• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಫೇಕ್ ಪನ್ನೀರ್ ಮಾರಿ ತಿಂಗಳಿಗೆ 42 ಲಕ್ಷ ರೂ ಸಂಪಾದಿಸುತ್ತಿದ್ದ ವ್ಯಾಪಾರಿ ಬಂಧನ!

Tulunadu News Posted On May 26, 2025
0


0
Shares
  • Share On Facebook
  • Tweet It

ಆತ ಉತ್ತರ ಪ್ರದೇಶದ ಗೋರಖಪುರದವನು. ಹೆಸರು ಮೊಹಮ್ಮದ್ ಖಲೀದ್. ವ್ಯಾಪಾರ ಪನ್ನೀರ್ ಮಾರುವುದು. ಹಾಗಾದ್ರೆ ಅವನ ಪನ್ನೀರ್ ಹೇಗೆ ತಯಾರಾಗುತ್ತಿತ್ತು? ಗೊತ್ತಾ? ಇಲ್ಲಿದೆ ಕುತೂಹಲಕಾರಿ ವಿಷಯ.

ಮೇ 21 ರಂದು ಉತ್ತರಪ್ರದೇಶದ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಫೇಕ್ ಪನ್ನೀರ್ ತಯಾರಿಸುತ್ತಿದ್ದ ಫ್ಯಾಕ್ಟರಿಯ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿ ಅವರಿಗೆ 40 ಕ್ವಿಂಟಾಲ್ ಫೇಕ್ ಪನ್ನೀರ್ ಪತ್ತೆಯಾಗಿದೆ. ಅದು ಅಲ್ಲಿ ಕೇವಲ 25 ಲೀಟರ್ ಹಾಲಿನಿಂದ ಮಾತ್ರ ತಯಾರಾಗಿತ್ತು. ಹಾಗಾದರೆ ಫೇಕ್ ಪನ್ನೀರ್ ತಯಾರು ಮಾಡುತ್ತಿದ್ದದ್ದು ಹೇಗೆ?

ಅದಕ್ಕಾಗಿ ಮೊಹಮ್ಮದ್ ಖಾಲೀದ್ ಸೋಪ್ ಬೀಜಗಳನ್ನು ಬಳಸುತ್ತಿದ್ದ. ಅದರೊಂದಿಗೆ ಪೋಸ್ಟರ್ ಕಲರ್ ಗಳು, ಸಲ್ಫೂರಿಕ್ ಆಮ್ಲ, ಫ್ಪಾಬ್ರಿಕ್ ವೈಟ್ನರ್, ಡಿಟರ್ಜೆಂಟ್, ಪಾಮ್ ಆಯಿಲ್, ಸೆಕ್ರರಿನ್ ( ಸಕ್ಕರೆಯ ಬದಲಿಗೆ ಬಳಸುವ ಸಿಹಿಯಾದ ವಸ್ತು) ಇದನ್ನೆಲ್ಲಾ ಬಳಸಿ ಫೇಕ್ ಪನ್ನೀರ್ ತಯಾರಿಸುತ್ತಿದ್ದ. ಈ ಫೇಕ್ ಪನ್ನೀರ್ ಸೇವಿಸಿದರೆ ಅದು ಮನುಷ್ಯನ ಆರೋಗ್ಯದ ಮೇಲೆ ತೀವ್ರತರವಾದ ಪರಿಣಾಮ ಬೀರುತ್ತದೆ. ಇದನ್ನು ಸೇವಿಸುವ ಮನುಷ್ಯ ಭವಿಷ್ಯದಲ್ಲಿ ಆಂತರಿಕವಾಗಿ ದುರ್ಬಲನಾಗುತ್ತಾ, ಮುಂದೊಂದು ದಿನ ಕುಸಿದು ಬೀಳುವ ಸಾಧ್ಯತೆ ಇದೆ. ಅದನ್ನು ಉತ್ತರ ಪ್ರದೇಶದ ಕುಶಿನಗರ, ಮಹಾರಾಜಾಗಂಜ್, ಸಂತ ಕಬೀರ್ ನಗರ ಮತ್ತು ಡೆಹೋರಿಯಾ ಊರುಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದರಿಂದ ಮೊಹಮ್ಮದ್ ಖಲೀದ್ ತಿಂಗಳಿಗೆ 42 ಲಕ್ಷ ರೂಪಾಯಿ ಲಾಭ ಗಳಿಸುತ್ತಿದ್ದ.

ಆಹಾರ ಸುರಕ್ಷತಾ ಅಧಿಕಾರಿಗಳು ಅಲ್ಲಿ ತಯಾರಾಗಿ ಮಾರಾಟಕ್ಕೆಂದು ಇಟ್ಟಿದ್ದ 250 ಕೆಜಿ ಫೇಕ್ ಪನ್ನೀರ್ ಅನ್ನು ನಾಶ ಮಾಡಿ ಫ್ಯಾಕ್ಟರಿಯನ್ನು ಸೀಲ್ ಮಾಡಿದ್ದಾರೆ. ಸ್ಥಳೀಯರು ಇಲಾಖೆಯ ಈ ಕ್ರಮದಿಂದ ಸಂತೋಷ ವ್ಯಕ್ತಪಡಿಸಿದ್ದಾರೆ.

