ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!

ನಕ್ಸಲರ ಅವಸಾನ ಶುರುವಾಗಿದೆ. ನಕ್ಸಲ್ ಚಳುವಳಿ ಬಹುತೇಕ ಕೊನೆಯ ಹಂತಕ್ಕೆ ತಲುಪಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಅದಕ್ಕೆ ಕಾರಣ ರಕ್ಷಣಾ ಪಡೆಗಳು ಇತ್ತೀಚಿನ ವರ್ಷಗಳಲ್ಲಿಯೇ ನಕ್ಸಲರ ವಿರುದ್ಧದ ಅತೀ ದೊಡ್ಡ ಸಮರದಲ್ಲಿ ಬಹುದೊಡ್ಡ ಬೇಟೆಯಾಡಿರುವುದು. ಮಾವೋವಾದಿಗಳ ಸರ್ವೋಚ್ಚ ನಾಯಕ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಸವರಾಜನ ಹತ್ಯೆಯಿಂದಾಗಿ ಸದ್ಯ ನಕ್ಸಲ್ ಚಟುವಟಿಕೆ ಕೊನೆಯಾಗುವ ಸಾಧ್ಯತೆ ದಟ್ಟವಾಗಿದೆ. ಈಗ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಚದುರಿ ಹೋಗಿರುವ ನಕ್ಸಲರಿಗೆ ನಾಯಕನೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸವರಾಜನ ತಲೆಗೆ 1.5 ಕೋಟಿ ರೂಪಾಯಿ ಹಣ ಘೋಷಣೆಯಾಗಿತ್ತು. ಇವನು ಆಂಧ್ರಪ್ರದೇಶದ ವಾರಂಗಲ್ ನ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜಿನಿಂದ ಬಿಟೆಕ್ ಪದವಿ ಪಡೆದಿದ್ದ. ಬಸವರಾಜ ಎಲ್ ಟಿಟಿಇನಿಂದ ಗೆರಿಲ್ಲಾ ರಣತಂತ್ರಗಳನ್ನು ಅಧ್ಯಯನ ಮಾಡಿಕೊಂಡು ಅದರಲ್ಲಿ ನಿಷ್ಣಾತನಾಗಿದ್ದ. ಕಳೆದ 50 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಬಸವರಾಜನನ್ನು 50 ಗಂಟೆಯ ಧೀರ್ಘ ಗುಂಡಿನ ಚಕಮಕಿಯ ನಂತರ ಹತ್ಯೆ ಮಾಡಲಾಗಿದೆ.
ಇವನ ಸುತ್ತಲೂ ಯಾವಾಗಲೂ ಪ್ರಬಲ ಸುರಕ್ಷಾ ಕೋಟೆಯಂತೆ ನಕ್ಸಲರು ಕಾವಲು ಕಾಯುತ್ತಿದ್ದರು. ಒಂದು ಕಡೆಯಿಂದ ಇನ್ನೊಂದು ಕಡೆ ಹೋಗುವಾಗ ಕನಿಷ್ಟ 40 ಜನ ಬಂಧೂಕುದಾರಿಗಳು ಇವನಿಗೆ ರಕ್ಷಣೆ ಒದಗಿಸುತ್ತಿದ್ದರು. ಇವನು ದಶಕಗಳಿಂದ ನಕ್ಸಲರ ಸರ್ವೋಚ್ಚ ನಾಯಕನಾಗಿ ಬೆಳೆದಿದ್ದ. ಇವನು ಇಲ್ಲಿಯ ತನಕ ಸುಮಾರು 76 ಯೋಧರನ್ನು ಮತ್ತು 30 ರಷ್ಟು ರಾಜಕಾರಣಿಗಳು ಹತ್ಯೆ ಮಾಡಿದ್ದಾನೆ ಎಂದು ಅಂದಾಜಿಸಲಾಗಿದೆ. ಇವನ ಜೊತೆ ಯಾವಾಗಲೂ ಒಂದು ಲ್ಯಾಪಟಾಪ್ ಇತ್ತು. ಇವನ ಹತ್ಯೆಯೊಂದಿಗೆ ನಕ್ಸಲ್ ಚಟುವಟಿಕೆಯ ಮಹಾನ್ ಅಧ್ಯಾಯವೊಂದು ಕೊನೆಗೊಂಡಿದೆ.
ಇವನ ಅಂತ್ಯ ನಗರ ನಕ್ಸಲರಿಗೂ, ಜೆಎನ್ ಯುನಲ್ಲಿ ತಿಂದು ತೇಗಿ, ವಿದ್ಯಾರ್ಥಿಗಳ ಸೋಗಿನಲ್ಲಿ ಅಡಗಿರುವ ನಗರ ನಕ್ಸಲರಿಗೂ ನುಂಗಲಾರದ ತುತ್ತಾಗಿದೆ. ಛತ್ತೀಸಘಡ್ ರಾಜ್ಯದಲ್ಲಿ ನಾರಾಯಣಪುರ, ಬಿಜಾಪುರ ಮತ್ತು ದಾಂತೇವಾಡ್ ಈ ಮೂರು ಜಿಲ್ಲೆಗಳು ಸೇರುವ ದಟ್ಟಾರಣ್ಯ ಅಬುಜಮಾದ್ ಎನ್ನುವಲ್ಲಿ ನಕ್ಸಲರ ಮತ್ತು ಸುರಕ್ಷತಾ ಪಡೆಗಳ ನಡುವಿನ ಗುಂಡಿನ ಕಾಳಗದಲ್ಲಿ ನಂಬಲ ಕೇಶವ ರಾವ್ ಯಾನೆ ಬಸವರಾಜು ಇತರ 26 ನಕ್ಸಲರೊಂದಿಗೆ ಹತ್ಯೆಯಾಗಿದ್ದಾನೆ.
2018 ರಿಂದ ನಕ್ಸಲರು ಛತ್ತಿಸ್ ಘಡದ ಬಸ್ತಾರ್ ಜಿಲ್ಲೆಯಲ್ಲಿ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದರು. ಪೊಲೀಸರ ಮೇಲೆ, ರಾಜಕಾರಣಿಗಳ ಮೇಲೆ ಅನೇಕ ದಾಳಿಗಳನ್ನು ಸಂಘಟಿಸಿದ್ದರು. 2021 ರಲ್ಲಿ ನಕ್ಸಲರ ಒಂದೇ ದಾಳಿಯಲ್ಲಿ 22 ರಕ್ಷಣಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು. 2020 ರಲ್ಲಿ ಸುಕ್ಮಾ ಪ್ರದೇಶದಲ್ಲಿ 17 ಜನ ಸುರಕ್ಷಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು. ದಾಂತೇವಾಡದಲ್ಲಿ 2019 ಎಪ್ರಿಲ್ ತಿಂಗಳಲ್ಲಿ ಬಿಜೆಪಿ ಶಾಸಕ ಭೀಮ ಮಾಂಡವಿ ಹಾಗೂ 4 ರಕ್ಷಣಾ ಸಿಬ್ಬಂದಿಗಳನ್ನು ಕೂಡ ಹತ್ಯೆಗೈಯಲಾಗಿತ್ತು.
Leave A Reply