ಮಾಧ್ಯಮದವರಿಗೆ ನೀರು ಕುಡಿಯಲು ಸಲಹೆ ನೀಡಿದ ಮೋದಿ!
ಸಾಮಾನ್ಯವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮಗಳ ಮೈಕ್ ಗಳ ಮುಂದೆ ಮಾತನಾಡುವುದಿಲ್ಲ. ಈಬಾರಿಯ ಚುನಾವಣೆಯಲ್ಲಿ ಆಯ್ದ ಕೆಲವು ಮೀಡಿಯಾ ಸಂಸ್ಥೆಗಳ ಮುಖ್ಯಸ್ಥರ, ಪ್ರಮುಖರ ಜೊತೆ ಸಂವಾದ ನಡೆಸಿದರಾದರೂ ಹೋದ ಕಡೆ, ಬಂದ ಕಡೆ ನಿಂತು ಟಿವಿ ಕ್ಯಾಮೆರಾಗಳ ಎದುರು ಮಾತನಾಡುವ ಸಂಪ್ರದಾಯ ಇಟ್ಟುಕೊಂಡಿಲ್ಲ. ಆದರೆ ಅಹಮದಾಬಾದಿನಲ್ಲಿ ಮತ ಚಲಾಯಿಸಲು ಬಂದ ನರೇಂದ್ರ ಮೋದಿ ಮಾಧ್ಯಮಗಳ ಮೈಕ್ ಗಳ ಮುಂದೆ ನಿಂತು ಕೊಂಚ ಹೊತ್ತು ಮಾತನಾಡಿದ ಪ್ರಸಂಗ ನಡೆದಿದೆ. ಅವರ ಜೊತೆ ಅಮಿತ್ ಶಾ ಕೂಡ ಪಕ್ಕದಲ್ಲಿಯೇ ನಿಂತದ್ದು ಒಂದು ವಿಷಯ.
“ಮಾಧ್ಯಮದವರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಮೀಡಿಯಾದಲ್ಲಿಯೂ ಸಾಕಷ್ಟು ಸ್ಪರ್ಧೆ ಇದೆ. ಮಾಧ್ಯಮದವರು ಎಲ್ಲಾ ವಿಷಯವನ್ನು ವರದಿ ಮಾಡುವ ಭರದಲ್ಲಿ ಸಮಯದ ವೇಗಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಬೇಕಾಗುತ್ತದೆ. ಈ ಬಿರುಸಿನ ಜೀವನದಲ್ಲಿ ನನ್ನ ಹಳೆಯ ಮಾಧ್ಯಮ ಮಿತ್ರರಿಗೆ ನಾನು ಸಲಹೆ ನೀಡುವುದೇನೆಂದರೆ ನೀವು ಆದಷ್ಟು ನೀರು ಕುಡಿಯುವ ಅಭ್ಯಾಸ ಮಾಡಬೇಕು. ಈ ಉರಿಬಿಸಿಲಿನಲ್ಲಿ ನೀರು ನಿಮ್ಮ ದೇಹಕ್ಕೆ ಬೇಕಾದಷ್ಟು ಶಕ್ತಿಯನ್ನು ನೀಡುತ್ತದೆ. ಇವತ್ತು ಮೂರನೇ ಹಂತದ ಮತದಾನ. ನಾನು ಮತದಾರರಿಗೆ ಆಗ್ರಹ ಮಾಡುವುದೇನೆಂದರೆ ದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ. ಇನ್ನು ನಾಲ್ಕು ಹಂತದಲ್ಲಿ ಮತದಾನ ನಡೆಯಲಿದೆ. ನಾನು ಪ್ರತಿ ಬಾರಿ ಇದೇ ಕ್ಷೇತ್ರದಲ್ಲಿ ಮತ ಚಲಾಯಿಸುತ್ತಾ ಬಂದಿದ್ದೇನೆ. ಅಮಿತ್ ಶಾ ಅವರು ಈ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಇನ್ನು ನನಗೆ ಮಹಾರಾಷ್ಟ್ರ, ತೆಲಂಗಾಣ ಸಹಿತ ಅನೇಕ ಕಡೆ ಪ್ರಚಾರಕ್ಕೆ ತೆರಳಲು ಇದೆ. ಈ ಬಾರಿ ಚುನಾವಣಾ ಆಯೋಗವು ಬಹಳ ಉತ್ತಮ ರೀತಿಯಲ್ಲಿ ಮತದಾನದ ಹಂತಗಳ ರೂಪುರೇಶೆ ತಯಾರಿಸಿದ್ದಾರೆ. ಇದರಿಂದ ಪ್ರಚಾರದ ಮ್ಯಾನೇಜಮೆಂಟ್ ಕೂಡ ನಮಗೆ ಉತ್ತಮ ರೀತಿಯಲ್ಲಿ ಮಾಡಲು ಅನುಕೂಲವಾಗಿದೆ. ಇದು ಪ್ರಜಾಪ್ರಭುತ್ವವನ್ನು ಬಲಿಷ್ಟ ಮಾಡಲು ಸಹಕಾರಿಯಾಗಿದೆ. ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಿಸೋಣ”.
ಮೋದಿಯವರು ತಾವು ಮತದಾನ ಮಾಡಿದರ ಸಂಕೇತವಾಗಿ ಹಾಕಿರುವ ಶಾಯಿಯನ್ನು ತೋರಿಸುತ್ತಾ ಮಾಧ್ಯಮಗಳ ಮುಂದೆ ಕಾಣಿಸಿಕೊಂಡು ಪ್ರಧಾನಿ ಮೀಡಿಯಾಗಳ ಮುಂದೆ ಮಾತನಾಡುವುದಿಲ್ಲ ಎನ್ನುವ ಸಂಪ್ರದಾಯವನ್ನು ಅಳಿಸಿಹಾಕಿದರು.
Leave A Reply