130 ನ್ಯೂಕ್ಲಿಯರ್ ಬಾಂಬ್ ಗಳಿವೆ, ಪ್ರದರ್ಶನಕ್ಕೆ ಇಟ್ಟಿದ್ದಲ್ಲ- ಪಾಕ್ ಸಚಿವ ಎಚ್ಚರಿಕೆ!

ಒಂದು ವೇಳೆ ಸಿಂಧೂ ನದಿ ಜಲ ಒಪ್ಪಂದ ಶಾಶ್ವತವಾಗಿ ರದ್ದಾದರೆ ಪಾಕಿಸ್ತಾನದಲ್ಲಿರುವ 130 ನ್ಯೂಕ್ಲಿಯರ್ ಬಾಂಬ್ ಗಳನ್ನು ನಾವು ಭಾರತದ ವಿರುದ್ಧ ಬಳಸಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಪಾಕಿಸ್ತಾನದ ರೈಲ್ವೆ ಸಚಿವ ಅನೀಫ್ ಅಬ್ಬಾಸಿ ಹೇಳಿದ್ದಾರೆ. ಅದರೊಂದಿಗೆ ಘೋರಿ, ಶಾಹಿನ್, ಘಾಜ್ನವಿ ಮಿಸೈಲ್ ಗಳು ಕೂಡ ಭಾರತದೆಡೆ ಮುಖ ಮಾಡಿ ನಿಂತಿವೆ. ಇದನ್ನೆಲ್ಲ ನಾವು ಪ್ರದರ್ಶನಕ್ಕೆ ಇಟ್ಟಿದ್ದಲ್ಲ. ಇದು ಭಾರತದ ವಿರುದ್ಧ ಬಳಸುವುದಕ್ಕೆನೆ ನಮ್ಮ ಯೋಜನೆ ಇರುವುದು ಎಂದು ಅಬ್ಬಾಸಿ ದ್ವೇಷ ಕಿಡಿಕಾರಿದ್ದಾರೆ.
ನದಿಗಳ ನೀರನ್ನು ಭಾರತ ಬಿಡಲು ಅಡ್ಡಗಾಲು ಹಾಕಿದರೆ ಯುದ್ಧಕ್ಕೆ ಭಾರತ ತಯಾರಾಗಲೇಬೇಕಿದೆ. ಮಿಸೈಲ್ ಗಳನ್ನು ನಾವು ಚೆಂದ ನೋಡಲು ಇಟ್ಟಿದ್ದಲ್ಲ. 130 ನ್ಯೂಕ್ಲಿಯರ್ ಆಯುಧಗಳು ಮಾಡೆಲ್ ನಿರ್ಮಿಸಲು ಸಂರಕ್ಷಿಸಿ ಇಟ್ಟಿದ್ದಲ್ಲ. ಇನ್ನು ಇದನ್ನು ಪಾಕಿಸ್ತಾನದ ಯಾವ ಯಾವ ಮೂಲೆಯಲ್ಲಿ ಸಂರಕ್ಷಿಸಿ ಇಟ್ಟಿದ್ದೇವೆ ಎನ್ನುವ ಸುಳಿವು ಯಾರ ಬಳಿಯೂ ಇಲ್ಲ. ಇದು ಜಗತ್ತಿಗೆ ಗೊತ್ತಿದೆ. ಇದೆಲ್ಲಾ ಭಾರತಕ್ಕೆ ಗೊತ್ತಿಲ್ಲದೇ ಇರಲು ಸಾಧ್ಯವಿಲ್ಲ. ಇಲ್ಲದಿದ್ದರೆ ಇಷ್ಟೊತ್ತಿಗೆ ಪಾಕಿಸ್ತಾನದ ಮೇಲೆ ಭಾರತ ಸಮರ ಸಾರಿ ಆಗುತ್ತಿತ್ತು ಎಂದು ಹನೀಫ್ ಅಬ್ಬಾಸಿ ಹೇಳಿದ್ದಾರೆ.
