗಿ ನೋವು ನಮಗೆ ಬೇಡ ಎಂದರೆ ಅದು ಯಾವ ನ್ಯಾಯವಾಗುತ್ತದೆ. ಮನಸ್ಸು ಮತ್ತಷ್ಟು ಗಟ್ಟಿಯಾಗಬೇಕಾದರೆ ಉಳಿಯ ಪೆಟ್ಟು ಬಿದ್ದ ಕಲ್ಲಿನಂತೆ ನಾವು ಪೆಟ್ಟು ತಿನ್ನುತ್ತಾ ಸಾಗಬೇಕು. ವಿರೋಧಿಗಳ ಮಾತಿಗೆ ಅಥವಾ ತಿರಸ್ಕಾರಕ್ಕೆ ಒಳಗಾಗುವುದು ದೊಡ್ಡ ಸಂಗತಿ ಏನಲ್ಲ. ತಾಕತ್ತು ತೋರಿಸಬೇಕಾದರೆ ನಮ್ಮವರ ತಿರಸ್ಕಾರವನ್ನು ವಿರೋಧವನ್ನು ಮೆಟ್ಟಿ ನಿಲ್ಲಬೇಕು. ಇಲ್ಲಿ ಗೊತ್ತಾಗುವುದು ನಮ್ಮ ಎದೆಯ ಗಟ್ಟಿತನ.
ಸನಾತನ ಧರ್ಮದಲ್ಲಿ ಜೀವನಕ್ಕೆ ಸಂಬಂಧಪಟ್ಟ ಸಂದೇಶಗಳ ತಿರುಳುಗಳು ಇದೇ ಆಗಿದೆ. ಸುಖ- ದುಃಖ, ನೋವು-ನಲಿವು, ಶ್ರೀಮಂತಿಗೆ- ಬಡತನ, ಗೆಳೆಯ-ವಿರೋಧಿ, ಇದಲ್ಲದೆ ಹೆಣ್ಣು ಹೊನ್ನು ಮಣ್ಣು ಇದು ಯಾವುದಕ್ಕೂ ತನ್ನನ್ನು ಬಂಧಿಯಾಗಿಸದೆ ಬದುಕನ್ನು ಸಾಗಿಸುವುದು ಸ್ಥಿತಪ್ರಜ್ಞ ಅಥವಾ ಯೋಗಿಯ ಲಕ್ಷಣ. ಎಲ್ಲವನ್ನು ಒಂದೇ ರೀತಿಯಲ್ಲಿ ಕಂಡುಕೊಂಡು ಯಾವುದಕ್ಕೂ ಹೆಚ್ಚಾಗಿ ಯೋಚಿಸದೆ, ಯಾವುದನ್ನು ಹೆಚ್ಚಾಗಿ ಹಚ್ಚಿಕೊಳ್ಳದೆ, ಇವತ್ತು ನನ್ನಲ್ಲಿದೆ.ಇದು ನಾಳೆ ಇರದೇ ಇರಬಹುದು ಎನ್ನುವ ನಿಶ್ಚಿತವಾದ ಯೋಚನೆಯಲ್ಲಿ ಬದುಕು ಸಾಗಿಸಬೇಕು.ಇವತ್ತು ನಮ್ಮಲ್ಲಿಗೆ ಬಂದದ್ದು ನಾಳೆ ಬಿಟ್ಟು ಹೋಗಲೇ ಬೇಕು. ಮತ್ತೊಂದನ್ನು ಬಿಟ್ಟು ಇಲ್ಲಿ ಸೇರಿದ್ದು ನಾಳೆ ಮಗದೊಂದಲ್ಲಿ ಸೇರಲಿದೆ. ನಿನ್ನೆಯಿಂದ ಇವತ್ತಿಗೆ ಇವತ್ತಿಂದ ನಾಳೆಗೆ ಸಾಗಬೇಕಾದ ಈ ಜೀವನದಲ್ಲಿ ಸೇರಿಕೊಂಡದ್ದು ಕೂಡ ಸಾಗುತ್ತಲೇ ಇರುತ್ತದೆ ಎನ್ನುವುದು ಒಪ್ಪಿಕೊಳ್ಳಬೇಕಾದ ಸತ್ಯ.
ಇದರೊಂದಿಗೆ ಮತ್ತೊಂದು ವಿಚಾರ ಕೂಡ ಇದೆ.ತನಗೆ ಕೇವಲ ತನ್ನ ನೋವಿಗೆ ಸ್ಪಂದಿಸುವ ಯಾವ ಅಧಿಕಾರವೂ ಇಲ್ಲ. ಸ್ಪಂದಿಸಬೇಕು ಪ್ರತಿಕ್ರಿಯಿಸಬೇಕು ಎನ್ನುವುದಾದರೆ ಸಮಾಜಕ್ಕೆ ಅಂಟಿದ ನೋವಿಗೆ ಪ್ರತಿಕ್ರಿಯಿಸಬೇಕು. ಅದು ಬಿಟ್ಟು ವೈಯಕ್ತಿಕವಾದ ತನ್ನ ಮನೋ ವೇದನೆಯನ್ನು ಸಮಾಧಾನ ಪಡಿಸಬೇಕಾಗಿ ವಿರೋಧಿಸುವುದಕ್ಕೂ ಪೂರ್ತಿಯಾಗಿ ಅಧಿಕಾರವಿಲ್ಲದ ನಾವು ಕೊಲ್ಲುವುದು ದೂರದ ಮಾತೇ ಸರಿ. ಆದ್ದರಿಂದಲೇ ಇಷ್ಟವಿಲ್ಲದಾಗ ಕೊಲ್ಲುವ ಪ್ರಮೇಯ ನಮ್ಮಲ್ಲಿ ಇರಲೇ ಇಲ್ಲ. ವಾತಾವರಣ ಪರಿಸ್ಥಿತಿಗೆ ಬದಲಾಗುತ್ತ ಇತ್ತೀಚೆಗಿನ ಮನಸ್ಸುಗಳು ಈ ರೀತಿಯಾಗಿ ತಪ್ಪು ನಿರ್ಧಾರಗಳನ್ನು ಮಾಡುತ್ತಿವೆ.
