• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಎದೆಹಾಲು ದಾನದಲ್ಲಿ ದಾಖಲೆ ಬರೆದ ತಮಿಳುನಾಡಿನ ಮಹಿಳೆ!

Tulunadu News Posted On August 7, 2025
0


0
Shares
  • Share On Facebook
  • Tweet It

ಎದೆ ಹಾಲು ಎನ್ನುವುದು ಪುಟ್ಟ ಹಸುಳೆಗಳಿಗೆ ಬಹಳ ಪ್ರಮುಖವಾದ ಆಹಾರ. ಹುಟ್ಟಿದ ಮಕ್ಕಳು ಮೊದಲು ಕುಡಿಯುವುದೇ ಎದೆ ಹಾಲು. ಸೂಕ್ತ ಸಮಯದಲ್ಲಿ ಎದೆಹಾಲು ಸಿಗದೇ ಇದ್ದರೆ ನಂತರ ಆ ಮಗುವಿನ ಬೆಳವಣಿಗೆಯಲ್ಲಿ ಅದು ಪರಿಣಾಮ ಬೀರುತ್ತದೆ. ಆದ್ದರಿಂದ ಎದೆಹಾಲು ಹಸುಳೆಗಳ ಜೀವ ಉಳಿಸಲು ಬಹಳ ಪ್ರಮುಖವಾದ ಅಂಶ. ಆದರೆ ಎಲ್ಲಾ ತಾಯಂದಿರಲ್ಲಿ ಹುಟ್ಟಿದ ಮಗುವಿಗೆ ಎದೆ ಹಾಲು ಕೊಡಿಸುವ ಸಾಮರ್ತ್ಯ ಇರುವುದಿಲ್ಲ. ಆದ್ದರಿಂದ ಅನಿವಾರ್ಯವಾಗಿ ಎದೆಹಾಲನ್ನು ಬೇರೆ ಮಹಿಳೆಯರಿಂದ ಪಡೆಯಬೇಕಾಗುತ್ತದೆ. ಹಾಗೆ ಎದೆಹಾಲು ನೀಡುವ ಮಹಿಳೆಯರೇ ಅನೇಕರು ಇದ್ದಾರೆ. ಮಾನವೀಯತೆಯ ದೃಷ್ಟಿಯಿಂದ ಈ ಸತ್ಕಾರ್ಯದಲ್ಲಿ ತೊಡಗಿದ್ದಾರೆ. ತಮಿಳುನಾಡಿನ ಮಹಿಳೆಯೊಬ್ಬರು ಕೇವಲ ತಮ್ಮ ಮಕ್ಕಳಿಗೆ ಹಾಲುಣಿಸುವುದು ಮಾತ್ರವಲ್ಲದೇ 22 ತಿಂಗಳಲ್ಲಿ ಬರೋಬ್ಬರಿ 300 ಲೀಟರ್ ಎದೆ ಹಾಲು ದಾನ ಮಾಡಿ ಹಲವು ಮಕ್ಕಳ ಜೀವ ಉಳಿಸಿದ್ದಾರೆ.

ಅವಧಿಪೂರ್ವ ಜನಿಸಿದ ಮಕ್ಕಳಿಗೆ ಮತ್ತು ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳಿಗೆ ಎದೆಹಾಲಿನ ತೀರಾ ಅಗತ್ಯವಿರುತ್ತದೆ. ಆದರೆ ಅಗತ್ಯ ಪ್ರಮಾಣದಲ್ಲಿ ಅದು ಲಭ್ಯವಿರುವುದಿಲ್ಲ. ಇಂತಹ ಹೊತ್ತಿನಲ್ಲಿ ಬೃಂದಾ ತಮ್ಮ ಎದೆಹಾಲು ದಾನ ಮಾಡಿ ನೂರಾರು ಮಕ್ಕಳ ಪ್ರಾಣ ಕಾಪಾಡಿದ್ದಾರೆ. ತಿರುಚಿರಾಪಲ್ಲಿಯ ಕಟ್ಟೂರಿನ ಸೆಲ್ವ ಬೃಂದಾ (33) ಈ ಸಾಧನೆ ಏಷ್ಯಾ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ.
2023 ರ ಏಪ್ರಿಲ್ ನಿಂದ 2025 ರ ಫೆಬ್ರವರಿವರೆಗೆ ಬೃಂದಾ ಅವರು 300.17 ಲೀಟರ್ ಹಾಲನ್ನು ಮಹಾತ್ಮಾ ಗಾಂಧಿ ಸ್ಮರಣಾರ್ಥ ಸರಕಾರಿ ಆಸ್ಪತ್ರೆಯ ಕ್ಷೀರ ಬ್ಯಾಂಕ್ ಗೆ ದಾನ ಮಾಡಿದ್ದಾರೆ. ಕಳೆದ ವರ್ಷ ಆಸ್ಪತ್ರೆಯ ಒಟ್ಟು ಹಾಲಿನಲ್ಲಿ ಇವರ ಪಾಲು ಅರ್ಧದಷ್ಟಿತ್ತು. ಈ ಸಾಧನೆಗಾಗಿ ವಿಶ್ವ ಸ್ತನ್ಯಪಾನ ಸಪ್ತಾಹದಂದು ಸನ್ಮಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!

  • Privacy Policy
  • Contact
© Tulunadu Infomedia.

Press enter/return to begin your search