ಪ್ರಾಜೆಕ್ಟ್ ಎಂದರೆ ಮಹಿಳೆ… ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

ಮುಸ್ಲಿಂ ರಾಷ್ಟ್ರಗಳಿಂದ 3 ವರ್ಷಗಳಲ್ಲಿ 500 ಕೋಟಿ ಪಡೆದಿದ್ದ ಲವ್ ಜಿಹಾದ್ ಬಾಬಾ!
ಹಿಂದೂ ಮಹಿಳೆಯರನ್ನು ಮತಾಂತರ ಮಾಡಿ ಲವ್ ಜಿಹಾದ್ ನಡೆಸಲು 1000 ಮುಸ್ಲಿಂ ಯುವಕರನ್ನು ಸ್ವಯಂಘೋಷಿತ ದೇವಮಾನವ ಜಮಾಲುದ್ದೀನ್ ಆಲಿಯಾಸ್ ಛಂಗೂರ್ ಬಾಬಾ ನೇಮಿಸಿಕೊಂಡಿದ್ದ. ಇನ್ನು ಈ 1000 ಯುವಕರನ್ನು ಸಾಕಬೇಕಲ್ಲ. ಅವರಿಗೆ ಸಂಬಳ, ಭತ್ತ್ಯೆ, ಓಡಾಟದ ಖರ್ಚು ಹೀಗೆ ಸಾಕಷ್ಟು ರೂಪಾಯಿ ಬೇಕಾಗುತ್ತಿತ್ತು. ಇದನ್ನೆಲ್ಲಾ ಅವನು ಎಲ್ಲಿಂದ ಭರಿಸುತ್ತಿದ್ದ ಎನ್ನುವ ವಿಷಯ ಈಗ ಬಹಿರಂಗಗೊಂಡಿದೆ. ಅವನಿಗೆ ಲವ್ ಜಿಹಾದ್ ನಡೆಸಲು ಮೂರು ವರ್ಷಗಳಲ್ಲಿ 500 ಕೋಟಿ ರೂಪಾಯಿಗಳನ್ನು ಮುಸ್ಲಿಂ ರಾಷ್ಟ್ರಗಳಲ್ಲಿರುವ ಭಾರತ ವಿರೋಧಿಗಳು ಪೂರೈಸುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ಯುವಕರನ್ನು ಈ ಕಾರ್ಯಕ್ಕಾಗಿಯೇ ನೇಮಿಸಿಕೊಂಡಿದ್ದ ಜಮಾಲುದ್ದೀನ್ ಅದರಲ್ಲಿ ಯಶಸ್ವಿ ಆದವರಿಗೆ ವಿಶೇಷ ಪ್ಯಾಕೇಜುಗಳನ್ನು, ಬಹುಮಾನಗಳನ್ನು ಕೂಡ ನೀಡುತ್ತಿದ್ದ. ಈ ಯುವಕರು ಹಿಂದುಳಿದ ಪ್ರದೇಶಗಳ ಬಡ ಕುಟುಂಬದ ಮಹಿಳೆಯರನ್ನು, ವಿಧವೆಯರನ್ನು, ಸಾಮಾನ್ಯ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿದ್ದರು. ಅವರಿಗೆ ಪ್ರೇಮ, ವಿವಾಹ, ಮನೆ ಎಂಬ ಆಸೆಗಳನ್ನು ತೋರಿಸಿ, ಅವರನ್ನು ಮತಾಂತರ ಮಾಡುತ್ತಿದ್ದ. ಯಾವುದೇ ಆಮಿಷಗಳಿಗೆ ಒಪ್ಪದಿದ್ದರೆ ಬಲವಂತವಾಗಿ ಮತಾಂತರಿಸುತ್ತಿದ್ದ. ಇತ್ತೀಚೆಗೆ ಉತ್ತರ ಪ್ರದೇಶದ ಲಖನೌದಲ್ಲಿ ಬಂಧನಕ್ಕೊಳಗಾಗಿದ್ದ ಜಮಾಲುದ್ದೀನ್ ಅನೇಕ ವಿಷಯಗಳನ್ನು ಬಾಯಿಬಿಟ್ಟಿದ್ದು, ಪಾಕ್ ಸಲಹೆ, ಕೊಲ್ಲಿ ದೇಶದ 500 ಕೋಟಿ ರೂಪಾಯಿ ಹಣದೊಂದಿಗೆ ಮತಾಂತರ ನಡೆಸುತ್ತಿದ್ದದ್ದು ಪತ್ತೆಯಾಗಿದೆ. ಜಮಾಲುದ್ದೀನ್ ಅವನ ಕಾರ್ಯತಂತ್ರ ಹೇಗಿತ್ತು ಎಂದರೆ 14 ರಿಂದ 24 ರ ವಯೋಮಾನದ ಹಿಂದೂ ಯುವತಿಯರನ್ನೇ ಗುರುತಿಸಿ ಅವರಿಗೆ ಇವನ ಗ್ಯಾಂಗಿನವರು ಗಾಳ ಹಾಕುತ್ತಿದ್ದರು. ಇವನ ಮತಾಂತರದ ರೂಪುರೇಶೆ ಹೇಗಿತ್ತು ಎಂದರೆ ಬ್ರಾಹ್ಮಣ, ಕ್ಷತ್ರಿಯ, ಒಬಿಸಿಗಳ ಮತಾಂತರಕ್ಕೆ ಒಂದೊಂದು ದರ ಫಿಕ್ಸ್ ಮಾಡಿ ಹಣ ಪಡೆಯುತ್ತಿದ್ದ ಛಂಗೂರ್ ಬಾಬಾ. ಉಗ್ರ ಚಟುವಟಿಕೆ ನಡೆಸುತ್ತಿರುವವರು ಸೇರಿದಂತೆ ಮತಾಂಧ ಯುವಕರ ಜೊತೆ ಹಿಂದೂ ಯುವತಿಯರ ಮದುವೆ ಮಾಡಲು ಬಾಬಾ ಯತ್ನಿಸುತ್ತಿದ್ದ ವೇಳೆ ಅವನನ್ನು ಬಂಧಿಸಲಾಗಿದೆ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.
