ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ

ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ಮಹಿಳಾ ಹಾಸ್ಟೆಲ್ ಶೌಚಾಲಯದ ಗೋಡೆಯಲ್ಲಿ ಹಿಂದೂ – ಮುಸ್ಲಿಂ ಮಧ್ಯೆ ದ್ವೇಷದ ವಿಷ ಬಿತ್ತುವ ರೀತಿ ಪ್ರಚೋದನಕಾರಿ ಬರಹ ಬರೆದ ಪ್ರಕರಣ ಸಂಬಂಧಿಸಿ ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಕೇರಳದ ಕಾಸರಗೋಡು ಮೂಲದ ವಿದ್ಯಾರ್ಥಿನಿಯನ್ನು ಬಂಧಿಸಿದ್ದಾರೆ.
ಮೇ 7 ರಂದು ಸಂಜೆ 7 ಗಂಟೆಗೆ ಹಾಸ್ಟೆಲ್ ಮೊದಲ ಮಹಡಿಯ ಶೌಚಾಲಯದಲ್ಲಿ ಗೋಡೆಯ ಮೇಲೆ ಅಶ್ಲೀಲ ಪದಗಳನ್ನು ಬಳಸಿ ಪ್ರಚೋದನಕಾರಿ ಬರಹ ಬರೆಯಲಾಗಿತ್ತು. ಹಾಸ್ಟೆಲ್ ವಿದ್ಯಾರ್ಥಿಗಳೇ ಈ ಕೃತ್ಯ ಎಸಗಿದ್ದಾರೆಂದು ನಂಬಲಾಗಿತ್ತು. ಈ ಬಗ್ಗೆ ನಿಟ್ಟೆ ಕಾಲೇಜಿನ ಮಹಿಳಾ ಹಾಸ್ಟೆಲ್ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದರು. ಎಫ್ ಐ ಆರ್ ದಾಖಲಿಸಿದ ಪೊಲೀಸರು ತನಿಖೆಗೆ ಮುಂದಾಗಿದ್ದರು. ಭಾರತ – ಪಾಕ್ ಸಂಘರ್ಷದ ಸಂದರ್ಭದಲ್ಲಿ ಬರೆಯಲಾಗಿದ್ದ ಪ್ರಚೋದನಕಾರಿ ಬರಹದ ಬಗ್ಗೆ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿದ್ದರು. ಆದರೆ ಸರಿಯಾದ ಸಾಕ್ಷ್ಯ ಸಿಕ್ಕಿರಲಿಲ್ಲ. ಬರೆದಿದ್ದದ್ದು ಪೆನ್ಸಿಲ್ ನಿಂದ ಆದ ಕಾರಣ ತನಿಖೆಗೆ ಇಷ್ಟು ದಿನ ಬೇಕಾಗಿದ್ದಿರಬಹುದು. ಆಕೆ ಬರೆದಿರುವ ವಿಷಯ ಮನಸ್ಸಿಗೆ ಘಾಸಿ ಮಾಡುವಂತೆ ಇರುವುದರಿಂದ ಇಲ್ಲಿ ಹೇಳುವುದು ಸೂಕ್ತವೆನಿಸುತ್ತಿಲ್ಲ. ಆದ್ದರಿಂದ ನಾವು ಆ ವಾಕ್ಯಗಳನ್ನು ಇಲ್ಲಿ ಬರೆಯುತ್ತಿಲ್ಲ.
ಇದೀಗ ಕೈಬರಹದ ಹೋಲಿಕೆ ಆಧರಿಸಿ ಪೊಲೀಸರು ಆರೋಪಿ ವಿದ್ಯಾರ್ಥಿನಿಯನ್ನು ಆರೆಸ್ಟ್ ಮಾಡಿದ್ದಾರೆ. ಪೊಲೀಸರು ನಿಟ್ಟೆ ಕಾಲೇಜಿನ ವಿದ್ಯಾರ್ಥಿನಿ ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿ ಫಾತಿಮಾ ಶಬ್ನಾ (21) ಎಂಬಾಕೆಯನ್ನು ಬಂಧಿಸಿದ್ದು, ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆಕೆಯ ಉದ್ದೇಶ ಏನಿರಬಹುದು ಎಂದು ಕೂಡ ಇಲ್ಲಿ ನೋಡಬೇಕಿದೆ. ಯಾಕೆಂದರೆ ಭಾರತದಲ್ಲಿ ಕುಳಿತು ಇಲ್ಲಿ ಜಲ, ಗಾಳಿ, ಆಹಾರ ಸೇವಿಸಿ ಇಲ್ಲಿನ ನೆಲಕ್ಕೆ ದ್ರೋಹ ಬಗೆಯುವ ಮನಸ್ಥಿತಿ ಈ ದೇಶದ ಕೆಲವರಲ್ಲಿದೆ. ಕೇರಳದ ಕೆಲವು ಮೂಲೆಗಳಲ್ಲಿ ಕುಳಿತುಕೊಂಡು ಅಲ್ಲಿನ ಯುವ ಜನಾಂಗದ ತಲೆಕೆಡಿಸುವ ಕೆಲಸವನ್ನು ಮೂಲಭೂತವಾದಿಗಳು ಮಾಡುತ್ತಿದ್ದಾರೆ. ಈ ಬಂಧಿತ ಯುವತಿಯ ಹಿಂದೆ ಅಂತಹ ಜಾಲ ಇದೆಯಾ ಎಂದುಕೊಡ ನೋಡಬೇಕಿದೆ. ಆ ಮೂಲಕ್ಕೆ ಹೋದರೆ ಪೊಲೀಸರಿಗೆ ಇನ್ನಷ್ಟು ದೇಶದ್ರೋಹಿಗಳ ಸುಳಿವು ಸಿಗಬಹುದು.