• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!

TULUNADU NEWS Posted On June 26, 2025
0


0
Shares
  • Share On Facebook
  • Tweet It

ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಹಿಂದೂಗಳ ನರಮೇಧದ ಬಗ್ಗೆ ಇಡೀ ವಿಶ್ವವೇ ಪಾಕಿಸ್ತಾನಕ್ಕೆ ಛೀ… ಥೂ ಹಾಕಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಅಂದು ಅಮಾಯಕ ಪ್ರವಾಸಿಗರನ್ನು ಕೊಂದ ಪಾಕಿ ಉಗ್ರರಿಗೆ ಸ್ಥಳೀಯರ ಸಹಕಾರ ಇಲ್ಲದಿದ್ದರೆ ಅವರು ಅದನ್ನೆಲ್ಲಾ ಮಾಡಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಿತ್ತು. ಯಾಕೆಂದರೆ ಉಗ್ರರು ಪಾಕಿಸ್ತಾನದಿಂದ ನೇರವಾಗಿ ಹಾರಿ ಪೆಹಲ್ಗಾಂನಲ್ಲಿ ಇಳಿಯಲು ಸಾಧ್ಯವಿಲ್ಲ. ಅವರು ಕಳ್ಳಮಾರ್ಗದಿಂದ ಕಾಶ್ಮೀರದಲ್ಲಿ ನುಸುಳಿ ಅಲ್ಲಿ ಸ್ಥಳೀಯರ ಮನೆಗಳಲ್ಲಿ ವಾಸ್ತವ್ಯ ಮಾಡಿ, ಅಲ್ಲಿ ಯೋಜನೆ ಹಾಕಿ, ನಂತರ ಅಲ್ಲಿಂದ ವಾಹನಗಳ ಸಹಾಯದಿಂದ ಪೆಹಲ್ಗಾಂ ತಲುಪಬೇಕಾಗುತ್ತದೆ. ಇನ್ನು ಅದಕ್ಕಿಂತ ಮೊದಲು ಅಲ್ಲಿ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಬೇಕಾಗುತ್ತದೆ. ಇದಕ್ಕೆಲ್ಲ ಉಗ್ರರಿಗೆ ಸ್ಥಳೀಯರ ಸಹಕಾರ ಬೇಕಾಗುತ್ತೆ.

ಪೆಹಲ್ಗಾಂನಲ್ಲಿಯೂ ಹೀಗೆ ಉಗ್ರರಿಗೆ ಸಹಕಾರ ನೀಡಿದ್ದ ಇಬ್ಬರು ಸ್ಥಳೀಯರಾದ ಒರ್ವೈಜ್ ಅಹ್ಮದ್ ಜೋಥರ್ ಹಾಗೂ ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾಗಿದೆ. ಇವರನ್ನು ಸರಿಯಾಗಿ ವಿಚಾರಣೆ ನಡೆಸಿದಾಗ 26 ನಾಗರಿಕರ ಸಾವಿಗೆ ಕಾರಣವಾದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದ ಮೂವರ ಹೆಸರನ್ನು ಸಹ ಈ ಬಂಧಿತ ಆರೋಪಿಗಳು ಬಹಿರಂಗಪಡಿಸಿದ್ದಾರೆ.

ಈ ಸ್ಥಳೀಯರಲ್ಲಿ ಪಹಲ್ಗಾಂನ ಬಟ್ಕೋಟ್ ಮೂಲದ ಪರ್ವೈಜ್ ಅಹ್ಮದ್ ಜೋಥರ್ ಹಾಗೂ ಅದೇ ಪಹಲ್ಗಾಂನ ಹಿಲ್ ಪಾರ್ಕ್ ಮೂಲದ ಬಶೀರ್ ಅಹ್ಮದ್ ಜೋಥರ್ ಮೂವರು ಸಶಸ್ತ್ರ ಭಯೋತ್ಪಾದಕರ ಗುರುತನ್ನು ಬಹಿರಂಗಪಡಿಸಿದ್ದಾರೆ ಮತ್ತು ಉಗ್ರರು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ – ಎ – ತೋಯ್ಬಾ (ಎಲ್ ಇಟಿ) ಸಂಬಂಧಿಸಿದ ಪಾಕಿಸ್ತಾನಿ ಪ್ರಜೆಗಳು ಎಂದು ದೃಢಪಡಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಹೇಳಿದೆ.
ತನಿಖೆಯ ಪ್ರಕಾರ, ಪರ್ವೈಜ್ ಹಾಗೂ ಬಶೀರ್ ದಾಳಿಗೆ ಮುನ್ನ ಹಿಲ್ ಪಾರ್ಕ್ ನಲ್ಲಿರುವ ಕಾಲೋಚಿತ ಧೋಕ್ ಅಂದರೆ ಗುಡಿಸಲಿನಲ್ಲಿ ಈ ಇಬ್ಬರು ಭಯೋತ್ಪಾದಕರಿಗೆ ಆಹಾರ, ಆಶ್ರಯ ಸೇರಿದಂತೆ ಎಲ್ಲಾ ವ್ಯವಸ್ಥೆಯ ಬೆಂಬಲವನ್ನು ಒದಗಿಸಿದ್ದರು.

ಎಲ್ಲಾ ಯೋಜಿತವಾಗಿ ನಡೆದ ಕಾರಣ ಆ ಮೂವರು ಉಗ್ರರು ಪೆಹಲ್ಗಾಂನಲ್ಲಿ ಏಪ್ರಿಲ್ 22 ರಂದು ತಮ್ಮ ಉದ್ದೇಶಿತ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ ಕಾರಣ ಅಲ್ಲಿ ಕಾಶ್ಮೀರದ ಸೌಂದರ್ಯ ಸವಿಯಲು ಬಂದಿದ್ದ 26 ಜನರು ಪ್ರಾಣ ಬಿಡಬೇಕಾಯಿತು. ಈ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ ವಹಿಸಿಕೊಂಡಿತ್ತು. ಕಾಶ್ಮೀರದ ಪಹಲ್ಗಾಂ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಬೈಸರನ್ ಕಣಿವೆಯ ಹುಲ್ಲುಗಾವಲಿನ ಪ್ರದೇಶವನ್ನು ವೀಕ್ಷಿಸಲು ಆಗಮಿಸಿದ್ದ ಪ್ರವಾಸಿಗರಿಗರ ಮೇಲೆ ಮಧ್ಯಾಹ್ನ 2.30 ರ ವೇಳೆಗೆ ಉಗ್ರರು ಸುತ್ತುವರೆದು ಮನಬಂದಂತೆ ಗುಂಡು ಹಾರಿಸಿದ್ದರು. ಬಂಧಿತ ಸ್ಥಳೀಯರಿಂದ ಇನ್ನಷ್ಟು ವಿಷಯವನ್ನು ಕಲೆ ಹಾಕುವಲ್ಲಿ ಎನ್ ಐಎ ನಿರತವಾಗಿದೆ.

0
Shares
  • Share On Facebook
  • Tweet It




Trending Now
ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
TULUNADU NEWS June 16, 2026
Najlepsze bonusy i sloty w polskim kasynie online
TULUNADU NEWS May 29, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
  • Popular Posts

    • 1
      ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ

  • Privacy Policy
  • Contact
© Tulunadu Infomedia.

Press enter/return to begin your search