ಬಜೆಟಿನಲ್ಲಿ ಅಲ್ಪಸಂಖ್ಯಾತರ ಒಲೈಕೆ ವಿಪರೀತ – ಹಿಂದೂ ಜನಜಾಗೃತಿ

ಕರ್ನಾಟಕ ಸರಕಾರವು ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 4500 ಕೋಟಿ ರೂ. ಅನುದಾನ ಬಿಡುಗಡೆ ಮತ್ತು ಸರಕಾರಿ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿದ್ದನ್ನು ರದ್ದು ಮಾಡಬೇಕು – ಶ್ರೀ ಮೋಹನ್ ಗೌಡ
ಮಂಗಳೂರು : ಕರ್ನಾಟಕ ಸರಕಾರವು ಇತ್ತಿಚೇಗೆ ತನ್ನ ಬಜೆಟ್ ದಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷವಾದ ಅನುದಾನವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಮುಸಲ್ಮಾನ ಕಾಲೋನಿಗಳಿಗೆ 1000 ಕೋಟಿ, ಮುಸಲ್ಮಾನ ಇಮಾಮರಿಗೆ ಮಾಸಿಕ 6000 ರೂಪಾಯಿ ವೇತನ, ಮುಸಲ್ಮಾನ ಹೆಣ್ಣುಮಕ್ಕಳ ಮದುವೆಗೆ 50 ಸಾವಿರ ರೂಪಾಯಿ, ಮುಸಲ್ಮಾನ ವಿದ್ಯಾರ್ಥಿಗಳ ವಿದೇಶೀ ಶಿಷ್ಯವೇತನಕ್ಕೆ 30 ಲಕ್ಷ ರೂ., ಮುಸಲ್ಮಾನ ಹೆಣ್ಣುಮಕ್ಕಳಿಗೆ ಆತ್ಮ ರಕ್ಷಣೆ ತರಬೇತಿ, ವಕ್ಸ್ ಬೋರ್ಡ ಆಸ್ತಿ ರಕ್ಷಣೆಗೆ 150 ಕೋಟಿ ರೂ. ಅನುದಾನ, ಮುಸಲ್ಮಾನರು ಬಹುಸಂಖ್ಯಾತರಿರುವ ಪ್ರದೇಶದಲ್ಲಿ ಐಟಿಐ ಕಾಲೇಜಿಗೆ ಮಂಜೂರಾತಿ, 100 ಉರ್ದುಶಾಲೆಗಳ ಸ್ಥಾಪನೆ, ಮುಸಲ್ಮಾನ ಯುವಕರ ಸ್ಟಾರ್ಟ ಆಪಗೆ ಸರಕಾರೀ ಸಹಾಯದನ, ಮುಸಲ್ಮಾನ ಮಕಳಿಗೆ ಪ್ರತಿ ಪರ ತರಬೇತಿ, ಹಜ್ ಭವನಕೆ, ಅನುದಾನ. ಹೀಗೆ ಸರಕಾರವು ಅಲ್ಪಸಂಖ್ಯಾತರ ಅಭಿವೃದ್ಧಿ ನೆಪದಲ್ಲಿ 4500 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಅದಲ್ಲ ಸರಕಾರದ ಟೆಂಡರ್ ಗಳಲ್ಲಿ ಅಲ್ಪಸಂಖ್ಯಾತರಿಗೆ 4% ಮೀಸಲಾತಿ ನೀಡುವ ಮಸೂದೆಯನ್ನು ಸಹ ಮಂಡಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶವಿಲ್ಲದಿರುವಾಗಲೂ, ಸರಕಾರವು ಸಂವಿಧಾನಕ್ಕೆ ವಿರುದ್ಧವಾಗಿ ಸಂವಿಧಾನಬಾಹಿರ ಮೀಸಲಾತಿಯನ್ನು ನೀಡಿದೆ ಎಂದು ಹಿಂದೂ ಜನಜಾಗೃತಿ ರಾಜ್ಯ ವಕ್ತಾರರಾದ ಶ್ರೀ ಮೋಹನ್ ಗೌಡ ಇವರು ಹೇಳಿದರು.
ಈ ವಿರುದ್ಧ ಸಮಸ್ತ ಹಿಂದೂಪರ ಸಂಘಟನೆಗಳು ಇಂದು ಮಂಗಳೂರಿನ ಮಿನಿ ವಿಧಾನಸೌದದ ಎದುರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳಾದ ಮುಳ್ಳೈ ಮುಹಿಲನ್ ಇವರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ತಲುಪಿಸಲಾಯಿತು. ಈ ಆಂದೋಲನದಲ್ಲಿ ಹಿಂದೂ ಯುವ ಸೇನೆ ಮುಖಂಡರಾದ ಜನಾರ್ಧನ ಅರ್ಕುಳ, ರೈತ ಸಂಘದ ರಾಜ್ಯ ಪ್ರಮುಖರಾದ ಗಿರೀಶ್ ಕೊಟ್ಟಾರಿ, ಲೊಕೇಶ್ ಕುತ್ತಾರ್, ದಿನಕರ ಬಜಾಲ್, ಧರ್ಮೇಂದ್ರ ಉಳ್ಳಾಲ, ಸತೀಶ್ , ವಸಂತ್ ರೈ ಮುಂತಾದ ಹಿಂದುತ್ವನಿಷ್ಠರು ಉಪಸ್ಥಿತರಿದ್ದರು.
ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ೩೪ ಸಾವಿರ ಸೀ ಗ್ರೇಡ್ ದೇವಸ್ಥಾನಗಳ ಅರ್ಚಕರಿಗೆ ಯಾವುದೇ ಸಂಬಳ ಇಲ್ಲ. ಆದರೆ ಇಮಾಮ್‌ರಿಗೆ ೬ ಸಾವಿರ ರೂಪಾಯಿ ಅನುದಾನ ನೀಡಲಾಗಿದೆ. ಅದಲ್ಲದೇ ಧಾರ್ಮಿಕ ದತ್ತಿ ಇಲಾಖೆಯ ಸೀ ಗ್ರೇಡ್ ನ ಸಾವಿರಾರು ದೇವಸ್ಥಾನಗಳು ಜೀರ್ಣೋದ್ದಾರ, ಸುಣ್ಣ ಬಣ್ಣ ಇಲ್ಲದೇ ಶಿಥಿಲಾವಸ್ಥೆಗೆ ತಲುಪಿವೆ. ಆದರೆ ಪ್ರಾಚೀನ ದೇವಸ್ಥಾನಗಳ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ಯಾವುದೇ ಅನುದಾನವಿಲ್ಲ. ಹೀಗೆ ಸರಕಾರವು ಸಾರ್ವಜನಿಕರ ತೆರಿಗೆ ಹಣವನ್ನು ಕೇವಲ ಒಂದೇ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸುವುದು ಭಾರತದ ಸಂವಿಧಾನದ ಕಲಂ ೧೪, ೧೫ ರ ಉಲ್ಲಂಘನೆಯಾಗಿದೆ. ಹಾಗಾಗಿ ಸರಕಾರದ ಈ ವರ್ಷದ ಹಣಕಾಸು ವಿಧೇಯಕಕ್ಕೆ ಅನುಮೋದನೆ ನೀಡಬಾರದು ಎಂದು ಆಗ್ರಹಿಸುತ್ತಿದ್ದೇವೆ ಎಂದು ಆಂದೋಲನ ನಡಿಸಿ ಮನವಿಯನ್ನು ನೀಡಲಾಯಿತು.
Leave A Reply