• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ “ದಿ ಎಮರ್ಜೆನ್ಸಿ ಡೈರಿಸ್”!

TULUNADU NEWS Posted On June 26, 2025
0


0
Shares
  • Share On Facebook
  • Tweet It

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಬಿಳಿಗಡ್ಡ, ಬಿಳಿ ತಲೆಕೂದಲಿನಲ್ಲಿ ನೋಡಿರುವ ನಮಗೆ ಮೋದಿಯವರು ಐವತ್ತು ವರ್ಷಗಳ ಹಿಂದೆ ಹೇಗೆ ಕಾಣಿಸುತ್ತಾ ಇದ್ರು ಎಂದು ನೋಡುವ ಕುತೂಹಲ ಇದ್ದೇ ಇರುತ್ತದೆ. ಅದರಲ್ಲಿಯೂ ಈಗಿನ ಅವರ ಗಡ್ಡದ ಶೈಲಿ ಮತ್ತು ಆಗ ಅವರ ಇಟ್ಟುಕೊಳ್ಳುತ್ತಿದ್ದ ಗಡ್ಡದ ಶೈಲಿಗೂ ತುಂಬಾ ವ್ಯತ್ಯಾಸವಿದೆ. ಆಗ ಅವರು ಫ್ರೆಂಚ್ ಗಡ್ಡಶೈಲಿಗೆ ಮನಸೋತಿದ್ದಂತೆ ಕಾಣುತ್ತದೆ. ಯಾಕೆಂದರೆ 50 ವರ್ಷಗಳ ಹಿಂದೆ ಇಂದಿರಾಗಾಂಧಿಯವರು ದೇಶದ ಮೇಲೆ ಹೇರಿದ್ದಂತಹ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮೋದಿಯವರು ಹೇಗೆ ತಮ್ಮ ಚಲನವಲನಗಳನ್ನು ನಡೆಸುತ್ತಿದ್ದರು ಎನ್ನುವ ವಿಷಯದಲ್ಲಿ ಮಾಹಿತಿ ಕೊಡುವುದಕ್ಕಾಗಿಯೇ “ದಿ ಎಮರ್ಜೆನ್ಸಿ ಡೈರಿಸ್” ಎನ್ನುವ ಪುಸ್ತಕ ಬಿಡುಗಡೆಯಾಗಿದೆ. ಇದು ಮೋದಿಯವರು ಎಮರ್ಜೆನ್ಸಿ ದಿನಗಳನ್ನು ಕಳೆದ ಕಥೆಯನ್ನು ಹೇಳುತ್ತದೆ.

ಈ ಪುಸ್ತಕದಲ್ಲಿ ಮೋದಿಯವರ ಅನುಭವ ಕಥನ ಮಾತ್ರವಲ್ಲ, ಅನೇಕ ನಾಗರಿಕರು ಆ ಸಂದರ್ಭದಲ್ಲಿ ಅನುಭವಿಸಿದ ಕರಾಳ ಕಥೆಗಳನ್ನು ಇದು ಒಳಗೊಂಡಿದೆ. ಮೋದಿಯವರು ತಮ್ಮ “ಏಕ್ಸ್” ನಲ್ಲಿ ಬರೆದಿರುವಂತೆ ಇಂದಿನ ಯುವಜನಾಂಗಕ್ಕೆ 1975 ರಿಂದ 1977 ರ ನಡುವೆ ಭಾರತದಲ್ಲಿ ಯಾವ ರೀತಿಯ ಆಡಳಿತ ಜಾರಿಯಲ್ಲಿತ್ತು ಎನ್ನುವುದು ಗೊತ್ತಾಗಬೇಕಿದೆ” ಎಂದು ಹೇಳಿದ್ದಾರೆ. ಇನ್ನು ಮೋದಿಯವರೇ ಹೇಳಿರುವ ಪ್ರಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಾಗ ತಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಯುವ ಪ್ರಚಾರಕನಾಗಿದ್ದೆ. ತನಗೆ ತುರ್ತು ಪರಿಸ್ಥಿತಿಯ ವಿರೋಧಿ ಹೋರಾಟ ಕಲಿಕಾ ದಾರಿಯಾಗಿತ್ತು. ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವುದು ಎಷ್ಟರಮಟ್ಟಿಗೆ ಅಗತ್ಯ ಎನ್ನುವುದನ್ನು ಮನಗಾಣುವಂತಾಗಿತ್ತು. ಇನ್ನು ಇದೇ ಸಂದರ್ಭದಲ್ಲಿ ದೇಶದ ಬೇರೆ ಬೇರೆ ರಾಜಕೀಯ ಸಿದ್ಧಾಂತದ ನಾಯಕರೊಂದಿಗೆ ಒಡನಾಟ ಸಿಕ್ಕಿ ಅನೇಕ ವಿಷಯಗಳನ್ನು ಕಲಿಯುವಂತಾಗಿತ್ತು. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಸಂಸ್ಥೆ ಈ ಎಲ್ಲಾ ವಿಷಯಗಳನ್ನು ಒಗ್ಗೂಡಿಸಿ ಪುಸ್ತಕದ ರೂಪದಲ್ಲಿ ಹೊರತಂದಿದೆ. ಅದಕ್ಕೆ ತುರ್ತು ಪರಿಸ್ಥಿತಿಯ ಅನುಭವಗಳನ್ನು ಹೊಂದಿದ್ದಂತಹ ಈ ದೇಶದ ಮಾಜಿ ಪ್ರಧಾನಿ ಎಚ್ ಡಿ ದೇವೆಗೌಡರು ಮುನ್ನುಡಿ ಬರೆದಿದ್ದಾರೆ ಎಂದು ಮೋದಿ ಏಕ್ಸ್ ನಲ್ಲಿ ಬರೆದಿದ್ದಾರೆ.

