• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?

TULUNADU NEWS Posted On June 18, 2025
0


0
Shares
  • Share On Facebook
  • Tweet It

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಫಾಸ್ಟ್ ಟ್ಯಾಗ್ ಸಂಬಂಧಪಟ್ಟಂತೆ ಪಾಸ್ ಜಾರಿ ಬರಲು ಚಿಂತನೆ ನಡೆಸಿದೆ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ ಎನ್ನುವುದೇ ಉದ್ದೇಶವಾಗಿದೆ. ಈ ಬಗ್ಗೆ ಏಕ್ಸ್ ನಲ್ಲಿ ಮಾಹಿತಿ ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ವರ್ಷದ ಪಾಸ್ ಗೆ 3000 ರೂಪಾಯಿ ಹಣ ನಿಗದಿಗೊಳಿಸಲಾಗಿದೆ. ಇದು ಈ ವರ್ಷದ ಅಗಸ್ಟ್ 15 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಈ ಹೊಸ ಫಾಸ್ಟ್ ಟ್ಯಾಗ್ ವಾಣಿಜ್ಯೇತರ ಅಂದರೆ ನಾನ್ ಕಮರ್ಷಿಯಲ್ ಖಾಸಗಿ ವಾಹನಗಳಾದ ಕಾರ್, ಜೀಪ್ ಮತ್ತು ವ್ಯಾನ್ ಗಳಿಗೆ ಅನ್ವಯಿಸುತ್ತದೆ. ಈ ಪಾಸ್ ಖರೀದಿಸಿ ಆಕ್ಟಿವೇಶನ್ ಮಾಡಿದ ನಂತರ ಒಂದು ವರ್ಷ ಅಥವಾ 200 ಟ್ರಿಪ್ ಯಾವುದು ಮೊದಲು ಮುಕ್ತಾಯಗೊಳ್ಳುವುದೋ ಅದಕ್ಕೆ ಇದು ಅನ್ವಯವಾಗುತ್ತದೆ. ಇದರಿಂದ ಟೋಲ್ ಗಳಲ್ಲಿ ಉಂಟಾಗುವ ಅನಗತ್ಯ ಗೊಂದಲ ಕಡಿಮೆಯಾಗುತ್ತದೆ. ಈ ಸೌಲಭ್ಯ ಟೋಲ್ ಇರುವ ಪ್ರದೇಶದ ಅರವತ್ತು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನೆಲೆಸಿರುವ ನಾಗರಿಕರ ಅನುಕೂಲತೆಗಾಗಿ ರಚಿತವಾಗಿದೆ ಎಂದು ಹೇಳಲಾಗುತ್ತಿದೆ.

ಈ ಫಾಸ್ಟ್ ಟ್ಯಾಗ್ ಪಾಸ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎಐ) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ವೆಬ್ ಸೈಟ್ ನಲ್ಲಿ ಹಾಗೂ ರಾಜಮಾರ್ಗ್ ಯಾತ್ರಾ ಮೊಬೈಲ್ ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ಈ ಸೌಲಭ್ಯ ಆರಂಭವಾದ ನಂತರ ಕೇಂದ್ರ ಸರಕಾರ ಒಂದು ಲಿಂಕ್ ಬಿಡುಗಡೆ ಮಾಡಲಿದ್ದು, ಅದರಿಂದ ಆಕ್ಟಿವೇಶನ್ ಹಾಗೂ ರಿನಿವಲ್ ಎರಡೂ ಸುಲಭವಾಗಲಿದೆ. ಗಡ್ಕರಿ ಅವರ ಪ್ರಕಾರ ” ಕಡಿಮೆ ಕಿಲೋಮೀಟರ್ ಪ್ರಯಾಣದ ಅವಧಿಯಲ್ಲಿಯೂ ಸಾಕಷ್ಟು ಬಾರಿ ಕಡಿತವಾಗುವ ಟೋಲ್ ಹಣದ ದೊಡ್ಡ ಮೊತ್ತದ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ಬಂದಿದ್ದವು. ಆದ್ದರಿಂದ ವಾಹನದ ಮಾಲೀಕರಿಗೆ ಅನುಕೂಲವಾಗಬೇಕೆಂಬ ದೃಷ್ಟಿಯಿಂದ ಇದನ್ನು ಜಾರಿಗೆ ತರಲಾಗಿದೆ” ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯವಾಗುತ್ತಿರುವುದನ್ನು ಜನರು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವುದು ಅಗಸ್ಟ್ ನಂತರ ಗೊತ್ತಾಗುತ್ತದೆ.

 

0
Shares
  • Share On Facebook
  • Tweet It




Trending Now
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
TULUNADU NEWS May 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
  • Popular Posts

    • 1
      ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!

  • Privacy Policy
  • Contact
© Tulunadu Infomedia.

Press enter/return to begin your search