ಐಪಿಎಲ್ ನಲ್ಲಿ ಶೂನ್ಯ ಸುತ್ತುವಲ್ಲಿಯೂ ರೋಹಿತ್ ದಾಖಲೆ!

ಕೆಲವೊಂದು ದಾಖಲೆಗಳು ಅದನ್ನು ಸಾಧಿಸಿದವರಲ್ಲಿ ಹೆಮ್ಮೆ ಮೂಡಿಸುವುದಿಲ್ಲ. ಆದರೆ ದಾಖಲೆಗಳು ಮಾತ್ರ ನಡೆದು ಹೋಗುತ್ತವೆ. ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಪಂದ್ಯಾಕೂಟದಲ್ಲಿ ಮುಂಬೈ ಇಂಡಿಯನ್ ತಂಡದ ಆರಂಭಿಕ ದಾಂಡಿಗ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್ ನಲ್ಲಿ ತಮ್ಮ ಮೊದಲ ದಾಖಲೆಯನ್ನು ಬರೆಯುವಂತಾಯಿತು. ಚೆನ್ನೈಯಲ್ಲಿರುವ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಿಎಸ್ ಕೆ ವಿರುದ್ಧ ಆರಂಭಿಕ ಬ್ಯಾಟ್ಸಮನ್ ಆಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ ಖಲೀಲ್ ಅಹ್ಮದ್ ಅವರ ದಾಳಿಗೆ ಶಿವಂ ದುಬೆ ಕೈಗೆ ಸುಲಭದ ಕ್ಯಾಚ್ ನೀಡಿ ನಿರ್ಗಮಿಸಿದರು.
37 ವರ್ಷದ ಹಿಟ್ ಮ್ಯಾನ್ ಇಲ್ಲಿಯ ತನಕ ಐಪಿಎಲ್ ನಲ್ಲಿ 258 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಇದು ಅವರ 18 ನೇ ಶೂನ್ಯ ಸಂಪಾದನೆಯಾಗಿದೆ. ಈ ಸಾಧನೆಯನ್ನು ಅವರೊಂದಿಗೆ ಈಗಾಗಲೇ ಇನ್ನಿಬ್ಬರು ಈಗಾಗಲೇ ಹಂಚಿಕೊಂಡಿದ್ದಾರೆ. ಅದರಲ್ಲಿ ಒಬ್ಬರು ಭಾರತದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್, ಇನ್ನೊಬ್ಬರು ಆಸ್ಟ್ರೇಲಿಯಾ ಗ್ಲೆನ್ ಮ್ಯಾಕ್ಸವೆಲ್. ಎರಡನೇ ಸ್ಥಾನದಲ್ಲಿ ಸುನೀಲ್ ನಾರೀನ್ ಹಾಗೂ ಪಿಯೂಷ್ ಚಾವ್ಲಾ ಅವರು 16 ಶೂನ್ಯಗಳೊಂದಿಗೆ ಮತ್ತು ರಶೀದ್ ಖಾನ್ ಹಾಗೂ ಮನದೀಪ್ ಸಿಂಗ್ ಅವರು 15 ಸೊನ್ನೆ ಸುತ್ತಿದ್ದಾರೆ.
ಇನ್ನು ಐಪಿಎಲ್ ನಲ್ಲಿ ಆರು ಸಾವಿರ ರನ್ ಬಾರಿಸಿದ ಕೀರ್ತಿಯೂ ರೋಹಿತ್ ಹೆಸರಿನಲ್ಲಿದೆ. ಇನ್ನು ಐಪಿಎಲ್ ಒಂದು ಶತಕ ಮತ್ತು 40 ಅರ್ಧ ಶತಕಗಳನ್ನು ಇವರು ಹೊಡೆದಿದ್ದಾರೆ. ಐಪಿಎಲ್ ನಲ್ಲಿ ಇವರ ಸರ್ವಾಧೀಕ ದಾಖಲೆ 109. ಇವರು ಇಲ್ಲಿಯ ತನಕ 503 ಬೌಂಡರಿ ಹಾಗೂ 233 ಸಿಕ್ಸರ್ ಗಳನ್ನು ಕೂಡ ಸಿಡಿಸಿದ್ದಾರೆ.
Leave A Reply