ಒಂದು ವೇಳೆ ಭಾರತ ನೇರವಾಗಿ ಪಾಕಿಸ್ತಾನದ ಮೇಲೆ ದಾಳಿ ಮಾಡಲಿ ಎಂದೇ ಪಾಕಿಗಳ ದುಷ್ಟ ಆಡಳಿತ ಕಾಯುತ್ತಾ ಇದೆ. ಯಾಕೆಂದರೆ ಯುದ್ಧ ಆದರೆ ಮೊದಲೇ ಸತ್ತಂತಿರುವ ಪಾಕಿಸ್ತಾನಕ್ಕೆ ಕಳೆದುಕೊಳ್ಳುವುದು ಏನಿಲ್ಲ. ಅದರ ಬದಲಿಗೆ ಅದಕ್ಕೆ ಲಾಭ ಬೇರೆ. ಜಗತ್ತಿನ ಮುಂದೆ ಮತ್ತೆ ಟವಲ್ಲನ್ನು ಹಾಸಿ ನಮಗೆ ಆರ್ಥಿಕ ನೆರವನ್ನು ನೀಡಿ. ಭಾರತ ನಮ್ಮ ಮೇಲೆ ದಾಳಿ ಮಾಡುತ್ತಿದೆ ಎಂದು ಅಗಲಾಚಬಹುದು.
ಅದರದ್ದೇ ಒರಗೆಯ, ಕಸಿನ್ ನಂತಿರುವ ಕೆಲವು ರಾಷ್ಟ್ರಗಳು ಖಂಡಿತವಾಗಿಯೂ ಆರ್ಥಿಕವಾಗಿ ಸಹಾಯ ಮಾಡಲು ಮುಂದಾಗುತ್ತವೆ. ಕೆಲವು ಬಹಿರಂಗವಾಗಿ ಸಹಾಯಕ್ಕೆ ನಿಲ್ಲಬಹುದು. ಕೆಲವು ಭಾರತದ ಎದುರು ಬೆತ್ತಲಾಗುವುದು ಬೇಡಾ ಎಂದು ಹಿಂದಿನ ಬಾಗಿಲಿನಿಂದ ಸಹಾಯ ಮಾಡಬಹುದು. ಆದರೆ ಯುದ್ಧವಾದರೆ ಭಾರತದ ಆರ್ಥಿಕ ವ್ಯವಸ್ಥೆ, ರಕ್ಷಣೆಗಾಗಿ ಖರ್ಚು ಈ ಎಲ್ಲವನ್ನು ನೋಡಿಕೊಂಡೇ ಏನಾದರೂ ಹೆಜ್ಜೆ ಇಡಬೇಕಾಗುತ್ತದೆ. ಆದರೆ ಪಾಕಿಸ್ತಾನಕ್ಕೆ ಅದರ ಪರಿವೇ ಇಲ್ಲ. ಇನ್ನು ತಲೆಕೆಟ್ಟರೆ ನ್ಯೂಕ್ಲಿಯರ್ ಬಾಂಬ್ ಭಾರತದ ಮೇಲೆ ಹಾಕಿ ಚೆಂದ ನೋಡುವುದಕ್ಕೂ ಪಾಕಿಸ್ತಾನ ಹಿಂದೆ ಮುಂದೆ ನೋಡಲಾರದು. ಯಾಕೆಂದರೆ ವಿಶ್ವಸಂಸ್ಥೆಯಲ್ಲಿ ಅದಕ್ಕೆ ಮೊದಲೇ ಮರ್ಯಾದೆ ಇಲ್ಲ. ಇನ್ನು ಭಯೋತ್ಪಾದಕ ರಾಷ್ಟ್ರ ಏನು ಮಾಡಿದರೂ ಹೊಲಸಿನಿಂದ ಮೇಲೆ ಬರಲು ಸಾಧ್ಯವಿಲ್ಲ. ಆದ್ದರಿಂದ ಪಾಕಿ ಆಡಳಿತಗಾರರು ಯುದ್ಧವಾಗಲಿ ಎಂದೇ ಬಯಸುತ್ತಿದ್ದಾರೆ. ಸತ್ತರೆ ಕೆಲವು ಭಯೋತ್ಪಾದಕರಲ್ವಾ ಎನ್ನುವ ಧೋರಣೆ ಅವರದ್ದು. ಒಂದು ವೇಳೆ ಭಾರತದ ದಾಳಿಯಲ್ಲಿ ನಾಗರಿಕರು ಸತ್ತರೆ ಅದನ್ನೇ ಹಿಡಿದು ಭಾರತದ ಇಮೇಜನ್ನು ಹಾಳು ಮಾಡಲು ಅವರು ತಂತ್ರ ಹೂಡಿ ಆಗಿರುತ್ತದೆ.
Leave A Reply