ಹೀಗೆ ಫೇಕ್ ಪನ್ನೀರ್ ಅನ್ನು ತಯಾರಿಸಿ ಮಾರುವ ಅವ್ಯವಹಾರ ಹರ್ಯಾಣದಲ್ಲಿ ಸಾಕಷ್ಟು ಕಡೆಗಳಲ್ಲಿ ಚಾಲ್ತಿಯಲ್ಲಿತ್ತು. ಆದರೆ ಈಗ ಅದು ಉತ್ತರ ಪ್ರದೇಶಕ್ಕೂ ಹರಡಿದೆ. ಇನ್ನು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳ ಪ್ರಕಾರ ಅಲ್ಲಿಯ ಸ್ಥಳೀಯರನ್ನು ಈ ಫೇಕ್ ಪನ್ನೀರ್ ಉತ್ಪಾದನೆಯಲ್ಲಿ ಸಹಕರಿಸಲು ಆಹ್ವಾನಿಸುತ್ತಿದ್ದ. ಒಟ್ಟಿನಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ನಾವು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲುವುದಿಲ್ಲ. ಉತ್ತಮ ಕಂಪೆನಿಯ ನಂಬಿಕಾರ್ಹ ಆಹಾರ ವಸ್ತುಗಳನ್ನು ಖರೀದಿಸಿದರೆ ಕ್ಷೇಮ. ಇವನಿಗೆ ಸೂಕ್ತ ಶಿಕ್ಷೆ ಆದರೆ ಮಾತ್ರ ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ದಂಧೆಗಳನ್ನು ನಿಲ್ಲಿಸಬಹುದು.

0
Shares
  • Share On Facebook
  • Tweet It




Trending Now
ಭಾರತದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ!
Tulunadu News August 6, 2025
ಮಾಲೆಗಾಂ ಸ್ಫೋಟದಲ್ಲಿ ಯೋಗಿ, ಭಾಗವತ್ ಹೆಸರು ಹೇಳಲು ಒತ್ತಡ ಇತ್ತು ಎಂದ ನಿವೃತ್ತ ಮೇಜರ್!
Tulunadu News August 4, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ!
    • ಮಾಲೆಗಾಂ ಸ್ಫೋಟದಲ್ಲಿ ಯೋಗಿ, ಭಾಗವತ್ ಹೆಸರು ಹೇಳಲು ಒತ್ತಡ ಇತ್ತು ಎಂದ ನಿವೃತ್ತ ಮೇಜರ್!
    • "2 ರೂಪಾಯಿ ಡಾಕ್ಟರ್" ನಿಧನ.. ಜನಸಾಮಾನ್ಯರ ಕಂಬನಿ
    • ಬಂಧೀಖಾನೆ ಮುಖ್ಯಸ್ಥರಾಗಿ ದಯಾನಂದ ಮತ್ತೆ ಸೇವೆಯಲ್ಲಿ!
    • ಬೈಕಂಪಾಡಿಯಲ್ಲಿ ಅಮೋನಿಯಾ ಅನಿಲ ಸೋರಿಕೆ, ನಾಲ್ವರು ತೀವ್ರ ಅಸ್ವಸ್ಥ!
    • 2008 ಮಾಲೆಗಾಂ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಗ್ಯಾ ಸಿಂಗ್, ಕರ್ನಲ್ ಪುರೋಹಿತ್ ಸೇರಿ 7 ಜನ ದೋಷಮುಕ್ತ!
    • ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
  • Popular Posts

    • 1
      ಭಾರತದಲ್ಲಿ ದೀರ್ಘಾವಧಿ ಸೇವೆ ಸಲ್ಲಿಸಿದ ಕೇಂದ್ರ ಗೃಹ ಸಚಿವರಾಗಿ ಅಮಿತ್ ಶಾ ದಾಖಲೆ!
    • 2
      ಮಾಲೆಗಾಂ ಸ್ಫೋಟದಲ್ಲಿ ಯೋಗಿ, ಭಾಗವತ್ ಹೆಸರು ಹೇಳಲು ಒತ್ತಡ ಇತ್ತು ಎಂದ ನಿವೃತ್ತ ಮೇಜರ್!
    • 3
      "2 ರೂಪಾಯಿ ಡಾಕ್ಟರ್" ನಿಧನ.. ಜನಸಾಮಾನ್ಯರ ಕಂಬನಿ
    • 4
      ಬಂಧೀಖಾನೆ ಮುಖ್ಯಸ್ಥರಾಗಿ ದಯಾನಂದ ಮತ್ತೆ ಸೇವೆಯಲ್ಲಿ!
    • 5
      ಬೈಕಂಪಾಡಿಯಲ್ಲಿ ಅಮೋನಿಯಾ ಅನಿಲ ಸೋರಿಕೆ, ನಾಲ್ವರು ತೀವ್ರ ಅಸ್ವಸ್ಥ!

  • Privacy Policy
  • Contact
© Tulunadu Infomedia.

Press enter/return to begin your search