ದುಬೈಗೆ ಹೊರಡುವ ಯೋಚನೆ ಇದ್ದರೆ ಈ ನಿಯಮ ಕಡ್ಡಾಯ!
ಭಾರತೀಯರಿಗೆ ದುಬೈ ಯಾವತ್ತೂ ಒಂದು ಆಕರ್ಷಣೆಯಾಗಿಯೇ ಇಂದಿಗೂ ಉಳಿದಿದೆ. ದುಬೈಗೆ ಹೋಗಬೇಕು ಮತ್ತು ಅಲ್ಲಿ ಎಂಜಾಯ್ ಮಾಡಬೇಕು ಎನ್ನುವುದು ಹೆಚ್ಚಿನ ಪ್ರವಾಸಿ ಪ್ರಿಯರ ಹಂಬಲ. ಆದರೆ ಇನ್ನು ಮುಂದೆ ಟೂರಿಸ್ಟ್ ವೀಸಾ ಪಡೆದು ದುಬೈಗೆ ಹೋಗಬಯಸುವ ಪ್ರವಾಸಿಗರಿಗೆ ಹೊಸ ನಿಯಮ ರೂಪಿಸಲಾಗಿದೆ. ಈ ಸಂಬಂಧ ಅಲ್ಲಿನ ವಲಸೆ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಪ್ರಕಾರ ಪ್ರವಾಸಿಗರು ವೀಸಾಗೆ ಅರ್ಜಿ ಸಲ್ಲಿಸುವ ವೇಳೆ ಹೋಟೇಲ್ ಕಾಯ್ದಿರಿಸಿದ ಬಗೆಗಿನ ಮಾಹಿತಿ ಹಾಗೂ ಮರಳುವ ಟಿಕೆಟಿನ ಪ್ರತಿ ಸಲ್ಲಿಸುವುದು ಕಡ್ಡಾಯ.
ಈ ಹಿಂದೆ ಪಾಕಿಸ್ತಾನ ಮತ್ತು ಕೆಲ ಆಫ್ರಿಕನ್ ದೇಶಗಳ ಪ್ರವಾಸಿಗರಿಗೆ ಮಾತ್ರ ಈ ನಿಯಮ ಜಾರಿಯಲ್ಲಿತ್ತು. ಈಗ ಈ ನಿಯಮವನ್ನು ಎಲ್ಲರಿಗೂ ವಿಸ್ತರಣೆ ಮಾಡಲಾಗುತ್ತಿದೆ. ಅಕ್ರಮವಾಗಿ ದುಬೈಗೆ ವಲಸೆ ಬರುವವರನ್ನು ತಡೆಯಲು ಈ ನಿಯಮ ಜಾರಿಗೆ ತರಲಾಗಿದೆ. ಈ ಹಿಂದೆ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಕೇಳಿದರಷ್ಟೇ ಈ ದಾಖಲೆಗಳನ್ನು ತೋರಿಸಬೇಕಿತ್ತು.
ಆದರೆ ಇದೀಗ ಎರಡು ತಿಂಗಳ ವೀಸಾ ಪಡೆಯುವವರು ಕ್ರೆಡಿಟ್/ ಡೆಬಿಟ್ ಕಾರ್ಡ್ ಗಳು ಕನಿಷ್ಟ 5000 ದಿರಾಂ ಹಾಗೂ 3 ತಿಂಗಳ ವೀಸಾ ಪಡೆಯಬಯಸುವವರು 3000 ದಿರಾಂ ಇರುವುದು ಕಡ್ಡಾಯವಾಗಿದೆ. ಈ ಮೂಲಕ ಅಕ್ರಮ ವಲಸೆಗಾರರನ್ನು ತಡೆಯುವುದು ದುಬೈ ಆಡಳಿತದ ಉದ್ದೇಶವಾಗಿದೆ. ಈ ಹೊಸ ನಿಯಮ ಜಾರಿಗೆ ತಂದು ಎಷ್ಟರಮಟ್ಟಿಗೆ ಅವರು ಯಶಸ್ವಿಯಾಗುತ್ತಾರೋ ಎನ್ನುವುದನ್ನು ಕಾಲವೇ ನಿರ್ಧರಿಸಲಿದೆ.
Leave A Reply