ಇನ್ನು ಈ ಪುಸ್ತಕದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಎತ್ತಿಹಿಡಿಯಲು ಮತ್ತು ರಾಷ್ಟ್ರದಲ್ಲಿ ನಾಗರಿಕರ ಹಕ್ಕುಗಳಿಗೆ ಅನುಗುಣವಾಗಿ ಅವುಗಳನ್ನು ಕಾಪಾಡಲು ಮೋದಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹೇಗೆ ಸೇವೆ ಸಲ್ಲಿಸಿದರು ಎನ್ನುವ ದೃಷ್ಣಾಂತಗಳನ್ನು ಕೂಡ ಒಳಗೊಂಡಿದೆ. ತುರ್ತು ಪರಿಸ್ಥಿತಿಯ ವಿರುದ್ಧ ಧ್ವನಿ ಎತ್ತಿದವರ ಮತ್ತು ಮೌನವಾಗಿ ಕುಳಿತುಕೊಳ್ಳದೇ ಅದರ ವಿರುದ್ಧ ಹೋರಾಟ ಸಂಘಟಿಸಿದವರಿಗೆ ಈ ಪುಸ್ತಕವನ್ನು ಅರ್ಪಿಸಲಾಗಿದೆ. ಇನ್ನು ಆ ಜ್ವಾಲಾಮುಖಿಯ ಕುಲುಮೆಯಲ್ಲಿ ಎದ್ದು ಬಂದಂತಹ ಅನೇಕ ನಾಯಕರ ಶೌರ್ಯ, ಸಾಮರ್ತ್ಯದ ಝಲಕ್ ಈ ಪುಸ್ತಕದಲ್ಲಿ ಕಾಣಬಹುದಾಗಿದೆ ಎಂದು ಕೂಡ ಹೇಳಲಾಗಿದೆ.

