• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಜಕಾರಣಿಯಾಗುವವರಿಗಾಗಿ ರಾಜ್ಯದಲ್ಲಿ ರಾಜಕೀಯ ಕಾಲೇಜು ತೆರೆಯುವ ಚಿಂತನೆ!

Tulunadu News Posted On May 26, 2025
0


0
Shares
  • Share On Facebook
  • Tweet It

ಯುವಕ, ಯುವತಿಯರು ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡುವಾಗ ಅದಕ್ಕೆ ಸಂಬಂಧಿಸಿದ ಶಿಕ್ಷಣ ಪಡೆಯಲು ಅಂತಹ ತರಬೇತಿಯನ್ನು ಕೊಡುವಂತಹ ಶಿಕ್ಷಣ ಸಂಸ್ಥೆಗಳನ್ನು ಸೇರುತ್ತಾರೆ. ಅದು ಇಂಜಿನಿಯರಿಂಗ್ ನಿಂದ ಫ್ಯಾಶನ್ ಕ್ಷೇತ್ರವನ್ನು ಸೇರಿಕೊಂಡು ಏರೋನೋಟಿಕ್ಸ್ ತನಕ ಪ್ರತಿ ಕ್ಷೇತ್ರಕ್ಕೂ ಶಿಕ್ಷಣ ಸಂಸ್ಥೆಗಳಿವೆ. ಆದರೆ ದೇಶವನ್ನು ಆಳುವವರಿಗಾಗಿಯೇ, ಇಷ್ಟು ದೊಡ್ಡ ಕ್ಷೇತ್ರವನ್ನು ಸೇರುವವರಿಗಾಗಿ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳು ಇಲ್ಲದಿರುವುದು ಮಾತ್ರ ಸೋಜಿಗ. ರಾಜಕೀಯ ಕ್ಷೇತ್ರಕ್ಕೆ ಸೇರುವವರಿಗಾಗಿ ಯಾವುದೇ ಪೂರ್ವಾಪರ ಕೋರ್ಸ್ ಗಳು ಇಲ್ಲದೇ ಇರುವುದರಿಂದ ದೇಶದಲ್ಲಿ ಉತ್ತಮ ರಾಜಕಾರಣಿಗಳ ಕೊರತೆ ಇದೆಯೇ ಎನ್ನುವ ಪ್ರಶ್ನೆಗೆ ಸೂಕ್ತ ಉತ್ತರ ಇಲ್ಲವಾದರೂ ರಾಜಕೀಯ ಸೇರುವವರಿಗಾಗಿಯೇ ಪ್ರತ್ಯೇಕ ಕಾಲೇಜುಗಳ ಅಗತ್ಯ ಇರುವುದು ನಿಜ.

ರಾಜಕಾರಣ ಉದ್ಯೋಗ ಅಲ್ಲ ಎಂದು ರಾಜಕಾರಣಿಗಳು ಎಷ್ಟೇ ಹೇಳಿಕೊಂಡರೂ ಇವತ್ತಿನ ಕಾಲದಲ್ಲಿ ಸಕ್ರಿಯ ರಾಜಕಾರಣದಲ್ಲಿ ಇರುವವರಿಗೆ ಅದು ಉದ್ಯೋಗವೇ ಆಗಿ ಹೋಗಿದೆ. ಒಂದು ವೇಳೆ ಉದ್ಯೋಗ ಅಲ್ಲ ಎಂದು ಅಂದುಕೊಂಡರೂ ಪೂರ್ವ ತರಬೇತಿ ಪಡೆದುಕೊಂಡು ಆ ಕ್ಷೇತ್ರಕ್ಕೆ ಕಾಲಿಟ್ಟರೆ ಅದರಿಂದ ಅವರಿಗೂ, ನಾಗರಿಕರಿಗೂ ಉತ್ತಮ ಪ್ರಯೋಜನ ಆಗುವುದರಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಚಿಂತನೆ ನಡೆಸಿದಂತೆ ಕಾಣುತ್ತದೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಿದ್ದ ವಿಧಾನಸೌಧ ಮಾರ್ಗದರ್ಶಿ ಪ್ರವಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ವಿದ್ಯಾರ್ಥಿಗಳಿಗೆ ವಿಜ್ಞಾನ, ಕಾನೂನು, ಹಣಕಾಸು ಹೀಗೆ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವಿಷಯ ಕೋರ್ಸುಗಳ ಅಧ್ಯಯನಕ್ಕೆ ಅವಕಾಶಗಳಿವೆ. ಅದರೆ ರಾಜಕೀಯ ಕ್ಷೇತ್ರ ಪ್ರವೇಶಿಸುವವರಿಗೆ ಅಧ್ಯಯನಕ್ಕೆ ಅಷ್ಟು ಅವಕಾಶಗಳಿಲ್ಲ. ಹಾಗಾಗಿ ಉತ್ತಮ ರಾಜಕಾರಣಿಗಳನ್ನು ಹೊರತರಲು ರಾಜಕೀಯ ಕಾಲೇಜು ಆರಂಭಿಸಿ ಸೂಕ್ತ ತರಬೇತಿ ನೀಡುವ ಚಿಂತನೆ ಇದೆ. ಕಾನೂನಾತ್ಮಕವಾಗಿ ಚರ್ಚೆ ನಡೆಸಿ ನಿರ್ಧಾರ ಮಾಡಲಾಗುವುದು ಎಂದರು.

ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕೂಡ ಧ್ವನಿಗೂಡಿಸಿ ನಾನು ಸ್ಪೀಕರ್ ಸೇರಿ ರಾಜಕೀಯ ಅಧ್ಯಯನಕ್ಕೆ ಕಾಲೇಜು ಆರಂಭಿಸುವ ಚಿಂತನೆ ಮಾಡಿದ್ದೆವು. ಅದು ಇನ್ನೂ ಒಂದು ಹಂತಕ್ಕೆ ಬರಬೇಕಿದೆ. ಕಾನೂನು ಸಚಿವ ಎಚ್ ಕೆ ಪಾಟೀಲ್, ಇತರರೊಂದಿಗೆ ಚರ್ಚಿಸಿ ನಮ್ಮ ಮಕ್ಕಳಿಗೆ ರಾಜಕೀಯ ಕ್ಷೇತ್ರದಲ್ಲಿಯೂ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಯಾರ ಕುಟುಂಬದಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು ಇರುತ್ತಾರೋ ಅಂತವರಿಗೆ ಮನೆಯಲ್ಲಿಯೇ ಪ್ರಾಕ್ಟಿಕಲ್ ಟ್ರೇನಿಂಗ್ ಇರುತ್ತದೆ. ಅಂತವರಿಗೆ ಹೊಸದಾಗಿ ಕಾಲೇಜಿನಲ್ಲಿ ಕಲಿಯುವ ಅಗತ್ಯ ಇರುವುದಿಲ್ಲ. ಆದರೆ ವಂಶಪಾರಂಪರೆಯಲ್ಲಿ ಯಾರೂ ರಾಜಕೀಯ ಸೇರದೇ ಇದ್ದಾಗ ಅಂತಹ ಕುಟುಂಬದಿಂದ ಯಾರಿಗಾದರೂ ರಾಜಕೀಯ ಕ್ಷೇತ್ರಕ್ಕೆ ಬರಬೇಕಾದರೆ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಿಷ್ಟು ಬೇಸಿಕ್ ಶಿಕ್ಷಣ ಸಿಕ್ಕಿದರೆ ರಾಜ್ಯಕ್ಕೆ, ದೇಶಕ್ಕೆ ಪ್ರಯೋಜನವಾದಿತು ಎನ್ನುವುದು ನಂಬಿಕೆ.

 

 

0
Shares
  • Share On Facebook
  • Tweet It




Trending Now
ಭಾರತದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ!
Tulunadu News August 6, 2025
ಮಾಲೆಗಾಂ ಸ್ಫೋಟದಲ್ಲಿ ಯೋಗಿ, ಭಾಗವತ್ ಹೆಸರು ಹೇಳಲು ಒತ್ತಡ ಇತ್ತು ಎಂದ ನಿವೃತ್ತ ಮೇಜರ್!
Tulunadu News August 4, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ!
    • ಮಾಲೆಗಾಂ ಸ್ಫೋಟದಲ್ಲಿ ಯೋಗಿ, ಭಾಗವತ್ ಹೆಸರು ಹೇಳಲು ಒತ್ತಡ ಇತ್ತು ಎಂದ ನಿವೃತ್ತ ಮೇಜರ್!
    • "2 ರೂಪಾಯಿ ಡಾಕ್ಟರ್" ನಿಧನ.. ಜನಸಾಮಾನ್ಯರ ಕಂಬನಿ
    • ಬಂಧೀಖಾನೆ ಮುಖ್ಯಸ್ಥರಾಗಿ ದಯಾನಂದ ಮತ್ತೆ ಸೇವೆಯಲ್ಲಿ!
    • ಬೈಕಂಪಾಡಿಯಲ್ಲಿ ಅಮೋನಿಯಾ ಅನಿಲ ಸೋರಿಕೆ, ನಾಲ್ವರು ತೀವ್ರ ಅಸ್ವಸ್ಥ!
    • 2008 ಮಾಲೆಗಾಂ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಗ್ಯಾ ಸಿಂಗ್, ಕರ್ನಲ್ ಪುರೋಹಿತ್ ಸೇರಿ 7 ಜನ ದೋಷಮುಕ್ತ!
    • ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
  • Popular Posts

    • 1
      ಭಾರತದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ!
    • 2
      ಮಾಲೆಗಾಂ ಸ್ಫೋಟದಲ್ಲಿ ಯೋಗಿ, ಭಾಗವತ್ ಹೆಸರು ಹೇಳಲು ಒತ್ತಡ ಇತ್ತು ಎಂದ ನಿವೃತ್ತ ಮೇಜರ್!
    • 3
      "2 ರೂಪಾಯಿ ಡಾಕ್ಟರ್" ನಿಧನ.. ಜನಸಾಮಾನ್ಯರ ಕಂಬನಿ
    • 4
      ಬಂಧೀಖಾನೆ ಮುಖ್ಯಸ್ಥರಾಗಿ ದಯಾನಂದ ಮತ್ತೆ ಸೇವೆಯಲ್ಲಿ!
    • 5
      ಬೈಕಂಪಾಡಿಯಲ್ಲಿ ಅಮೋನಿಯಾ ಅನಿಲ ಸೋರಿಕೆ, ನಾಲ್ವರು ತೀವ್ರ ಅಸ್ವಸ್ಥ!

  • Privacy Policy
  • Contact
© Tulunadu Infomedia.

Press enter/return to begin your search