ಈ ಕೆಲಸ ಮಾಡಿದ್ದಕ್ಕಾಗಿ ಯುವಕರಿಗೆ ಇಂಡೋ ನೇಪಾಳ ಗಡಿ ಭಾಗದಲ್ಲಿ ಹಣ ಪಾವತಿ ಮಾಡುತ್ತಿದ್ದ. ಇದಕ್ಕೆ ಸಂಬಂಧಿಸಿದಂತೆ ಐಬಿ ಮತ್ತು ಎನ್ ಐಎಗಳು ಛಂಗೂರ್ ಬಾಬಾನನ್ನು ವಿಚಾರಣೆ ನಡೆಸಲಿವೆ ಎಂದು ಗೊತ್ತಾಗಿದೆ.
ಬಾಬಾ ಅನೇಕ ಸಲ ನೇಪಾಳಕ್ಕೆ ತೆರಳಿ ತನ್ನ ಹಾಗೂ ಪಾಕ್ ಅಧಿಕಾರಿಗಳ ಜೊತೆಗಿನ ಸ್ನೇಹವನ್ನು ಬಲಪಡಿಸಲು ಅಲ್ಲಿನ ಪಾಕ್ ರಾಯಭಾರ ಕಚೇರಿಯಲ್ಲಿ ಸಭೆ ನಡೆಸಿದ್ದ. ಪಾಕ್ ನ ಗುಪ್ತಚರ ದಳದ ಅಧಿಕಾರಿಗಳನ್ನು ಭೇಟಿ ಮಾಡಲು ಯತ್ನಿಸಿದ್ದ ಎಂದು ಗೊತ್ತಾಗಿದೆ. ಇನ್ನು ಛಂಗೂರ್ ಬಾಬಾ ತನ್ನ ಮಸಲತ್ತುಗಳು ಹೊರಜಗತ್ತಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಪ್ರತ್ಯೇಕ ಕೋಡ್ ವರ್ಡ್ ಗಳನ್ನು ಬಳಸುತ್ತಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಪ್ರಾಜೆಕ್ಟ್, ಮಿಟ್ಟಿ ಪಲಟ್ನಾ, ಕಾಜಲ್ ಲಗಾನಾ ಮತ್ತು ದರ್ಶನ್ ಎಂಬ ಹೆಸರಿನ 4 ಕೋಡ್ ವರ್ಡ್ ಬಳಸುತ್ತಿದ್ದ ಬಾಬಾ. ಈ ಕೋಡ್ ವರ್ಡ್ ಗಳನ್ನು ವಿಶೇಷವಾಗಿ ಹಿಂದೂ ಹೆಣ್ಣುಮಕ್ಕಳ ಮತಾಂತರಕ್ಕೆ ಬಳಕೆ ಮಾಡಿದ್ದ. “ಪ್ರಾಜೆಕ್ಟ್” ಎಂದರೆ ಮಹಿಳೆ, ಪ್ರಾಜೆಕ್ಟ್ ಸಿಕ್ಕಿತಾ ಎಂದರೆ ಮಹಿಳೆ ಸಿಕ್ಕಿದಳಾ ಎಂದರ್ಥ, ” ಮಿಟ್ಟಿ ಪಲಟ್ನಾ” ಎಂದರೆ ಮತಾಂತರ ಮಾಡಿಬಿಡಿ ಎಂದು ಅರ್ಥ, ಕಾಜಲ್ ಲಗಾನಾ ಎಂದರೆ ತಿರುಚುವುದು ಮತ್ತು ದರ್ಶನ್ ಎಂದರೆ ಛಂಗೂರ್ ಬಾಬಾನ ದರ್ಶನ. ಈ ರೀತಿ ಕೋಡ್ ವರ್ಡ್ ಗಳನ್ನು ಬಳಸಿಕೊಂಡು ಛಂಗೂರ್ ಬಾಬಾ ಮತಾಂತರ ಪ್ರಕ್ರಿಯೆಗಳನ್ನು ನಡೆಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.