• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ…

TULUNADU NEWS Posted On June 27, 2025
0


0
Shares
  • Share On Facebook
  • Tweet It

ರಾಷ್ಟ್ರೀಯ ತನಿಖಾ ದಳ (ಎನ್ ಐಎ) ತಂಡದ ವಕೀಲರು ಎನ್ ಐಎ ವಿಶೇಷ ನ್ಯಾಯಾಲಯದಲ್ಲಿ ನೀಡಿರುವ ಮಾಹಿತಿಯಲ್ಲಿ ಆತಂಕಕಾರಿ ವಿಷಯವೊಂದು ಬೆಳಕಿಗೆ ಬಂದಿದೆ. ಎನ್ ಐಎ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಅವರು ಬಂಧಿಸಿರುವ ಪಿಎಫ್ ಐ ಕಾರ್ಯಕರ್ತರನ್ನು ತೀವ್ರವಾಗಿ ವಿಚಾರಣೆ ನಡೆಸಿದಾಗ ಸುಮಾರು 950 ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡುವ ಪಟ್ಟಿ ಸಿದ್ಧವಾಗಿದೆ. ಆದ್ದರಿಂದ ಬಂಧಿಸಲ್ಪಡುವ ಯಾವುದೇ ಪಿಎಫ್ ಐ ಕಾರ್ಯಕರ್ತನಿಗೆ ಜಾಮೀನು ನೀಡುವುದಕ್ಕೆ ಎನ್ ಐಎ ತೀವ್ರ ಆಕ್ಷೇಪ ಸಲ್ಲಿಸಿದೆ.

ಈ ವಿಷಯ ಇನ್ನಷ್ಟು ಮುನ್ನಲೆಗೆ ಬರಲು ಕಾರಣ, ಮೇ 21 ರಂದು ಸುಪ್ರೀಂ ಕೋರ್ಟ್ ನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಶ್ರೀನಿವಾಸನ್ ಕೊಲೆಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವ ವಿಷಯದಲ್ಲಿ ವಿಚಾರಣೆ ನಡೆಯುವಾಗ, ವಾದ- ಪ್ರತಿವಾದ ಆಲಿಸಿದ ನ್ಯಾಯಾಲಯ ” ಒಬ್ಬನೇ ವ್ಯಕ್ತಿ ಕೊಲೆಯಾಗಿರುವುದು. ಅದಕ್ಕೆ ಎಷ್ಟು ಮಂದಿಯನ್ನು ಜೈಲಿಗೆ ಹಾಕುತ್ತೀರಿ” ಎಂದು ಕೇಳಿದೆ.

ಈ ವಿಷಯದಲ್ಲಿ ದೇಶದ ಆಟರ್ನಿ ಜನರಲ್ ಆಫ್ ಇಂಡಿಯಾ (ಎಎಸ್ ಜಿ) ರಾಜಾ ತಾಕರೆ ಅವರು ಆಕ್ಷೇಪ ವ್ಯಕ್ತಪಡಿಸಿ ತಮ್ಮ ವಾದದಲ್ಲಿ “ಪಿಎಫ್ ಐ ಬಳಿ ಹಿಂದೂ ಮುಖಂಡರನ್ನು ಟಾರ್ಗೆಟ್ ಮಾಡುವ ಹಿಟ್ ಲಿಸ್ಟ್ ತಯಾರಾಗಿದೆ. ಇದು ಕೇವಲ ಒಂದು ಕೊಲೆಯ ವಿಷಯ ಮಾತ್ರವಲ್ಲ, ಇದರ ಹಿಂದೆ ಬಹಳ ದೊಡ್ಡ ಪಿತೂರಿ ಕೂಡ ನಡೆಯುತ್ತಿದೆ. ಪಿಎಫ್ ಐ ಮುಖಂಡರಾದ ಯಾಹ್ಯಾ ತಂಗಳ್ ಹಾಗೂ ಅಬ್ದುಲ್ ರಾವುಫ್ ಅವರಿಗೆ ಆರ್ ಎಸ್ ಎಸ್ ಮುಖಂಡ ಶ್ರೀನಿವಾಸನ್ ಕೊಲೆಯ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವ ವಿಷಯ ಮಾತ್ರವಲ್ಲ, ಬಹಳ ದೊಡ್ಡ ವ್ಯಾಪ್ತಿಯಲ್ಲಿ ಈ ಪ್ರಕರಣವನ್ನು ನೋಡಬೇಕು” ಎಂದು ಮನವಿ ಮಾಡಿದರು.

