2.1 ಲಕ್ಷ ಬೇನಾಮಿ ಕಂಪನಿಗಳು ಪತ್ತೆ, ಬ್ಯಾಂಕ್ ಖಾತೆ ಮುಟ್ಟುಗೋಲು
Posted On September 6, 2017
0

ದೇಶದೊಳಗಿನ ಕಾಳಧನಿಕರ ವಿರುದ್ಧ ಮತ್ತೆ ಮೋದಿ ಮಾಸ್ಟರ್ ಸ್ಟ್ರೋಕ್
ದೆಹಲಿ: ನೋಟು ಅಮಾನ್ಯ ನಂತರ ಕಾಳಧನಿಕರ ಜಾಡು ಕೈಬಿಟ್ಟು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಚುನಾವಣೆ ತಯಾರಿಯಲ್ಲಿ ಮುಳುಗಿದೆ ಎಂದು ಬೊಬ್ಬೆ ಇಡುವ ವಿರೋಧ ಪಕ್ಷಗಳಿಗೆ ಮಂಗಳವಾರ ಮೋದಿ ಹೊಸ ಶಾಕ್ ಕೊಟ್ಟಿದ್ದಾರೆ. ಸ್ವಾಮಿ ನಾವು ಸುಮ್ಮನಿಲ್ಲ ದೇಶಾದ್ಯಂತ ಸುಮಾರು 2.1 ಲಕ್ಷ ಬೇನಾಮಿ ಕಂಪೆನಿಗಳ ಬ್ಯಾಂಕ್‍ಗಳನ್ನು ಶೋಧಿಸಿ ವಹಿವಾಟು ಸ್ಥಗಿತಗೊಳಿಸಿದ್ದೇವೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಇದರಿಂದ ತಮ್ಮ ತೆರಿಗೆ ವಂಚನೆ ಎಲ್ಲಿ ಬಟಾಬಯಲಾಗುವುದೋ ಎಂದು ಹೆದರಿ ವಿರೋಧಿ ಪಕ್ಷಗಳು ಒಂದೇ ದಿನದಲ್ಲಿ ತೆಪ್ಪಗಾಗಿವೆ.
” ನಿಮ್ಮ ಹಸ್ತಾಕ್ಷರವು ದೇಶದ ಪ್ರಧಾನಿ ಹಸ್ತಾಕ್ಷರಕ್ಕಿಂತ ಪ್ರಭಾವಿ. ಹಾಗಾಗಿಯೇ ನೀವು ಸಹಿಹಾಕಿರುವ ನಿಮ್ಮ ಬ್ಯಾಂಕ್ ಖಾತೆಗಳಲ್ಲಿ ನಮಗೆ ಅತ್ಯಂತ ವಿಶ್ವಾಸವಿದೆ “.
– ಪ್ರಧಾನಿ ಮೋದಿ ( ಜು.1ಕ್ಕೆ ಚಾರ್ಟರ್ಡ್ ಅಕೌಂಟೆಂಟ್‍ಗಳ ಸಮಾವೇಶದಲ್ಲಿ ಕಾಳಧನಿಕರಿಗೆ ಸಹಾಯ ಬೇಡ ಎಂದು ನೀಡಿದ್ದ ಪರೋಕ್ಷ ಎಚ್ಚರಿಕೆ)