ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು…

ಭಾರತೀಯ ರೈಲ್ವೆ ಇನ್ನು ಮುಂದೆ ಲಗೇಜ್ ವಿಷಯದಲ್ಲಿ ಕಟ್ಟುನಿಟ್ಟಿನ ವಿಷಯಗಳನ್ನು ಪಾಲಿಸಿಕೊಂಡು ಬರುವ ಮುನ್ಸೂಚನೆ ನೀಡಿದೆ. ಇನ್ನು ನೀವು ರೈಲು ನಿಲ್ದಾಣಕ್ಕೆ ಹೋದಾಗ ನಿಮ್ಮ ಲಗೇಜುಗಳನ್ನು ರೈಲ್ವೆ ನಿಲ್ದಾಣದಲ್ಲಿ ತೂಕಕ್ಕೆ ಇಡಬೇಕು ಎನ್ನುವ ಸೂಚನೆ ಇದ್ದರೆ ಆಶ್ಚರ್ಯಪಡಬೇಡಿ. ಇಂತಹ ನಿಯಮ ಇನ್ನು ಭವಿಷ್ಯದಲ್ಲಿ ಬರಲಿದೆ. ಹೀಗೆ ಇಲ್ಲಿಯ ತನಕ ವಿಮಾನ ನಿಲ್ದಾಣದಲ್ಲಿ ಮಾತ್ರ ಇಂತಹ ನಿಯಮ ಇತ್ತು. ಅದನ್ನು ರೈಲ್ವೆ ಇಲಾಖೆ ರಾಷ್ಟ್ರವ್ಯಾಪಿ ತನ್ನಲ್ಲಿ ಅಳವಡಿಸಿಕೊಳ್ಳುವತ್ತ ಚಿಂತನೆ ನಡೆಸಿದೆ.
ಈಗ ಉದ್ದೇಶಿತ ನಿಯಮವನ್ನು ಜಾರಿಗೆ ತರಲು ರೈಲ್ವೆ ಇಲಾಖೆ ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ತೂಕದ ಯಂತ್ರಗಳನ್ನು ಅಳವಡಿಸಲು ತೀರ್ಮಾನಿಸಿದೆ. ಸದ್ಯ ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ಸದ್ಯ ಈ ನಿಯಮ ಜಾರಿಗೆ ಬರಲಿದೆ. ಮುಂದಿನ ದಿನಗಳಲ್ಲಿ ಒಂದೊಂದಾಗಿ ಇದು ಎಲ್ಲಾ ಕಡೆ ಕಾಣ ಸಿಗಲಿದೆ. ಒಮ್ಮೆ ನಿಯಮ ಜಾರಿಗೆ ಬಂದ ನಂತರ ಪ್ರಯಾಣಿಕ ಇಂತಿಷ್ಟೇ ತೂಕದ ಲಗೇಜನ್ನು ತನ್ನ ಜೊತೆಗೆ ತೆಗೆದುಕೊಂಡು ಹೋಗಬಹುದು. ನಂತರ ನಿಗದಿತ ತೂಕಕ್ಕಿಂತ ಹೆಚ್ಚಾಗಿದ್ದರೆ ಅದಕ್ಕಾಗಿ ನಿಗದಿಪಡಿಸಿದ ದರವನ್ನು ಪಾವತಿಸಬೇಕಾಗುತ್ತದೆ.
ಈಗ ಈ ನಿಯಮವನ್ನು ಈ ಕೆಳಕಂಡ ರೈಲ್ವೆ ನಿಲ್ದಾಣಗಳಲ್ಲಿ ಈಗ ಜಾರಿಗೆ ತರಲಾಗಿದೆ. ಅವು ಯಾವುದೆಂದರೆ – ಪ್ರಯಾಗರಾಜ್ ಜಂಕ್ಷನ್, ಕಾನಪುರ ಸೆಂಟ್ರಲ್, ಮಿರ್ಜಾಪುರ, ತುಂಡ್ಲಾ, ಆಲಿಘಡ್ ಜಂಕ್ಷನ್ ಮತ್ತು ಈಟಾವಾ. ಇನ್ನು ಯಾವ ರೀತಿಯ ದರವನ್ನು ಇಲ್ಲಿ ರೈಲ್ವೆ ಇಲಾಖೆ ನಿಗದಿಗೊಳಿಸಿದೆ ಎನ್ನುವುದನ್ನು ನೋಡೋಣ.
1. ಎಸಿ ಫಸ್ಟ್ ಕ್ಲಾಸ್ ನಲ್ಲಿ ಪ್ರಯಾಣಿಸುವವರು 70 ಕೆಜಿ, ಎಸಿ ಟೂ -ಟೈಯರ್ ಪ್ರಯಾಣಿಕರು 50 ಕೆಜಿ ಲಗೇಜ್
2. ಎಸಿ ತ್ರೀ- ಟೈಯರ್ ಹಾಗೂ ಸ್ಲೀಪರ್ ಪ್ಯಾಸೆಂಜರ್ 40 ಕೆಜಿ
3. ಜನರಲ್ ಕ್ಲಾಸ್ ಪ್ಯಾಸೆಂಜರ್ 35 ಕೆಜಿ
4. ಇನ್ನು ತೂಕ ಕಡಿಮೆ ಇದ್ದರೂ ಹೆಚ್ಚು ಜಾಗವನ್ನು ಅತಿಕ್ರಮಿಸುವ ಲಗೇಜುಗಳಿಗೆ ತೂಕದ ಮಾಪನ ಬಿಟ್ಟು ಹೆಚ್ಚುವರಿ ದಂಡ ವಿಧಿಸುವ ನಿಯಮ ಇದೆ.
ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಆರಾಮದಾಯಕ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