ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!

“ಉದಯಪುರ್ ಪೈಲ್ಸ್ – ಟೈಲರ್ ಕನ್ನಯ್ಯ ಲಾಲ್ ಹತ್ಯೆ” ಹೆಸರಿನ ಸಿನೆಮಾವೊಂದು ಇದೇ ಜುಲೈ 11 ಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ನಟ ವಿಜಯ್ ರಾಜ್ ಈ ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜಾಮಿಯತ್ ಉಲ್ಮಾ ಐ ಹಿಂದ್ ಇದರ ಅಧ್ಯಕ್ಷ ಹರ್ಷದ್ ಮದಾನಿ ಅವರು “ಉದಯಪುರ್ ಫೈಲ್ಸ್ – ಕನ್ನಯ್ಯ ಲಾಲ್ ಟೈಲರ್ ಮರ್ಡರ್” ಸಿನೆಮಾಕ್ಕೆ ತಡೆ ಕೋರಿ ನ್ಯಾಯಾಲಯಗಳಲ್ಲಿ ದಾವೆ ಹೂಡಲು ತಮ್ಮ ಮುಸ್ಲಿಂ ಸಂಘಟನೆಗೆ ಸೂಚಿಸಿದ ನಂತರ ಅನೇಕ ಹೈಕೋರ್ಟ್ ಗಳಲ್ಲಿ ತಡೆಯಾಜ್ಞೆ ಕೋರಿ ಪ್ರಕರಣ ದಾಖಲಾಗಿದೆ.
ಸಿನೆಮಾ ಉದಯಪುರದಲ್ಲಿ 2022, ಜೂನ್ 28ರಂದು ನಡೆದ ಟೈಲರ್ ಕನ್ನಯ್ಯ ಲಾಲ್ ಹತ್ಯೆಯ ಸುತ್ತ ಕಥಾಹಂದರವನ್ನು ಹೊಂದಿದೆ. ಮೂಲಭೂತವಾದಿಗಳಾದ ಮೊಹಮ್ಮದ್ ರಿಯಾಜ್ ಹಟ್ಟಾರಿ ಹಾಗೂ ಮೊಹಮ್ಮದ್ ಗೌವಾಸ್ ಇವರಿಬ್ಬರೂ ಸೇರಿ ಕನ್ನಯ್ಯಾ ಲಾಲ್ ಅವರನ್ನು ಕೊಂದಿದ್ದರು. ಕನ್ನಯ್ಯಾ ಲಾಲ್ ಅವರು ಭಾರತೀಯ ಜನತಾ ಪಾರ್ಟಿಯ ಮಾಜಿ ವಕ್ತಾರೆ ನುಪೂರ್ ಶರ್ಮಾ ಅವರ ಹೇಳಿಕೆಯೊಂದನ್ನು ಸಮರ್ಥಿಸಿದ ಕಾರಣಕ್ಕೆ ಹತ್ಯೆಗೊಳಗಾಗಿದ್ದರು.