ಇನ್ನು ಎಎಸ್ ಜಿ ತಾಕರೆ ಅವರು ಮುಂದುವರೆದು ” ಆರೋಪಿ ತಂಗಳ್ ಆತನ ವಕೀಲರು ಹೇಳಿದಂತೆ ಕೇವಲ ಪ್ರತಿಭಟನಾಕಾರನಲ್ಲ, ಆತ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಕೂಡ ಆಗಿದ್ದಾನೆ” ಎಂದು ತಿಳಿಸಿದರು. ಆಪ್ರೋವರ್ ಒಬ್ಬರ ಒಪ್ಪಿತ ದಾಖಲೆಯಲ್ಲಿರುವ ಮಾಹಿತಿಯನ್ನು ಹೇಳಿದ ತಾಕರೆಯವರು ಪಿಎಫ್ ಐ ಕಾರ್ಯಕರ್ತ ಸುಬೈರ್ ಕೊಲೆಯಾದಾಗ, ಪಿಎಫ್ ಐ ಪ್ರತೀಕಾರದ ಕ್ರಮವಾಗಿ ಹಿಂದೂ ಮುಖಂಡನೊಬ್ಬನ ಹತ್ಯೆಗಾಗಿ ಏಳು ತಂಡಗಳನ್ನು ರಚಿಸಿತ್ತು. ಅದರಲ್ಲಿ ತಂಗಳ್ ಹಾಗೂ ರಾವೂಫ್ ಕೂಡ ತಂಡವೊಂದರ ಸದಸ್ಯರಾಗಿದ್ದು, ಆ ತಂಡವೇ ಶ್ರೀನಿವಾಸ್ ಹತ್ಯೆಯ ಸಂಚು ನಡೆಸಿತ್ತು. ಸುಬೈರ್ ಶವ ಇಟ್ಟಿದ್ದ ಆಸ್ಪತ್ರೆಯ ಹೊರಗೆ ಅಷ್ಟೂ ರಣತಂತ್ರಗಳು ನಡೆದಿದ್ದು, ಅದು ಜಾರಿಗೆ ಬಂದಿದೆ. ತಂಗಳ್ ಈ ಹಿಂದೆನೂ ಕೇರಳ ಹೈಕೋರ್ಟಿನ ನ್ಯಾಯಮೂರ್ತಿಗಳ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿರುವ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ” ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಓಕಾ ಅವರು “ತಂಗಳ್ ಹಾಗೂ ಇತರ ಆರೋಪಿಗಳು ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಹೇಗೆ ಸಾಬೀತುಪಡಿಸುತ್ತೀರಿ. ” ಈ ವ್ಯಕ್ತಿಗಳು ಎಲ್ಲಿಯೋ ಕುಳಿತುಕೊಂಡಿದ್ದರೆ, ಅವರನ್ನೇ ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಗೆ ಹೇಳಲು ಸಾಧ್ಯ?” ಎಂದು ಪ್ರಶ್ನಿಸಿದರು. “ಇನ್ನು ಒಬ್ಬ ಮಾತ್ರ ಕೊಲೆಯಾಗಿದ್ದಾನೆ” ಎಂದು ಹೇಳಿದರು.

ಒಟ್ಟಿನಲ್ಲಿ ಈ ಪ್ರಕರಣದಿಂದ ಒಂದೊಂದು ವಿಷಯ ಸ್ಪಷ್ಟವಾಗಿದೆ. ಎನ್ ಐಎ ಬಳಿ ಪಿಎಫ್ ಐ ಸಿದ್ಧಪಡಿಸಿದ ಹಿಟ್ ಲಿಸ್ಟ್ ಇದ್ದು, ಅದರಲ್ಲಿ 950 ಹಿಂದೂ ಮುಖಂಡರ ಹೆಸರು ಇದೆ.

0
Shares
  • Share On Facebook
  • Tweet It




Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
TULUNADU NEWS July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
TULUNADU NEWS July 29, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search