ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!

ಆಂಧ್ರಪ್ರದೇಶದ ತಿರುಪತಿ ತಿರುಮಲ ದೇವಸ್ಥಾನಕ್ಕೆ ಸೇರಿದ ತಿರುಮಲ ದೇವಸ್ಥಾನದ ಕಾಂಪ್ಲೆಕ್ಸ್ ನಲ್ಲಿ ವ್ಯಕ್ತಿಯೊಬ್ಬ ನಮಾಜ್ ಸಲ್ಲಿಸುತ್ತಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಷಯ ಅಲ್ಲಿನ ಸ್ಥಳೀಯರಲ್ಲಿ ಮತ್ತು ದೇವಳದ ಭಕ್ತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವ್ಯಕ್ತಿ ನಮಾಜ್ ಸಲ್ಲಿಸಿದ್ದು ತಿರುಮಲ ಕಲ್ಯಾಣ ಮಂಟಪದ ಆವರಣದಲ್ಲಿ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ಈ ದೃಶ್ಯ ಈಗ ವೈರಲ್ ಆಗಿದೆ.
ಈ ದೃಶ್ಯದಲ್ಲಿ ತಲೆಗೆ ಧಾರ್ಮಿಕ ಶಿರಸ್ತ್ರಾಣ ಧರಿಸಿದ ವ್ಯಕ್ತಿ ನಮಾಜ್ ಸಲ್ಲಿಸುತ್ತಿದ್ದು, ಅದು ಪುರೋಹಿತ್ ಸಂಗಮ್ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇದರ ವಿಜಿಲೆನ್ಸ್ ತಂಡ ತನಿಖೆಯನ್ನು ಆರಂಭಿಸಿದ್ದು, ವ್ಯಕ್ತಿಯ ಪತ್ತೆಗಾಗಿ ತಂಡಗಳನ್ನು ರಚಿಸಲಾಗಿದೆ. ಸದ್ಯ ಆ ವ್ಯಕ್ತಿ ಬಾಡಿಗೆ ವಾಹನದ ಚಾಲಕ ಎಂದು ಹೇಳಲಾಗುತ್ತಿದ್ದು, ಹಿಂದೂ ಯಾತ್ರಿಗಳನ್ನು ಕರೆದುಕೊಂಡು ತಿರುಪತಿಗೆ ಬಂದಿದ್ದ ಎನ್ನಲಾಗುತ್ತಿದೆ. ಹತ್ತು ನಿಮಿಷದ ತನಕ
ನಮಾಜ್ ಸಲ್ಲಿಸಿ ನಂತರ ಆ ವ್ಯಕ್ತಿ ನಂತರ ಅಲ್ಲಿಂದ ತೆರಳಿದ್ದಾನೆ. ನಮಾಜ್ ಸಲ್ಲಿಸುವ ಮೊದಲು ಅಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬರ ಬಳಿ ಅನುಮತಿಯನ್ನು ಆ ಚಾಲಕ ಕೇಳಿದ್ದಾರೆ. ಅದಕ್ಕೆ ಆ ಸ್ಥಳೀಯ ವ್ಯಕ್ತಿ ಸಮ್ಮತಿಸಿದ ನಂತರವೇ ನಮಾಜ್ ಸಲ್ಲಿಸಲಾಗಿದೆ. ಆದರೆ ಅನುಮತಿ ನೀಡಿದ ವ್ಯಕ್ತಿ ನಮಾಜ್ ಸಲ್ಲಿಸುವ ದೃಶ್ಯ ಚಿತ್ರಿಸಿ ವೈರಲ್ ಮಾಡಿದ್ದಾನೆ ಎಂದು ಕೂಡ ಹೇಳಲಾಗುತ್ತದೆ. ಭಾರತೀಯ ಜನತಾ ಪಾರ್ಟಿ ಈ ಘಟನೆಯನ್ನು ಖಂಡಿಸಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ನಮಾಜ್ ಸಲ್ಲಿಸಿದ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ.
Leave A Reply