ಇನ್ನೂ ಬಹುಪತಿತ್ವ ಭಾರತದ ಈ ಹಳ್ಳಿಯಲ್ಲಿದೆ: ಖುಷಿಯಿಂದ ಸಹೋದರರನ್ನು ಮದುವೆಯಾದ ವಧು!

ಮದುಮಗಳು ಸುನೀತಾ ಪ್ರಕಾರ, ಅವಳಿಗೆ ಇಂತಹ ಒಂದು ಪದ್ಧತಿ ಅವಳ ಸಮುದಾಯದಲ್ಲಿ ಆಚರಣೆಯಲ್ಲಿರುವುದು ಗೊತ್ತೇ ಇದೆ. ಅವಳು ಹೀಗೆ ಮದುವೆಯಾಗಿರುವುದಕ್ಕೆ ಯಾರ ಒತ್ತಡವೂ ಇಲ್ಲ ಎಂದು ಹೇಳಿದ್ದಾಳೆ. ಇವತ್ತಿನ ಕಾಲಕ್ಕೆ ಬಹಳ ವಿಚಿತ್ರವಾದ ವಿವಾಹವೊಂದು ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಅಲ್ಲಿ ಹಟ್ಟಿ ಎನ್ನುವ ಜನಾಂಗದಲ್ಲಿ ಶತಮಾನಗಳ ಹಿಂದಿನ ಬಹುಪತಿತ್ವ ಪದ್ಧತಿ ಜಾರಿಯಲ್ಲಿದೆ. ಆಧುನಿಕ ಕಾಲದಲ್ಲಿ ಈ ಪದ್ಧತಿಯಿಂದ ಬಹುತೇಕರು ಹೊರಗೆ ಬಂದಿದ್ದರೂ ಮೊನ್ನೆಯಷ್ಟೇ ಒಂದು ವಿವಾಹ ನಡೆದು ಅದರಲ್ಲಿ ಯುವತಿ ಇಬ್ಬರು ಸಹೋದರರನ್ನು ಮದುವೆಯಾಗುವ ಮೂಲಕ ಆ ಪದ್ಧತಿಯನ್ನು ಜೀವಂತವಾಗಿಟ್ಟಿದ್ದಾಳೆ.
ಹಿಮಾಚಲ ಪ್ರದೇಶದ ಷಿಲಾಯಿ ಹಳ್ಳಿಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಯುವತಿ ಇಬ್ಬರು ಅಣ್ಣತಮ್ಮನನ್ನು ಮದುವೆಯಾಗಿದ್ದಾಳೆ. ಅದೊಂದು ಬಿಟ್ರೆ ಬೇರೆ ಎಲ್ಲವೂ ಆ ಮದುವೆಯ ಸಮಾರಂಭದಲ್ಲಿ ಸಾಮಾನ್ಯ ಶಿಷ್ಟಾಚಾರಗಳೇ ನಡೆದಿವೆ. ಒಟ್ಟು ಮೂರು ದಿನ ನಡೆದ ಈ ಮದುವೆ ಸಮಾರಂಭ ಜುಲೈ 12 ರಂದು ಆರಂಭವಾಗಿತ್ತು. ಎಲ್ಲಾ ಬಂಧು ಮಿತ್ರರ ಸಡಗರದ ನಡುವೆ ಮೂರು ಜನ ಒಂದೇ ಮದುವೆಯ ಬಂಧದಲ್ಲಿ ಬಂಧಿಯಾದರು. ಒಬ್ಬಳನ್ನೇ ಮದುವೆಯಾದ ಇಬ್ಬರಲ್ಲಿ ಒಬ್ಬ ವ್ಯಕ್ತಿ ಪ್ರದೀಪ್ ರಾಜ್ಯ ಸರಕಾರದಲ್ಲಿ ಉದ್ಯೋಗಿಯಾಗಿದ್ದರೆ, ಅವನ ಸಹೋದರ ಕಪಿಲ್ ವಿದೇಶದಲ್ಲಿ ಉದ್ಯೋಗದಲ್ಲಿ ಉದ್ಯೋಗದಲ್ಲಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರದೀಪ್ ” ನಾವು ನಮ್ಮ ಸಮುದಾಯದ ಈ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದೇವೆ. ಸಾರ್ವಜನಿಕವಾಗಿ ಇದನ್ನು ಅನುಸರಿಸಿದರೂ ನಮಗೆ ನಮ್ಮ ಪದ್ಧತಿಯ ಬಗ್ಗೆ ಹೆಮ್ಮೆ ಇದೆ. ಇದು ನಮ್ಮ ಕುಟುಂಬದ ಎಲ್ಲರ ಸಹ ನಿರ್ಧಾರವೂ ಆಗಿದೆ” ಎಂದು ಹೇಳಿದರು.
