ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ – ಕೇಂದ್ರ ಸಚಿವ ಕಿರಣ್ ರಿಜ್ಜು

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜ್ಜು ಮಾಧ್ಯಮಗಳೊಂದಿಗೆ ಮಾತನಾಡಿ “2026 ರ ಹಜ್ ಯಾತ್ರಾ ತಯಾರಿ ನಾವು ನಮ್ಮ ಕಡೆಯಿಂದ ಈಗಲೇ ಆರಂಭಿಸಿದ್ದೇವೆ. 2025 ರ ಹಜ್ ಯಾತ್ರೆ ಇಲ್ಲಿಯ ತನಕ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿಯಾಗಿರುವುದು ಎಂದು ಹೇಳಲು ತುಂಬಾ ಖುಷಿಯಿದೆ” ಎಂದು ಕೇಂದ್ರ ಸಚಿವ ಕಿರಣ್ ರಿಜ್ಜು ಹೇಳಿದ್ದಾರೆ.
“ಹಿಂದಿನ ವರ್ಷ ಮತ್ತು ಅದಕ್ಕಿಂತ ಮೊದಲು ಹಜ್ ಯಾತ್ರೆಯಲ್ಲಿ ಅನೇಕ ದುರ್ಘಟನೆಗಳು ಸಂಭವಿಸುತ್ತಿತ್ತು. ಲಕ್ಷಾಂತರ ಜನ ಯಾತ್ರಿಗಳು ತೆರಳುವುದರಿಂದ ಸಾವು ನೋವುಗಳ ಪ್ರಮಾಣ ಕೂಡ ಹೆಚ್ಚಿರುತ್ತಿತ್ತು. ಈ ಬಾರಿ ಒಟ್ಟು ಮೃತರ ಸಂಖ್ಯೆ 64 ಮಾತ್ರ. ಈ ಹಿಂದಿನ ವರ್ಷಗಳಲ್ಲಿ ಸಾವಿನ ಸಂಖ್ಯೆ ಇನ್ನೂರು ದಾಟಿದ್ದೂ ಇದೆ. ಈ ಬಾರಿ 64 ಜನ ಮರಣ ಸಂಭವಿಸಿರುವುದು ನಮ್ಮ ದೇಶದ ಹಜ್ ಕಮಿಟಿಯ ಯಾವುದೇ ಕಾರಣದಿಂದ ಅಲ್ಲ. ಬೇರೆ ಯಾವುದಾದರೂ ಆರೋಗ್ಯ ಸಂಬಂಧಿತ ಆಗಿರಬಹುದೇ ವಿನ: ನಮ್ಮಿಂದ ಯಾವುದೇ ಲೋಪದೋಷ ಆಗಿ ಏನೂ ತೊಂದರೆ ಸಂಭವಿಸಿಲ್ಲ. ನಮ್ಮ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಅದರೊಂದಿಗೆ ವಿದೇಶಾಂಗ ಇಲಾಖೆಯ ಗಲ್ಭ್ ರಾಷ್ಟ್ರದ ರಾಯಭಾರಿಗಳು, ಅದರೊಂದಿಗೆ ನಾಗರಿಕ ವಿಮಾನಯಾನ ಸಚಿವಾಲಯ, ಆರೋಗ್ಯ ಸಚಿವಾಲಯ ಹಾಗೂ ಗೃಹ ಸಚಿವಾಲಯ ಅಧಿಕಾರಿಗಳಿಗೂ ನಾವು ಧನ್ಯವಾದ ಅರ್ಪಿಸಿದ್ದೇವೆ. ಎಲ್ಲರ ಸಹಕಾರವೂ ಉತ್ತಮವಾಗಿತ್ತು” ಎಂದು ಕೇಂದ್ರ ಸಚಿವ ಕಿರಣ್ ರಿಜ್ಜು ಹೇಳಿದ್ದಾರೆ.