ಕಣ್ಣಿಂದ ಸುಂದರತೆಯನ್ನು ಗಮನಿಸಿ, ಆಸ್ವಾದಿಸಿ ಬೇಕೆಂದು ಸ್ವೀಕರಿಸಿ ಪ್ರಾರಂಭವಾಗುವ ಗೆಳೆತನ ಪ್ರೀತಿಯಲ್ಲಿ ಬಂದು ನಿಲ್ಲುತ್ತದೆ. ಅನಂತರ ರಾತ್ರಿ ಆ ಯೋಚನೆಯಲ್ಲಿ ನಿದ್ದೆಗೆಟ್ಟು ಒಟ್ಟಾಗಿ ದೈಹಿಕ ಸಂಬಂಧದ ಮೂಲಕ ಮತ್ತಷ್ಟು ಗಟ್ಟಿಯಾಗುತ್ತದೆ. ಈ ಮಟ್ಟಕ್ಕೆ ತಲುಪಿದ ಮೇಲೆ ಒಮ್ಮೆಲೇ ತಿರಸ್ಕಾರಕ್ಕೆ ಒಳಪಟ್ಟರೆ ಹುಡುಗಿಯರು ಮನೆಯ ಭಯದಿಂದ ಸುಮ್ಮನಿರಬಹುದು. ಹುಡುಗರಿಗಂತೂ ತಮ್ಮ ಮೇಲೆ ತಮಗೆ ಬೇಸರದ ಭಾವ ಮೂಡುತ್ತದೆ. ಯಾರು ಬೇಡ ಕೊನೆಗೆ ಈ ದೇಹವೂ ಬೇಡ ಎನ್ನುವಂತೆ ತಮ್ಮನ್ನು ತಾವು ದುಶ್ಚಟಕ್ಕೆ ಗುರಿ ಮಾಡಿಕೊಂಡು ಆ ಮೂಲಕ ಏಕಾಂಗಿ ಜೀವನಕ್ಕೆ ಒಂದು ಸುಖದ ರೂಪವನ್ನು ಕೊಡಲು ಪ್ರಯತ್ನಿಸುತ್ತಾರೆ. ಇದಲ್ಲದಿದ್ದರೆ ತನಗೆ ಸಿಗದ ಹೆಣ್ಣು ಯಾರಿಗೂ ಸಿಗಬಾರದು ಎಂದೋ ಅಥವಾ ಲೆಕ್ಕವಿಲ್ಲದಷ್ಟು ಪ್ರೀತಿಯ ಭಾವಾತಿರೇಕಕ್ಕೆ ಕೊಂಡು ಹೋಗಿ ಒಮ್ಮೆಲೆ ಪ್ರಪಾತಕ್ಕೆ ದುಡಿದ ಅವಳು ಇನ್ನು ಬದುಕಿರಲೇಬಾರದು ಎನ್ನುವ ದ್ವೇಷ ಭಾವನೆ ಹುಟ್ಟುತ್ತದೆ. ಆಗ ತನಗೆ ಅರಿವಿಲ್ಲದೆ ಒಂದು ಕ್ಷಣದ ಕೋಪ ಬಲಿಯಾಗಿ ಯಾವ ಜಾಗದಲ್ಲಿ ಕೈ ಕೈಹಿಡಿದುಕೊಂಡು ಮುತ್ತಿಟ್ಟ ನಡೆದಾಡಿದ ಅದೇ ಜಾಗದಲ್ಲಿ ಅದೇ ಕೈಯಲ್ಲಿ ಕತ್ತಿ ಹಿಡಿದು ಕತ್ತರಿಸಿ ಹಾಕುತ್ತಾರೆ.
ಒಂದು ಸಣ್ಣ ನೋಟದಲ್ಲಿ ಶುರುವಾದ ಗೆಳೆತನ ಹಾಗೂ ಪ್ರೀತಿ ಕೊಲೆ ಮಾಡಿ ಜೈಲಿಗೆ ಹೋಗುವ ತನಕ ಬಂದು ಮುಟ್ಟುತ್ತದೆಂದರೆ ಪ್ರೀತಿ ದಾರಿ ತಪ್ಪಿದರೆ ಅದೆಷ್ಟು ಭಯಾನಕ ಎಂದು ತಿಳಿಯಬೇಕು. ಇದನ್ನು ಡಿವಿಜಿ ಅವರು ಹೇಳಿದ್ದು ಪ್ರೇಮ ಕನಲೆ ಪಿಶಾಚಿ ಎಂದು…
Leave A Reply