ಕಪಿಲ್ ಮಾತನಾಡಿ ” ನಾನು ವಿದೇಶದಲ್ಲಿ ನೆಲೆಸಿದ್ದರೂ ನಮ್ಮ ಸಹೋದರರ ನಡುವಿನ ಬಾಂಧವ್ಯ, ಸ್ಥಿರತೆ ಮತ್ತು ವಿಶ್ವಾಸದಿಂದ ಒಂದು ಸದೃಢ ಕುಟುಂಬ ಅಸ್ತಿತ್ವದಲ್ಲಿ ಬಂದಂತೆ ಆಗಿದೆ. ನಾವು ಪಾರದರ್ಶಕತೆಯನ್ನು ಹೊಂದಿದ್ದೇವೆ” ಎಂದು ಹೇಳಿದರು.
ಈ ಸಮುದಾಯದ ಹಿರಿಯರ ಪ್ರಕಾರ ಇಂತಹ ವಿವಾಹಗಳು ಹಿಂದಿನ ಕಾಲದಲ್ಲಿ ಹೆಚ್ಚು ಸಾರ್ವಜನಿಕವಾಗಿ ಮಾಡುತ್ತಿರಲಿಲ್ಲ. ನಮ್ಮ ಸಮುದಾಯದ ಒಳಗೆ ಇದು ಖಾಸಗಿ ಕಾರ್ಯಕ್ರಮವಾಗಿರುತ್ತಿತ್ತು ಎಂದು ಹೇಳಿದ್ದಾರೆ. ಶಿಲೈ ಹಳ್ಳಿಯ ನಿವಾಸಿ ಬಿಶನ್ ತೋಮರ್ ಪ್ರಕಾರ ಹಿಂದಿನಿಂದಲೂ ಇದು ಜಾರಿಯಲ್ಲಿದೆ. ಇಂತಹ ಡಜನ್ ಮದುವೆಗಳನ್ನು ತಾನು ನೋಡಿದ್ದೇನೆ. ನಮ್ಮ ಗ್ರಾಮದಲ್ಲಿ ಮೂರು ಡಜನ್ ಗಳಿಗೂ ಹೆಚ್ಚಿನ ಕುಟುಂಬಗಳಲ್ಲಿ ಹೀಗೆ ನಡೆದುಬಂದಿದೆ. ಅಲ್ಲಿ ಇಬ್ಬರು ಮೂವರು ಸಹೋದರರು ಒಬ್ಬಳನ್ನೇ ಮದುವೆಯಾಗಿ ಜೀವನ ಸಾಗಿಸುತ್ತಿದ್ದಾರೆ. ಕೆಲವೆಡೆ ಒಬ್ಬನೇ ಗಂಡಸಿಗೆ ಒಂದಕ್ಕಿಂತ ಹೆಚ್ಚು ಪತ್ನಿಯರೂ ಇದ್ದಾರೆ. ಆದರೆ ಎಲ್ಲರ ಗೌರವ ಮತ್ತು ಪ್ರಾಮಾಣಿಕತೆಯಿಂದ ಈ ಸಂಪ್ರದಾಯ ಪರಿಶುದ್ಧವಾಗಿ ಉಳಿದುಬಂದಿದೆ” ಎಂದು ಹೇಳುತ್ತಾರೆ. ಮುಖ್ಯವಾಗಿ ಇದರಿಂದ ಅವಿಭಕ್ತ ಕುಟುಂಬ ಪದ್ಧತಿ ಉಳಿದು ಹಿರಿಯರ ಆಸ್ತಿ ವಿವಾದವಾಗಲಿ, ಸ್ವತ್ತು, ಭೂ ವಿಭಜನೆಯಾಗಲಿ ನಡೆಯುವ ಸಾಧ್ಯತೆ ಇರುವುದಿಲ್ಲ.