ಜಮಿಯತ್ ಉಲ್ಮಾ ಐ ಹಿಂದ್ ದೆಹಲಿ, ಗುಜರಾತ್ ಹಾಗೂ ಮಹಾರಾಷ್ಟ್ರ ಉಚ್ಚ ನ್ಯಾಯಾಲಯಗಳ ಮೆಟ್ಟಲೇರಿದ್ದು ಉದಯಪುರ ಫೈಲ್ಸ್ – ಕನ್ನಯ್ಯ ಟೈಲರ್ ಮರ್ಡರ್ ಸಿನೆಮಾಗೆ ತಡೆ ನೀಡಬೇಕೆಂದು ಮನವಿ ಮಾಡಿದೆ. ” ಈ ಸಿನೆಮಾ ನೂಪುರ್ ಶರ್ಮಾ ಅವರ ಹೇಳಿಕೆಯ ಸುತ್ತಾ ಸುತ್ತುತ್ತಿದ್ದು, ಆ ಹೇಳಿಕೆಯಿಂದ ಆವತ್ತು ದೇಶದಲ್ಲಿ ಬೆಂಕಿ ಬಿದ್ದಿದೆ. ಅದರೊಂದಿಗೆ ನಮ್ಮ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ಜಗತ್ತಿನ ರಾಷ್ಟ್ರಗಳ ಮುಂದೆ ನಮ್ಮ ವರ್ಚಸ್ಸು ಕುಂದುವುದನ್ನು ಮನಗಂಡ ಬಿಜೆಪಿ ಆಕೆಯನ್ನು ಪಕ್ಷದಿಂದ ಹೊರಗೆ ಹಾಕಿತ್ತು” ಎಂದು ಮದಾನಿ ಹೇಳಿದ್ದಾರೆ. ಈ ಸಿನೆಮಾ ಬಿಡುಗಡೆಯಾದರೆ ಮುಸ್ಲಿಮರಲ್ಲಿ ಆಕ್ರೋಶದ ಜ್ವಾಲೆ ಹೆಚ್ಚಾಗಿ ಅದರಿಂದ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬಂದು ಸಮಸ್ಯೆ ಹೆಚ್ಚಾಗಬಹುದು ಎಂದು ಮದಾನಿ ಎಚ್ಚರಿಕೆ ಕೂಡ ನೀಡಿದ್ದಾರೆ.
ಇನ್ನು ಅರ್ಷದ್ ಮದಾನಿ ಮಾತನಾಡಿ ” ಈ ಸಿನೆಮಾ ಮುಸ್ಲಿಮರಲ್ಲಿ ದ್ವೇಷ ಬಿತ್ತಬಹುದು. ಇನ್ನು ಇದರಲ್ಲಿ ಗ್ಯಾನವ್ಯಾಪಿ ಮಸೀದಿಯ ಬಗ್ಗೆಯೂ ಕಥಾಹಂದರವಿದೆ. ಆದ್ದರಿಂದ ಈ ಸಿನೆಮಾ ಭಾರತೀಯ ಸಂವಿಧಾನದ ಆರ್ಟಿಕಲ್ 14, 15, 21 ರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಲಿದೆ” ಎಂದು ತಿಳಿಸಿದ್ದಾರೆ.
ಉದಯಪುರ ಫೈಲ್ಸ್ – ಕನ್ನಯ್ಯಾ ಲಾಲ್ ಟೈಲರ್ ಮರ್ಡರ್ ಸಿನೆಮಾ ಇದೇ ಜುಲೈ 11 ರಂದು ಸಿನೆಮಾ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಖ್ಯಾತ ಪೋಷಕ ನಟ ವಿಜಯ್ ರಾಜ್ ಅವರು ಕನ್ನಯ್ಯಾ ಲಾಲ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಭರತ್ ಎಸ್ ಶ್ರೀನಾಟೆ ಈ ಕಥೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ. ಉದಯಪುರ ಟೈಲರ್ ಕನ್ನಯ್ಯಾ ಲಾಲ್ ಹತ್ಯೆ, ಗ್ಯಾನವ್ಯಾಪಿ ಮಸೀದಿ ಹಾಗೂ ಇತರ ವಿಷಯಗಳ ಸುತ್ತ ಈ ಸಿನೆಮಾ ಸುತ್ತುತ್ತಿದೆ. ಈ ಸಿನೆಮಾದ ನಿರ್ಮಾಪಕರಾಗಿ ಅಮಿತ್ ಜಾನಿಯವರು ಬಂಡವಾಳ ಹೂಡಿದರೆ ರಿಲಯನ್ಸ್ ಎಂಟರಟೇನಮೆಂಟ್ ಅವರು ಈ ಸಿನೆಮಾದ ಹಂಚಿಕೆದಾರರಾಗಿದ್ದಾರೆ.