ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು…

ಇದು ಗದಗದಲ್ಲಿ ನಡೆದಿರೋ ವಿಚಿತ್ರ ಘಟನೆ. ಸಾಮಾನ್ಯವಾಗಿ ಹಿಂದೂ ಯುವತಿಯರ ಮನವೊಲಿಸಿ ಅವರನ್ನು ಮದುವೆ ಮಾಡಿಕೊಂಡು ತಮ್ಮ ಧರ್ಮಕ್ಕೆ ಮತಾಂತರ ಮಾಡುವ ಮುಸ್ಲಿಂ ಯುವಕರ ಬಗ್ಗೆ ಸಾಕಷ್ಟು ಓದಿದ್ದೇವೆ, ಕೇಳಿದ್ದೇವೆ. ಆದರೆ ಮುಸ್ಲಿಂ ಯುವತಿಯರು ಹಿಂದೂ ಯುವಕರನ್ನು ಮದುವೆಯಾದರೆ ಅವರು ಸ್ವ ಇಚ್ಚೆಯಿಂದ ಹಿಂದೂ ಧರ್ಮಕ್ಕೆ ಬಂದು ಬಾಳುವುದನ್ನು ಕೂಡ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮುಸ್ಲಿಂ ಯುವತಿ ತಹಸೀನಾ ಹಾಗೂ ಗದಗದ ಗಾಂಧಿನಗರ ನಿವಾಸಿ ವಿಶಾಲಕುಮಾರ್ ಮೂರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಅಲ್ಲದೇ ಇವರಿಬ್ಬರು ಕಳೆದ ವರ್ಷದ ನವೆಂಬರ್ 24 ರಂದು ರಿಜಿಸ್ಟರ್ ಮದುವೆ ಕೂಡ ಆಗಿದ್ದರು. ರಿಜಿಸ್ಟರ್ ಮದುವೆಯ ಬಳಿಕ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳೋಣ ಎಂದು ತಹಸೀನಾ ಒತ್ತಾಯ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಇನ್ನು ಪ್ರೀತಿಸಿದ ಹುಡುಗಿ ಒತ್ತಾಯ ಮಾಡುವಾಗ ಅವಳಿಗೆ ಮತ್ತು ಅವಳ ಕುಟುಂಬಕ್ಕೆ ಬೇಸರ ಮಾಡುವುದು ಬೇಡಾ ಎಂದು 2025 ಏಪ್ರಿಲ್ 25 ರಂದು ಜಮಾತ್ ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮತ್ತೆ ಮದುವೆ ಕಾರ್ಯಕ್ರಮವೂ ನಡೆಯಿತು. ಈ ವೇಳೆ ಮದುವೆಯ ವಿಡಿಯೋ ತೆಗೆದಿರುವ ವಧುವಿನ ಕಡೆಯವರು ಅದನ್ನು ವೈರಲ್ ಮಾಡಿದ್ದಾರೆ. ಇದರಿಂದ ವಿಶಾಲ ಕುಮಾರ್ ನೊಂದಿದ್ದಾರೆ. ಯಾವಾಗ ವಿಶಾಲ ಕುಮಾರ್ ಮುಸ್ಲಿಂ ಸಂಪ್ರದಾಯದಂತೆ ಮದುವೆ ಆಗಿದ್ದಾನೆ ಎಂದು ಊರಲ್ಲಿ, ಬಂಧು ಮಿತ್ರರಲ್ಲಿ ಎಲ್ಲರಿಗೂ ವೈರಲ್ ವಿಡಿಯೋ ಮೂಲಕ ಗೊತ್ತಾಯಿತೋ ಅವನ ಮನೆಯವರು ಹಿಂದೂ ಸಂಪ್ರದಾಯದಂತೆ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಈ ವೇಳೆ ಯುವತಿ ಮನೆಯವರು ನೀನು ಹಿಂದೂ ಧರ್ಮ ಬಿಟ್ಟು, ಮುಸ್ಲಿಂ ಆಗು ಎಂದು ಒತ್ತಾಯ ಮಾಡಿದ್ದಾರೆ. ಅಲ್ಲದೇ ಮದುವೆಯ ಸಂದರ್ಭದಲ್ಲಿ ವಿಶಾಲ ಕುಮಾರ್ ಗೆ ಅರಿವಿಲ್ಲದಂತೆ ಆತನ ಹೆಸರು ಬದಲಾವಣೆ ಮಾಡಿದ್ದರು ಎನ್ನಲಾಗಿದೆ.
ನಂತರದ ದಿನಗಳಲ್ಲಿ ತಹಸೀನ್ ಹಾಗೂ ಆಕೆಯ ತಾಯಿ ಬೇಗಂ ಬಾನು ಜಮಾತ್ ಗೆ ಹೋಗುವಂತೆ ಬಲವಂತ ಮಾಡಿದ್ದಾರೆ. ಟೋಪಿ, ಜುಬ್ಬಾ ಧರಿಸು, ಹಣೆ ಮೇಲಿನ ಕುಂಕುಮ ಅಳಿಸು, ಕಿವಿಗೆ ಹಾಕಿರುವ ರಿಂಗ್ ತೆಗೆ, ಗಡ್ಡ ಬಿಡು, ನಿತ್ಯ ನಮಾಜ್ ಮಾಡುವಂತೆ ಒತ್ತಾಯ ಮಾಡುತ್ತಾ ಬಂದಿದ್ದಾರೆ ಎಂದು ವಿಶಾಲ ಕುಮಾರ್ ಆರೋಪಿಸಿದ್ದಾರೆ.
ಆರಂಭದಲ್ಲಿ ಹಿಂದೂ ಸಂಪ್ರದಾಯದಂತೆಯೂ ಮದುವೆ ಆಗುತ್ತೇನೆ ಎಂದು ಒಪ್ಪಿದ್ದ ತಹಸೀನಾ, ಬಳಿಕ ಕುಟುಂಬಸ್ಥರ ಹಾಗೂ ಮುಸ್ಲಿಂ ಮುಖಂಡರ ಒತ್ತಾಯಕ್ಕೆ ಮಣಿದು ನಿರಾಕರಿಸಿದ್ದಾಳೆ. ಸದ್ಯ ಯುವತಿಯ ಮನೆಯವರು, ಮುಸ್ಲಿಂ ಧರ್ಮಕ್ಕೆ ಮತಾಂತರ ಆಗದಿದ್ದರೆ ಮುಂದೆ ಪರಿಣಾಮ ನೆಟ್ಟಗಿರಲ್ಲ, ರೇಪ್ ಕೇಸ್ ಹಾಕ್ತೇವೆ, ಕೊಲೆ ಮಾಡಿಸ್ತೀವಿ ಎಂದು ಹೆದರಿಸುತ್ತಿದ್ದಾರೆ ಎಂದು ವಿಶಾಲ ಕುಮಾರ್ ಆರೋಪಿಸಿದ್ದಾರೆ.
ಈ ಯುವಕನ ಹೋರಾಟಕ್ಕೆ ಹಿಂದೂ ಸಂಘಟನೆಗಳು ಮುಂದೆ ಬಂದಿದ್ದು, ಇದು ಕೂಡ ಲವ್ ಜಿಹಾದ್. ಯುವತಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಕ್ರಮ ಜರುಗಬೇಕೆಂದು ಒತ್ತಾಯಿಸಿದ್ದಾರೆ.