60 ಜೆಸಿಬಿ, 40 ಕ್ರೇನ್ಸ್, 3000 ಪೊಲೀಸರು, ಅಕ್ರಮ ಕಟ್ಟಡಗಳು ನೆಲಸಮ! ಎಲ್ಲಿ?

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗಳನ್ನು, ಪಾಕಿಗಳನ್ನು ಓಡಿಸಬೇಕು ಎನ್ನುವ ಕೂಗು ಎಲ್ಲೆಡೆ ಕೇಳಿಬರುತ್ತಿವೆ. ಆದರೆ ಯಾವ ರಾಜ್ಯಗಳು ಅದನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿವೆ ಎನ್ನುವುದು ಈಗಿರುವ ಪ್ರಶ್ನೆ. ಈ ನಿಟ್ಟಿನಲ್ಲಿ ಗುಜರಾತ್ ಬೃಹತ್ ಹೆಜ್ಜೆಯನ್ನು ಇಟ್ಟಿದೆ. ಅಹಮದಾಬಾದಿನ ಚಾಂಡೋಲ ಎನ್ನುವ ಪ್ರದೇಶದಲ್ಲಿ ಬೃಹತ್ ಧ್ವಂಸ ಕಾರ್ಯ ಆರಂಭಿಸಿರುವ ಅಲ್ಲಿನ ಸ್ಥಳೀಯಾಡಳಿತ ಅದಕ್ಕೆ 60 ಜೆಸಿಬಿ, 40 ಕ್ರೇನ್ಸ್ ಮತ್ತು ರಕ್ಷಣೆಗೆ 3000 ಪೊಲೀಸರನ್ನು ಬಳಸಿದೆ. ಎಲ್ಲಿ ಧ್ವಂಸ ಕಾರ್ಯ ನಡೆಯುತ್ತಿದೆಯೋ ಇಲ್ಲಿಯೇ ಈ ವರ್ಷ 200 ಅಕ್ರಮ ಬಾಂಗ್ಲಾದೇಶಿ ನಾಗರಿಕರನ್ನು ಬಂಧಿಸಲಾಗಿತ್ತು. ಮೇ 20, 2025 ರಂದು ಬೆಳಿಗ್ಗೆ 6 ಗಂಟೆಯಿಂದ ಈ ಅಕ್ರಮ ನಿರ್ಮಾಣ ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ ಆರಂಭವಾಗಿದೆ.
ವರದಿಯ ಪ್ರಕಾರ ಮೊದಲ ಹಂತದ ಕಾರ್ಯಾಚರಣೆಯಲ್ಲಿ 1.5 ಲಕ್ಷ ಚದರ ಅಡಿ ಜಾಗವನ್ನು ತೆರವುಗೊಳಿಸಿ ಆ ಏರಿಯಾವನ್ನು ಸಮತಟ್ಟುಗೊಳಿಸಲಾಗಿತ್ತು. ಈಗ ಎರಡನೇ ಹಂತದ ತೆರವು ಕಾರ್ಯಾಚರಣೆಯಲ್ಲಿ ಹೆಚ್ಚುವರಿಯಾಗಿ 2.5 ಲಕ್ಷ ಚದರ ಅಡಿ ಜಾಗವನ್ನು ತೆರವುಗೊಳಿಸಲಾಗಿದೆ. ಇದಕ್ಕಾಗಿ 60 ಜೆಸಿಬಿ, 40 ಕ್ರೇನ್ ಗಳನ್ನು ಮತ್ತು ಭದ್ರತಾ ವ್ಯವಸ್ಥೆಗಾಗಿ 3000 ಪೊಲೀಸರನ್ನು ನಿಯೋಜಿಸಲಾಗಿತ್ತು. ಮೇ 19 ರ ಮಧ್ಯಾಹ್ನದಿಂದಲೇ ಅಹಮದಾಬಾದ್ ಮುನ್ಸಿಪಲ್ ಕಾರ್ಪೋರೇಶನ್ ಧ್ವನಿವರ್ಧಕಗಳ ಮೂಲಕ ಅಕ್ರಮ ವಲಸಿಗರನ್ನು ಮನೆಬಿಟ್ಟು ತೆರಳುವಂತೆ ಸೂಚಿಸಿತ್ತು. ಕೆಲವರು ಅಲ್ಲಿ ಕಳೆದ ವಾರವಷ್ಟೇ ಬಂದು ಬೀಡುಬಿಟ್ಟಿದ್ದರು.
ಈ ಬಗ್ಗೆ ಮಾಹಿತಿ ನೀಡಿದ ಅಹಮದಾಬಾದ್ ನಗರ ಪೊಲೀಸ್ ಕಮೀಷನರ್ ಜಿ ಎಸ್ ಮಲ್ಲಿಕ್ ಅವರು ಚಂದೋಲಾ ಸರೋವರ ಬಹಳ ವರ್ಷಗಳಿಂದ ಬಾಂಗ್ಲಾದೇಶಿಗರ ಹಾಟ್ ಸ್ಪಾಟ್ ಆಗಿ ಬದಲಾಗಿದೆ. ಇನ್ನು ಅವರು ಅಕ್ರಮ ಚಟುವಟಿಕೆಗಳನ್ನು ನಡೆಸುವ ಮೂಲಕ ರಾಜ್ಯದ ಭದ್ರತೆಗೂ ಕಂಟಕವಾಗಿದ್ದರು. ಪ್ರತಿ ವರ್ಷ ಇಲ್ಲಿ 10 ರಿಂದ 40 ಅಕ್ರಮ ಬಾಂಗ್ಲಾ ದೇಶಿಗಳನ್ನು ಬಂಧಿಸಲಾಗುತ್ತಿತ್ತು. ಈ ಬಾರಿ 250 ಅಕ್ರಮ ಬಾಂಗ್ಲಾದೇಶಿಗಳನ್ನು ಬಂಧಿಸಲಾಗಿದೆ. ಎರಡನೇ ಹಂತದ ಕಾರ್ಯಾಚರಣೆಯ ವೇಳೆ ಭದ್ರತಾ ವ್ಯವಸ್ಥೆಗಾಗಿ 3000 ಪೊಲೀಸರ ನೇಮಕವಾಗಿದ್ದು, ಅದರಲ್ಲಿ ಜಂಟಿ ಆಯುಕ್ತರು, ಹೆಚ್ಚುವರಿ ಆಯುಕ್ತರು, ಆರು ಡಿಸಿಪಿಗಳು ಮತ್ತು ಪೊಲೀಸ್ ಇನ್ಸಪೆಕ್ಟರ್ ಗಳು ಒಳಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು 3000 ಪೊಲೀಸರ ಜೊತೆ 25 ಸಿಆರ್ ಪಿಎಫ್ ತುಕಡಿಗಳು ಕೂಡ ಸೇರಿವೆ. ಇನ್ನು ಡ್ರೋನ್ ಕ್ಯಾಮೆರಾಗಳನ್ನು ಬಳಸಿ ಈ ಕಾರ್ಯಾಚರಣೆಯ ಮೇಲೆ ಕಣ್ಗಾವಲು ಇಡಲು ಬಳಸಲಾಗಿದೆ. ಒಂದು ವೇಳೆ ಅಗತ್ಯಬಿದ್ದರೆ ಹೆಚ್ಚುವರಿ ಸಮಯ ತೆಗೆದುಕೊಂಡು ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಮುಗಿಸಲಾಗುವುದು ಎಂದು ತಿಳಿಸಿದ್ದಾರೆ.
Leave A Reply