2006 ರ ಮುಂಬೈ ಸರಣಿ ರೈಲು ಸ್ಫೋಟದ ಎಲ್ಲಾ 12 ಆರೋಪಿಗಳು ದೋಷಮುಕ್ತ!

2006 ರ ಜುಲೈ 11 ರಂದು ಮುಂಬೈನಲ್ಲಿ ಸಂಜೆ 6.30 ರ ಸುಮಾರಿಗೆ ಸ್ಥಳೀಯ ರೈಲುಗಳ ಪ್ರಥಮ ದರ್ಜೆ ಬೋಗಿಗಳಲ್ಲಿ ಒಂದರ ನಂತರ ಒಂದರಂತೆ ಏಳು ಸ್ಫೋಟಗಳು ಸಂಭವಿಸಿದ್ದವು. ಇದರಲ್ಲಿ 189 ಪ್ರಯಾಣಿಕರು ಸಾವನ್ನು ಅಪ್ಪಿದರೆ 824 ನಾಗರಿಕರು ಗಾಯಗೊಂಡಿದ್ದರು. ಈ ಘಟನೆ ನಡೆದ 19 ವರ್ಷಗಳ ನಂತರ ಮುಂಬೈ ಹೈಕೋರ್ಟ್ ಅಂತಿಮ ಆದೇಶ ಬಂದಿದೆ. ಆವತ್ತು ನಡೆದ ಎಲ್ಲಾ ಸ್ಫೋಟಗಳು ಮುಂಬೈನ ಪಶ್ಚಿಮ ರೈಲ್ವೆ ವ್ಯಾಪ್ತಿಯ ಖಾರ್, ಬಾಂದ್ರಾ, ಜೋಗೇಶ್ವರಿ, ಮಾಹಿಮ್, ಬೋರಿವಲಿ, ಮಾತುಂಗಾ ಮತ್ತು ಮೀರಾ – ಭಾಯಂದರ್ ರೈಲು ನಿಲ್ದಾಣಗಳ ಬಳಿ ಸಂಭವಿಸಿದ್ದವು. ರೈಲುಗಳಲ್ಲಿ ಇಡಲಾದ ಬಾಂಬ್ ಗಳನ್ನು ಆರ್ ಡಿಎಕ್ಸ್, ಅಮೋನಿಯಂ ನೈಟ್ರೇಟ್, ತೈಲ ಹಾಗೂ ಮೊಳೆಗಳಿಂದ ತಯಾರಿಸಲಾಗಿತ್ತು. ಅದನ್ನು ಏಳು ಪ್ರೆಶರ್ ಕುಕ್ಕರ್ ಗಳಲ್ಲಿ ಇರಿಸಲಾಗಿತ್ತು ಮತ್ತು ಟೈಮರ್ ಬಳಸಿ ಸ್ಫೋಟಿಸಲಾಗಿತ್ತು.
ಮಾರ್ಚ್ 2006 ರಲ್ಲಿ ಲಷ್ಕರ್ ಎ ತೈಬಾದ ಅಜಮ್ ಚೀಮಾ ಬಹಾವಲ್ಪುರದಲ್ಲಿರುವ ತನ್ನ ಮನೆಯಲ್ಲಿ ಸಿಮಿ ಮತ್ತು ಲಷ್ಕರ್ ನ ಎರಡು ಬಣಗಳ ಪ್ರಮುಖರೊಂದಿಗೆ ಈ ಸ್ಫೋಟಗಳಿಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ತಿಳಿಸಿದ್ದಾರೆ. ಮೇ 2006 ರಲ್ಲಿ 50 ಯುವಕರನ್ನು ಬಹಾವಲ್ಪುರದಲ್ಲಿರುವ ತರಬೇತಿ ಶಿಬಿರಕ್ಕೆ ಕಳುಹಿಸಲಾಗಿತ್ತು ಎಂದು ಪೊಲೀಸರು ಹೇಳಿದ್ದರು. ಅವರಿಗೆ ಬಾಂಬ್ ತಯಾರಿಸುವುದು ಮತ್ತು ಬಂದೂಕುಗಳನ್ನು ಉಪಯೋಗಿಸುವ ತರಬೇತಿ ನೀಡಲಾಗಿತ್ತು.
ಈಗ ಈ 2006 ರ ಮುಂಬೈ ಸರಣಿ ರೈಲು ಸ್ಫೋಟ ಪ್ರಕರಣದ ಎಲ್ಲಾ 12 ಅರೋಪಿಗಳನ್ನು ಸೋಮವಾರ ಬಾಂಬೆ ಹೈಕೋರ್ಟ್ ಖುಲಾಸೆಗೊಳಿಸಿದೆ. ಪ್ರಾಸಿಕ್ಯೂಶನ್ ಅಂದರೆ ಪಬ್ಲಿಕ್ ಪ್ರಾಸಿಕ್ಯೂಟರ್ ಗಳು ಆರೋಪಿಗಳ ವಿರುದ್ಧದ ಪ್ರಕರಣವನ್ನು ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. ಆರೋಪಿಗಳು ಅಪರಾಧ ಮಾಡಿದ್ದಾರೆ ಎಂದು ನಂಬುವುದು ಕಷ್ಟ. ಆದ್ದರಿಂದ ಅವರನ್ನು ಖುಲಾಸೆಗೊಳಿಸಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಅವರು ಬೇರೆ ಯಾವುದೇ ಪ್ರಕರಣದಲ್ಲಿ ಅಗತ್ಯವಿಲ್ಲದಿದ್ದರೆ, ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ತಿಳಿಸಿದೆ.
ಆರೋಪಿಗಳು: ಕಮಲ್ ಅಹ್ಮದ್ ಅನ್ಸಾರಿ (37 ವರ್ಷ) 2021 ರಲ್ಲಿ ಕೋವಿಡ್ ನಿಂದ ಸಾವು
ತನ್ವೀರ್ ಅಹಮದ್ ಅನ್ಸಾರಿ (37)
ಮೊಹಮ್ಮದ್ ಫೈಝಲ್ ಶೇಖ್ (36)
ಎಹ್ತೇಶಾಮ್ ಸಿದ್ದಿಕಿ (30)
ಮೊಹಮ್ಮದ್ ಮಜೀದ್ ಶಫಿ (32)
ಶೇಖ್ ಆಲಂ ಶೇಖ್ (41)
ಮೊಹಮ್ಮದ್ ಸಾಜಿದ್ ಅನ್ಸಾರಿ (34)
ಮಝಮ್ಮಿಲ್ ಶೇಖ್ (27)
ಸೊಹೆಲ್ ಮೆಹಮೂದ್ ಶೇಖ್ (43)
ಜಮೀರ್ ಅಹಮದ್ ಶೇಖ್ (30)
ಅಸಿಫ್ ಖಾನ್ (38)
ನಾವೆದ್ ಹುಸೇನ್ ಖಾನ್ (30