ಇನ್ನು ಮೋದಿಯವರು ಎಮರ್ಜೆನ್ಸಿ ವಿಷಯದಲ್ಲಿ ಏಕ್ಸ್ ನಲ್ಲಿ ” ಯಾವ ರೀತಿಯಲ್ಲಿ ಸಂವಿಧಾನದ ಆಶಯಗಳನ್ನು ಹತ್ತಿಕ್ಕಲಾಯಿತು ಎನ್ನುವುದನ್ನು ಯಾವುದೇ ಭಾರತೀಯ ಮರೆಯಲು ಸಾಧ್ಯವಿಲ್ಲ. ಸಂಸತ್ತಿನಲ್ಲಿ ಜನಪ್ರತಿನಿಧಿಗಳ ಧ್ವನಿಯನ್ನು ಅಡಗಿಸಲಾಯಿತು. ನ್ಯಾಯಾಲಯಗಳನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸಲಾಯಿತು. ಸಂವಿಧಾನಕ್ಕೆ ಮಾಡಿದ 42 ನೇ ತಿದ್ದುಪಡಿಯೇ ಅವರ ಕುತಂತ್ರಕ್ಕೆ ದೊಡ್ಡ ಉದಾಹರಣೆ. ಬಡವರ, ಹಿಂದುಳಿದವರ ಮತ್ತು ದಮನಿತರನ್ನು ತುಳಿಯುವ ಕೆಲಸ ಮಾಡಲಾಯಿತು. ಅವರ ಗೌರವಕ್ಕೆ ದಕ್ಕೆ ತರಲಾಯಿತು” ಎಂದು ಮೋದಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ” ತುರ್ತು ಪರಿಸ್ಥಿತಿಯಲ್ಲಿ ಹೋರಾಟ ಮಾಡಿದ ಎಲ್ಲರಿಗೂ ದೊಡ್ಡ ಸಲ್ಯೂಟ್. ಬೇರೆ ಬೇರೆ ತತ್ವ, ಸಿದ್ಧಾಂತಗಳನ್ನು ಹೊಂದಿದ್ದರೂ ದೇಶದ ಏಕತೆ, ಪ್ರಜಾಪ್ರಭುತ್ವ ಉಳಿಸಲು ಕೈ ಜೋಡಿಸಿದ ಎಲ್ಲರಿಗೂ ಧನ್ಯವಾದಗಳು. ರಾಷ್ಟ್ರೀಯವಾದಿಗಳು ಎಲ್ಲರೂ ಒಂದೇ ಮನಸ್ಸಿನಿಂದ ಕರಾಳತೆಯ ವಿರುದ್ಧ ಹೋರಾಡಿದ ಪರಿಣಾಮ ಕಾಂಗ್ರೆಸ್ ಸರಕಾರ ವಿಧಿಯಿಲ್ಲದೇ ಎಮರ್ಜೆನ್ಸಿಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕಾಯಿತು ಮತ್ತು ಲೋಕಸಭಾ ಚುನಾವಣೆಯನ್ನು ಘೋಷಿಸಬೇಕಾಯಿತು. ಅದರ ಫಲಿತಾಂಶ ಕಾಂಗ್ರೆಸ್ಸನ್ನು ನೆಲಕಚ್ಚುವಂತೆ ಮಾಡಿತ್ತು” ಎಂದು ಹೇಳಿದ್ದಾರೆ.
1975, ಜೂನ್ 25 ರಂದು ಇಂದಿರಾ ಗಾಂಧಿ ಸರಕಾರ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತ್ತು. ಅದಕ್ಕೆ ರಾಷ್ಟ್ರೀಯ ಸುರಕ್ಷತೆಗೆ ಗಂಡಾಂತರ, ಜಾಗತಿಕವಾಗಿ ಇಂಧನ ಬೆಲೆ ಸಂಘರ್ಷ ಮತ್ತು ಪ್ರತಿಭಟನೆಗಳಿಗೆ ಕುಂಠಿತವಾಗಿರುವ ಉತ್ಪಾದನೆ ಸಹಿತ ಕೆಲವು ಬಾಲಿಶ ಕಾರಣಗಳನ್ನು ನೀಡಲಾಗಿತ್ತು. ಇನ್ನು ಸಂವಿಧಾನದಲ್ಲಿ ಭಾರತೀಯರಿಗೆ ನೀಡಿದಂತಹ ಮೂಲಭೂತ ಹಕ್ಕುಗಳನ್ನು ಕೂಡ ಅಮಾನ್ಯಗೊಳಿಸಲಾಗಿತ್ತು. ಇನ್ನು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಅವಕಾಶವನ್ನು ಕೂಡ ನಿರ್ಭಂದಿಸಲಾಗಿತ್ತು.

ಒಟ್ಟು 21 ದಿನಗಳ ತನಕ ನಡೆದ ತುರ್ತು ಪರಿಸ್ಥಿತಿ ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ಛಾಪನ್ನು ಒತ್ತಿದೆ. ಅದರ ನಂತರ ನಡೆದ 1979 ಚುನಾವಣೆ ಇಂದಿರಾಗಾಂಧಿಯವರನ್ನು ಬದಿಗೊತ್ತಿ ದೇಶದಲ್ಲಿ ಜನತಾ ಪಾರ್ಟಿಯ ಸರಕಾರ ಅಧಿಕಾರಕ್ಕೆ ಬರಲು ಕಾರಣವಾಯಿತು.

0
Shares
  • Share On Facebook
  • Tweet It




Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
TULUNADU NEWS July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
TULUNADU NEWS July 29, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search