ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!

ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಜ್ ಲಿ. ನ ಅಧಿಕೃತ ಬ್ರಾಂಡ್ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರನ್ನು ರಾಜ್ಯ ಸರಕಾರ ನೇಮಿಸಿದೆ. ಇವರು ಎರಡು ವರ್ಷ ಎರಡು ದಿನಗಳ ಅವಧಿಗೆ ನೇಮಕವಾಗಿದ್ದಾರೆ. ಇವರಿಗೆ ಇದಕ್ಕಾಗಿ ಆರು ಕೋಟಿ 20 ಲಕ್ಷ ರೂಪಾಯಿಗಳನ್ನು ನೀಡುವ ಒಪ್ಪಂದ ಮಾಡಲಾಗಿದೆ.
ಈ ವಿಷಯದಲ್ಲಿ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಏಕ್ಸ್ ನಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಯಾವ ನಟಿ ಕೂಡ ಇಲ್ಲದೇ ಕಳೆದ ವರ್ಷ 400 ಕೋಟಿ ಲಾಭ ಮಾಡಿರೋ ಸೋಪ್ ಕಂಪೆನಿ. ಈಗ ಆ ದುಡ್ಡು ಹೇಗೆ ಖರ್ಚು ಮಾಡ್ಬೇಕು ಅಂತ 6 ಕೋಟಿ ಕೊಟ್ಟು ಇವರನ್ನು ಬ್ರಾಂಡ್ ಅಂಬಾಸಿಡರ್ ಮಾಡೋದೇನಿದೆ. ಬೇಕು ಅಂದ್ರೆ ಯಾಕೆ ಕರ್ನಾಟಕದಲ್ಲಿ ಯಾರು ಇಲ್ಲವೇ? ಜನರ ದುಡ್ಡನ್ನು ಹೀಗೆ ಪೋಲು ಮಾಡೋದು ಸರಿಯೇ? ಕೂಡಲೇ ಇದು ರದ್ದು ಮಾಡಿ. ಹೀಗೆ ಬರೆದು ಸಚಿವರಾದ ಎಂಬಿ ಪಾಟೀಲ್ ಹಾಗೂ ಸಿಎಂ ಕಚೇರಿಗೆ ಟ್ಯಾಗ್ ಮಾಡಿದ್ದಾರೆ.
ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಈ ವಿಷಯ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ. ತಮನ್ನಾ ಭಾಟಿಯಾ ಅವರು ರಾಷ್ಟ್ರದ ಪ್ರಖ್ಯಾತ ನಟಿ. ಆದರೆ ಸರಕಾರದ ಸೋಪು ಮತ್ತು ಡಿಟರ್ಜೆಂಟ್ ಪ್ರಚಾರಕ್ಕೆ ಇವರೇ ಬೇಕಿತ್ತಾ ಎನ್ನುವ ಪ್ರಶ್ನೆ ಉದ್ಭವಿಸಲಿದೆ. ಕರ್ನಾಟಕದಲ್ಲಿಯೂ ಪ್ರಖ್ಯಾತ ಕಲಾವಿದರಿದ್ದಾರೆ. ಇನ್ನು ನಮ್ಮ ಉತ್ಪನ್ನಗಳು ರಾಷ್ಟ್ರವ್ಯಾಪಿ ಪ್ರಚಾರವಾಗಬೇಕಾದರೆ ರಾಷ್ಟ್ರದ ಪ್ರಖ್ಯಾತ ನಟ, ನಟಿಯರು ಬೇಕು ಎನ್ನುವ ಕಾರಣಕ್ಕೆ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿರಬಹುದು ಎನ್ನುವ ವಾದವೂ ಇದೆ. ಆದರೆ ಕರ್ನಾಟಕದಲ್ಲದವರೊಂದಿಗೆ ಇಷ್ಟು ದೊಡ್ಡ ಮೊತ್ತಕ್ಕೆ ಒಪ್ಪಂದ ಮಾಡಿರುವುದು ಮುಂದಿನ ದಿನಗಳಲ್ಲಿ ಇದು ಮೈಸೂರ್ ಸ್ಯಾಂಡಲ್ ಸೋಪ್ ಗೆ ಎಷ್ಟು ಲಾಭ ತರುತ್ತದೆ ಎನ್ನುವುದು ಕಾಲವೇ ಉತ್ತರಿಸುತ್ತದೆ.
Leave A Reply