ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆದ ಹೆಣ್ಣಿನ ಶೋಷಣೆಯೊಂದು ಆಕೆಗೆ ಯಾರು ರಕ್ಷಕರು, ಯಾರು ಭಕ್ಷಕರು ಎನ್ನುವುದೇ ಪ್ರಶ್ನಾರ್ಥಕ ಚಿಹ್ನೆಯಾಗಿ ಉಳಿಯುವಂತೆ ಮಾಡಿದೆ. ಆಕೆ ಮದುವೆಯಾಗಿ ಗಂಡನೊಡನೆ ಸುಖ ಸಂಸಾರ ಮಾಡುವ ಕನಸು ಇಟ್ಟುಕೊಂಡಿದ್ದಳು. ಗಂಡನೇನೋ ಸುಖ ಕೊಟ್ಟ. ಆದರೆ ಅದರೊಂದಿಗೆ ವಿಡಿಯೋ ಕೂಡ ಮಾಡಿದ. ಗಂಡನಲ್ವ ಎಂದು ಆಕೆ ಸುಮ್ಮನಿದ್ದದೇ ಅವಳಿಗೆ ಮುಳುವಾಯಿತು. ನಾನು ಗಿರಾಕಿಗಳನ್ನು ಕರೆದುಕೊಂಡು ಬರುತ್ತೇನೆ. ಅವರಿಗೂ ಸುಖ ಕೊಡು, ನನಗೆ ಹಣ ಸಿಗುತ್ತದೆ ಎಂದು ಗಂಡ ವರಾತ ತೆಗೆದ. ನಿತ್ಯ ಅವಳ ಬಳಿ ಕಾಮಾಂಧರು ಬರುತ್ತಿದ್ದರು. ಗಂಡನ ಈ ವ್ಯಾಪಾರದಿಂದ ಇವಳ ಜೀವನ ಸಂಕಷ್ಟವಾಯಿತು. ಕೊನೆಗೆ ಹೇಗೋ ಏನೋ ಈ ಕಥೆ ನಿಲ್ಲಲೇಬೇಕು ಎಂದುಕೊಂಡವಳಿಗೆ ಪೊಲೀಸ್ ಪೇದೆಯೊಬ್ಬ ಸಿಕ್ಕಿದ್ದಾನೆ. ಅವನಿಗೆ ಎಲ್ಲಾ ಕಥೆ ಹೇಳಿದ್ದಾಳೆ.
ಅವನು ಅವಳ ಮನೆಗೆ ಬಂದಿದ್ದಾನೆ. ಅಲ್ಲಿ ಗಂಡನಿಗೆ ಜೋರು ಮಾಡಿ ಅವಳ ಜೊತೆಗಿನ ಖಾಸಗಿ ವಿಡಿಯೋಗಳನ್ನು ತಾನು ನೋಡಿದ್ದಾನೆ. ನಂತರ ಗಂಡನಿಗೆ ಬೈದು ಅದನ್ನು ಡಿಲೀಟ್ ಮಾಡಿದ್ದಾನೆ. ಇನ್ನು ಹೀಗೆ ಮಾಡಿದರೆ ಎಚ್ಚರಿಕೆ ಎಂದು ಥೇಟ್ ಸಿಂಗಂ ಸ್ಟೈಲಿನಲ್ಲಿ ಆವಾಜ್ ಹಾಕಿ ಹೋಗಿದ್ದಾನೆ.
ಆದರೆ ಕೆಲವು ದಿನಗಳ ಬಳಿ ಈ ಪೇದೆ ಚಂದ್ರ ನಾಯಕನಿಗೆ ಆ ಯುವತಿಯ ಮೇಲೆ ಆಸೆಯಾಗಿದೆ.
ಹೇಗೂ ತಾನು ಅವಳನ್ನು ಸಂಕಷ್ಟದಿಂದ ಪಾರು ಮಾಡಿದವನಲ್ವಾ? ಹಾಗಿದ್ದ ಮೇಲೆ ಅವಳು ತನಗೆ ಉಪಕಾರ ಮಾಡಬೇಕು ಎಂದು ಅವಳು ಒಬ್ಬಳೇ ಇದ್ದಾಗ ಮನೆಗೆ ನುಗ್ಗಿ ಅವಳನ್ನು ಉಂಡಿದ್ದಾನೆ. ಈ ವಿಷಯ ಅವಳ ಗಂಡನಿಗೆ ಗೊತ್ತಾದಾಗ ಒಂದಿಷ್ಟು ಚಿಲ್ಲರೆ ಹಣ ಕೊಟ್ಟು ಹೋಗಿದ್ದಾನೆ. ಪೊಲೀಸ್ ಕಾನ್ಸಸ್ಟೇಬಲ್ ತನ್ನ ಹೆಂಡತಿಯ ಜೊತೆ ಮಲಗಿದ ಮೇಲೆ ಅವನು ಇನ್ನು ನನಗೆ ಬುದ್ಧಿವಾದ ಏನು ಹೇಳಿಯಾನು ಎಂದು ಗಂಡ ಮತ್ತೆ ಹೆಂಡತಿಯನ್ನು ಮುಂದಿಟ್ಟು ವ್ಯಾಪಾರ ಶುರು ಮಾಡಿದ್ದಾನೆ. ಇದರಿಂದ ಅವಳಿಗೆ ಬೆಂಕಿಯಿಂದ ಬಾಣಲೆಗೆ ಹಾರಿ ಅಲ್ಲಿ ಒದ್ದಾಡಿ ಅಲ್ಲಿಂದ ಪ್ರಪಾತಕ್ಕೆ ದೂಡಿದಂತೆ ಆಗಿದೆ. ಕೊನೆಗೆ ಅವಳು ಯಾರಿಂದಲೋ ಮಾಹಿತಿ ಪಡೆದುಕೊಂಡು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾಳೆ.
ಈ ಇಡೀ ಪ್ರಕರಣವನ್ನು ಕೇಳಿದರೆ ಅವಳ ಜೀವನ ಅದೆಷ್ಟು ದುಸ್ವಪ್ನದಿಂದ ಕೂಡಿರಬೇಡಾ ಎಂದು ಅನಿಸದೇ ಇರುವುದಿಲ್ಲ. ಗಂಡ ಭಕ್ಷಕ, ಪೊಲೀಸ್ ಎಂಬ ರಕ್ಷಕನೂ ಗಂಡನಿಗೆ ಗಿರಾಕಿ ಆದ ಕಥೆಯೇ ತುಂಬಾ ನೋವಿನಿಂದ ಕೂಡಿರುವಂತದ್ದು. ಆಕೆಯ ಗಂಡ ಹಾಗೂ ಆ ಪೊಲೀಸ್ ಕಾನ್ಸಸ್ಟೇಬಲ್ ಇಬ್ಬರಿಗೂ ಸೂಕ್ತ ಶಿಕ್ಷೆಯಾಗಲಿ ಎನ್ನುವುದು ಪ್ರಜ್ಞಾವಂತ ನಾಗರಿಕರ ಆಶಯ.