ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಿಟಿ ರವಿ ಆ “ಶಬ್ದ” ಹೇಳಿದ್ದು ಹೌದಾ!?
ಕರ್ನಾಟಕದ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಅಂಬೇಡ್ಕರ ಅವರ ಬಗ್ಗೆ ಅಮಿತ್ ಶಾ ನೀಡಿರುವ ಹೇಳಿಕೆಯ ಬಗ್ಗೆ ತೀವ್ರತರವಾದ ಪ್ರತಿಭಟನೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಡುವೆ ನಡೆಯಿತು. ಈ ಸಂದರ್ಭದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶಾಸಕ ಸಿ.ಟಿ.ರವಿಯವರಿಗೆ ಕೊಲೆಗಡುಕ ಎಂದು ಹೇಳಿದ್ದಾರೆ ಎನ್ನುವ ಆರೋಪ ಕೇಳಿ ಬಂದರೆ ಸಿ.ಟಿ.ರವಿಯವರು ಹೆಬ್ಬಾಳ್ಕರ್ ಅವರಿಗೆ ಪ್ರೊಸ್ಟಿಟ್ಯೂಟ್ ಎಂದು ಹೇಳಿದ್ದಾರೆ ಎಂಬ ಪ್ರತ್ಯಾರೋಪವೂ ಕೇಳಿಬಂತು. ಈ ವಿಷಯದಲ್ಲಿ ಹೆಬ್ಬಾಳ್ಕರ್ ಅವರು ಸದನದ ಅಧ್ಯಕ್ಷರಿಗೆ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು ಎಂಬ ಮಾಹಿತಿ ಲಭ್ಯವಾಯಿತು. ಈ ವಿಷಯದಲ್ಲಿ ಹೆಬ್ಬಾಳ್ಕರ್ ಅವರ ಬೆಂಬಲಿಗರು ಅಧಿವೇಶನದ ಕಟ್ಟಡದಲ್ಲಿ ಸಿ. ಟಿ. ರವಿಯವರ ಮೇಲೆ ಎಗರಾಡಿ, ಹಲ್ಲೆ ಮಾಡಲು ವಿಫಲ ಪ್ರಯತ್ನಪಟ್ಟ ಘಟನೆಯೂ ನಡೆಯಿತು.
ಇತ್ತ ಗುರುವಾರ ಸಂಸತ್ತಿನ ಹೊರಗೆ ಹೈಡ್ರಾಮ ನಡೆದಿದೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಭಾರತೀಯ ಜನತಾ ಪಾರ್ಟಿಯ ಸಂಸದರೊಬ್ಬರನ್ನು ಬಲವಾಗಿ ತಳ್ಳಿದ ಕಾರಣ ಅವರು ಓಡಿಶಾದ ಹಿಂದುಳಿದ ಪ್ರದೇಶದ ಸಂಸದ ಪ್ರತಾಪ ಚಂದ್ರ ಸಾರಂಗಿಯವರ ಮೇಲೆ ಬಿದ್ದು, ಸಾರಂಗಿಯವರು ಸ್ಟೇರ್ ನಿಂದ ಕೆಳಗುರುಳಿ ಗಂಭೀರ ಗಾಯಗೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಸಾರಂಗಿಯವರು ” ನಾನು ಸಂಸತ್ ಎದುರು ನಿಂತಿದ್ದೆ. ಈ ವೇಳೆ ರಾಹುಲ್ ಗಾಂಧಿಯವರು ಸಂಸದರೊಬ್ಬರನ್ನು ತಳ್ಳಿದ್ದಾರೆ. ಆ ಸಂಸದ ನನ್ನ ಮೇಲೆ ಬಿದ್ದ ಕಾರಣ ನಾನು ಉರುಳಿ ಬಿದ್ದೆ ” ಎಂದಿದ್ದಾರೆ. ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ಸಾರಂಗಿಯವರಿಗೆ ಅಲ್ಲಿಯೇ ಇದ್ದ ಕರ್ನಾಟಕದ ಭಾಜಪಾ ಸಂಸದ ಡಾ. ಸಿ ಎನ್ ಮಂಜುನಾಥ್ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಈ ವಿಷಯದಲ್ಲಿ ರಾಹುಲ್ ಗಾಂಧಿ ಸಾರಂಗಿಯವರ ಬಳಿ ಬಂದರಾದರಾದರೂ ಅಲ್ಲಿನ ಗಂಭೀರ ಪರಿಸ್ಥಿತಿ ನೋಡಿ ಅವರು ತಕ್ಷಣ ನಿರ್ಗಮಿಸಿದರು. ಈ ಬಗ್ಗೆ ರಾಹುಲ್ ” ತಾವು ಸಂಸತ್ತಿನ ಒಳಗೆ ಹೋಗಲು ಪ್ರಯತ್ನಿಸಿದಾಗ ತಮ್ಮನ್ನು ಬಿಜೆಪಿ ಸಂಸದರು ತಡೆದರು. ಆಗ ತಳ್ಳಾಟ, ನೂಕಾಟ ನಡೆದಿದೆ” ಎಂದು ಹೇಳಿದರು. ಪ್ರತಾಪ್ ಸಾರಂಗಿಯ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿ ” ಹೌದು, ಅದು ನಡೆದಿದೆ. ಪರವಾಗಿಲ್ಲ, ತಳ್ಳುವುದು, ತಳ್ಳಾಟದಿಂದ ಏನೂ ಆಗುವುದಿಲ್ಲ” ಎಂದು ಹೇಳಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ವಿರೋಧಿಸಿ ಇಂಡಿ ಒಕ್ಕೂಟದವರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಅದೇ ರೀತಿ ಇನ್ನೊಬ್ಬ ಬಿಜೆಪಿ ಸಂಸದ ಮುಕೇಶ್ ರಾಜಪೂತ್ ಅವರಿಗೂ ಗಾಯಗಳಾಗಿದ್ದು, ಅವರು ಐಸಿಯು ನಲ್ಲಿ ದಾಖಲಾಗಿದ್ದಾರೆ. ಈ ನಡುವೆ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ವಿಪಕ್ಷ ಮುಖಂಡ ರಾಹುಲ್ ಗಾಂಧಿ ಸುದ್ದಿಗೋಷ್ಟಿ ನಡೆಸಿದರು. ಅದರಲ್ಲಿ ಖರ್ಗೆಯವರು ತಮಗೆ ಕೂಡ ನೂಕಾಟ, ತಳ್ಳಾಟದಲ್ಲಿ ತೊಂದರೆಯಾಗಿದೆ ಎಂದರೆ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದೆ ಪ್ರಿಯಾಂಕಾ ವಾದ್ರಾ ಖರ್ಗೆಯವರ ಕಾಲಿನ ಮೂಳೆ ಮುರಿದಿರಬಹುದು ಎಂದು ಹೇಳಿದ್ದಾರೆ.
Leave A Reply