• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಶ್ರೀರಾಮ ಸೇನೆಯಿಂದ ನೂರಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ತ್ರಿಶೂಲ ವಿತರಣೆ!

Tulunadu News Posted On April 19, 2025
0


0
Shares
  • Share On Facebook
  • Tweet It

ಹುಬ್ಬಳ್ಳಿಯಲ್ಲಿ ರಾಣಿ ಅಬ್ಬಕ್ಕ 500 ನೇ ಜಯಂತಿ, ರಾಣಿ ಚೆನ್ನಮ್ಮ 200 ನೇ ಜಯಂತಿ, ನೇಹಾ ಹಿರೇಮಠಗೆ ವಾರ್ಷಿಕ ಶ್ರದ್ಧಾಂಜಲಿ, ತ್ರಿಶೂಲ ದೀಕ್ಷೆ, ಲವ್ ಜಿಹಾದ್ ಪುಸ್ತಕ ಹಾಗೂ ಯೂಟ್ಯೂಬ್ ವಿಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರಿಗೆ ಶ್ರೀರಾಮಸೇನೆಯಿಂದ ಸಂಘಟನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತ್ರಿಶೂಲ ವಿತರಿಸಿದರು.

ನಾವು ನೀಡುತ್ತಿರುವ ತ್ರಿಶೂಲ ಬಗ್ಗೆ ಯಾರೂ ಭಯ ಪಡಬೇಡಿ. ಹಿಡಿಕೆ ಬಿಟ್ಟು ಆರು ಇಂಚು ಉದ್ದ ಇದ್ದರೆ ಅದು ಆಯುಧವಾಗುತ್ತದೆ. ಆದರೆ ನಾವು ನೀಡುತ್ತಿರುವುದು ಮೂರು ಇಂಚಿನ ತ್ರಿಶೂಲ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನೇಹಾ ಹೀರೆಮಠ ಕೊಲೆಯಾಗಿ ವರ್ಷವಾದರೂ ನ್ಯಾಯ ಸಿಕ್ಕಿಲ್ಲ. ಆರೋಪಿ ಜೈಲಿನಲ್ಲಿ ಆರಾಮವಾಗಿ ಕಾಲ ಕಳೆಯುತ್ತಿದ್ದಾನೆ. ಆತನಿಗೆ ಶಿಕ್ಷೆಯಾಗಿಲ್ಲ ಯಾಕೆ ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದರು. ನೇಹಾ ಹತ್ಯೆಯಾದ ಸಂದರ್ಭದಲ್ಲಿ ಮೂರೇ ತಿಂಗಳಲ್ಲಿ ಶಿಕ್ಷೆ ಆಗುವಂತೆ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದ್ದರು. 1 ವರ್ಷವಾದರೂ ಶಿಕ್ಷೆ ಆಗಿಲ್ಲ. ಸಿದ್ಧರಾಮಯ್ಯನವರೇ ನಿದ್ದೆ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ ಅವರು ಹುಬ್ಬಳ್ಳಿಯ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಎನ್ ಕೌಂಟರ್ ಆದಂತೆ ಉಳಿದ ಪ್ರಕರಣಗಳಲ್ಲಿಯೂ ತ್ವರಿತ ನ್ಯಾಯದಾನ ಆಗಬೇಕು. ನೇಹಾ ಹತ್ಯೆ ಆರೋಪಿಗೆ ಶೀಘ್ರ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಅವರು ಹೇಳಿದರು.

ಶ್ರೀರಾಮ ಸೇನೆಯವರು ನೀಡಿದ ತ್ರಿಶೂಲವನ್ನು ಮಹಿಳೆಯರು ಬ್ಯಾಗಿನಲ್ಲಿ ಇಟ್ಟುಕೊಳ್ಳಿ. ತೊಂದರೆ ಕೊಟ್ಟವರಿಗೆ ಅವರಿಂದ ಚುಚ್ಚಿ. ಪೊಲೀಸರು, ಸರಕಾರ, ಮಹಿಳೆಯರ ರಕ್ಷಣೆ ನೀಡುತ್ತಿಲ್ಲ. ಹೀಗಾಗಿ ಇದು ಅನಿವಾರ್ಯ. ನಾವೇ ರಕ್ಷಣೆ ಮಾಡಿಕೊಳ್ಳಬೇಕು. ನಮ್ಮ ಹೆಣ್ಣು ಮಕ್ಕಳನ್ನು ನಾವೇ ದುರ್ಗಾಮಾತೆಯರಾಗಿ ರಕ್ಷಣೆ ಮಾಡಿಕೊಳ್ಳಬೇಕು ಎಂದರು. ಆಯುಧ ಪೂಜೆಯಂದು ಚಾಕು, ಕೊಡಲಿ, ತ್ರಿಶೂಲಕ್ಕೆ ಪೂಜೆ ಮಾಡಿ ಎಂದರು. ಕಾರ್ಯಕ್ರಮದಲ್ಲಿ ಲವ್ ಜಿಹಾದ್ ಸಂತ್ರಸ್ತರು ತಮ್ಮ ಕಹಿ ಅನುಭವಗಳನ್ನು ಬಿಚ್ಚಿಟ್ಟರು. ಈ ವೇಳೆ ಮಹಿಳಾ ವಕೀಲರಿಂದ ಕಾನೂನು ತಿಳುವಳಿಕೆ ನೀಡಲಾಯಿತು. ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ನೇಹಾ ಹಿರೇಮಠ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
  • Popular Posts

    • 1
      ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!

  • Privacy Policy
  • Contact
© Tulunadu Infomedia.

Press enter/return to begin your search