• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಲಷ್ಕರ್ ಈ ತೈಬಾ ಸಹಸಂಸ್ಥಾಪಕನಿಗೆ ಮನೆಯಲ್ಲಿಯೇ ಭೀಕರ ದಾಳಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು!

Tulunadu News Posted On May 21, 2025
0


0
Shares
  • Share On Facebook
  • Tweet It

ಲಷ್ಕರ್ ಈ ತೈಬಾದ ಸಹಸಂಸ್ಥಾಪಕ ಅಮೀರ್ ಹಂಝಾ ಮೇಲೆ ಅವನ ಮನೆಯಲ್ಲಿಯೇ ಅಪರಿಚಿತರಿಂದ ಭೀಕರ ದಾಳಿ ನಡೆದಿದೆ. ಸಾವು ಬದುಕಿನ ಉಯ್ಯಾಲೆಯಲ್ಲಿ ಒದ್ದಾಡುತ್ತಿರುವ ಹಂಝಾ ಆಸ್ಪತ್ರೆಗೆ ದಾಖಲಾಗಿದ್ದಾನೆ. 66 ವರ್ಷದ ಹಂಝಾನನ್ನು ಲಾಹೋರ್ ನಲ್ಲಿರುವ ಪಾಕಿಸ್ತಾನದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವನಿಗೆ ಪಾಕಿಸ್ತಾನದ ಐಎಸ್ ಐ ಸುತ್ತುವರೆದು ಏಳು ಸುತ್ತಿನ ಕೋಟೆಯ ತರ ರಕ್ಷಣೆ ನೀಡುತ್ತಿದೆ.

ಈ ಬಗ್ಗೆ ಲಷ್ಕರೆ ಸಂಘಟನೆಯ ಸದಸ್ಯರಿಗೆ ಸಂದೇಶ ನೀಡಲಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ನಮ್ಮ ಸಂಘಟನೆಯ ಸದಸ್ಯರು ವಿಚಲಿತರಾಗದೇ ಒಗ್ಗಟ್ಟನ್ನು ಕಾಪಾಡಬೇಕು. ಇದೊಂದು ಸಾಮಾನ್ಯ ಅಪಘಾತ ಎನ್ನುವ ದೃಷ್ಟಿಯಿಂದಲೇ ನೋಡಬೇಕು ಎಂದು ಹೇಳಲಾಗಿದೆ.

ಲಷ್ಕರೆ ಸಂಘಟನೆಯ ಪ್ರಮುಖ ಉಗ್ರ ಅಬು ಸೈಫುಲ್ಲಾ ಮೇಲೆ ದಾಳಿ ನಡೆದು ಆತನನ್ನು ಹತ್ಯೆ ಮಾಡಿದ ಅಪರಿಚಿತ ಶೂಟರ್ ಗಳು ಮೂರು ದಿನಗಳ ಅಂತರದಲ್ಲಿ ಮತ್ತೊಬ್ಬ ಪಾತಕಿಯ ಮೇಲೆ ದಾಳಿ ಮಾಡಿರುವ ಘಟನೆಯಿಂದ ಪಾಕಿಸ್ತಾನದ ಪೊಲೀಸ್ ವ್ಯವಸ್ಥೆಯ ಜಂಘಾಬಲವೇ ಹುದುಗಿ ಹೋಗಿದೆ. ಲಷ್ಕರೆ ಉಗ್ರ ಸಂಘಟನೆಯನ್ನು ಸ್ಥಾಪಿಸಿದ 17 ಉಗ್ರರ ಪೈಕಿ ಹಂಝಾ ಒಬ್ಬನಾಗಿದ್ದು, ಇತನ ಮೇಲೆ ಅವನ ಮನೆಯೊಳಗೆ ದಾಳಿ ನಡೆದಿರುವುದು ಅಪರಿಚಿತ ಶೂಟರ್ ಗಳ ನೈಪುಣ್ಯತೆಯನ್ನು ಬಯಲಿಗೆ ಎಳೆದಿದೆ.

ಮೌಲಾನಾ ಅಮೀರ್ ಹಂಝಾ, 1959 ಮೇ 10 ರಂದು ಜನಿಸಿದ್ದು, ಅಫ್ಘಾನ್ ಮುಜಾಹಿದ್ದೀನ್ ಸಂಘಟನೆಯ ಪ್ರಮುಖನಾಗಿದ್ದು, ಮೂಲಭೂತವಾದಿ ಸಂಘಟನೆ ಲಷ್ಕರೆ ಈ ತೈಬಾದ ಸಹ ಸಂಸ್ಥಾಪಕನ ನೆಲೆಯಲ್ಲಿ ಬಹಿರಂಗ ಸಮಾವೇಶದಲ್ಲಿ ಪ್ರಬಲ ಭಾಷಣಗಳನ್ನು ಮಾಡುತ್ತಿದ್ದ. ಬರಹಗಾರನೂ ಆಗಿದ್ದ ಹಂಝಾ 2000 ದ ವರೆಗೆ ಭಾರತದಲ್ಲಿ ವಿಧ್ವಂಸಕ ಕೃತ್ಯ ಮಾಡಿಸುವಲ್ಲಿ ಸಕ್ರಿಯನಾಗಿದ್ದ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗುಜರ್ನವಾಲಾ ಪ್ರದೇಶದಲ್ಲಿ ಹುಟ್ಟಿ ಬೆಳೆದ ಹಂಝಾ ಸೈಫುಲ್ಲಾ ಜೊತೆ

ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಕೇಂದ್ರದ ಮೇಲೆ ದಾಳಿ ಮಾಡಿದ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ. ಅಮೇರಿಕಾದ ಘೋಷಿತ ಭಯೋತ್ಪಾದಕರ ಪಟ್ಟಿಯಲ್ಲಿ ಅಮೀರ್ ಹಂಝಾನ ಹೆಸರು ಇದೆ. ಇವನು ಭಯೋತ್ಪಾದಕ ಕೃತ್ಯಗಳಿಗೆ ನಿಧಿ ಸಂಗ್ರಹಿಸುವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ. ಈತ ಬದುಕಿ ಉಳಿಯುವುದು ಕಷ್ಟ ಎನ್ನಲಾಗುತ್ತಿದೆ.

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Tulunadu News November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Tulunadu News November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ

  • Privacy Policy
  • Contact
© Tulunadu Infomedia.

Press enter/return to begin your search