ನಕಲಿ ಐಡಿ ನೀಡಿದವ ಹಿಂದೂ ಮಹಿಳೆಯ ಜೊತೆ ಲಾಡ್ಜ್ ನಲ್ಲಿ ಸೆರೆ!

ಇದು ಅವರಿಬ್ಬರು ಸೇರಿ ಮಾಡಿದಂತಹ ಪ್ಲಾನೋ ಅಥವಾ ಅವಳಿಗೆ ತಾನು ಹಿಂದೂ ಎಂದು ಆತನೇ ನಂಬಿಸಿದ್ದನೋ, ಅದಿನ್ನು ವಿಚಾರಣೆ ನಡೆಯಬೇಕಿದೆ. ಆದರೆ ತಾನು ಹಿಂದೂ ಅಲ್ಲ ಎನ್ನುವುದು ಅವನಿಗೆ ಚೆನ್ನಾಗಿ ಗೊತ್ತಿತ್ತಲ್ಲ, ಅದು ಅವಳಿಗೆ ಗೊತ್ತಿಲ್ಲದೇ ಆತ ಮೋಸ ಮಾಡಿದ್ರೆ ಇದು ನಂಬಿಕೆ ದ್ರೋಹ ಆಗಲಿದೆ. ಆತನ ಹೆಸರು ಅಬ್ದುಲ್ ಸಮದ್. ವಯಸ್ಸು 42 ವರ್ಷ. ಅವನ ಮೂಲ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನುರ್ ಊರಿನ ಮಾಗುಂಡಿ. ಈತ ಹಾಗೂ 38 ವರ್ಷ ಪ್ರಾಯದ ಹಿಂದೂ ಯುವತಿ ಶೃಂಗೇರಿಗೆ ಬಂದಿದ್ದಾರೆ. ಅಲ್ಲಿ ಲಾಡ್ಜ್ ನಲ್ಲಿ ರೂಂ ಬುಕ್ ಮಾಡಿದ್ದಾರೆ.
ರೂಂ ಬುಕ್ ಮಾಡುವಾಗ ಎಲ್ಲರಿಗೂ ಗೊತ್ತಿರುವಂತೆ ಹೋಟೇಲಿನವರು ಐಡಿ ಕೇಳುತ್ತಾರೆ. ಹಾಗೆ ಇವನ ಬಳಿ ಐಡಿ ಕೇಳಿದ್ದಾರೆ. ಇವನು ಸಹ ಮೊದಲೇ ಐಡಿ ತೆಗೆದುಕೊಂಡು ಬಂದಿದ್ದ. ಅದರ ಪ್ರಕಾರ ಐಡಿ ನೀಡಿದ್ದಾನೆ. ಅದರಂತೆ ತನ್ನ ಜೊತೆ ಇದ್ದ ಯುವತಿಯನ್ನು ಪತ್ನಿ ಎಂದು ಹೇಳಿ ಇಬ್ಬರೂ ಲಾಡ್ಜ್ ರೂಂ ಸೇರಿಕೊಂಡಿದ್ದಾರೆ. ಇವನ ಹಾವಭಾವ, ಮುಖಚಹರೆ ಎಲ್ಲಾ ನೋಡಿದ ಹೋಟೇಲು ಸಿಬ್ಬಂದಿಗೆ ಇವನು ಹಿಂದೂ ಅಲ್ಲ ಎನ್ನುವುದು ಗೊತ್ತಾಗಿದೆ. ಅವರು ಸ್ಥಳೀಯರ ಸಹಕಾರ ಪಡೆದು ಶೃಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಆ ವ್ಯಕ್ತಿ ನೀಡಿದ ಐಡಿ ಪರಿಶೀಲಿಸಿದ್ದಾರೆ. ಅದರಲ್ಲಿ ರಮೇಶ್ ಎಂದು ಬರೆದಿತ್ತು. ನಂತರ ಇಬ್ಬರನ್ನು ಕರೆದು ವಿಚಾರಿಸಿದಾಗ ಸತ್ಯ ಹೊರಬಂದಿದೆ. ಉಳಿದ ತನಿಖೆ ಈಗ ನಡೆಯುತ್ತಿದೆ.
ಈ ಮೊದಲು ಕೂಡ ಲಾಡ್ಜ್ ಗಳಲ್ಲಿ ರೂಂ ಪಡೆಯುವಾಗ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರನ್ನು ಪ್ರೇಮದ ಬಲೆಯಲ್ಲಿ ಬೀಳಿಸುವಾಗ ಮುಸ್ಲಿಂ ಯುವಕರು ತಾವು ಹಿಂದೂ ಯುವಕರ ಹೆಸರನ್ನು ನೀಡಿ ಹಿಂದೂ ಎಂದು ಬಿಂಬಿಸಿ ಮೋಸ ಮಾಡಿದ ಘಟನೆಗಳು ನಡೆಯುತ್ತಿವೆ. ಈ ಪ್ರಕರಣದಲ್ಲಿಯೂ ಹಾಗೆ ಆಗಿದೆಯಾ, ಇಲ್ವಾ ಎನ್ನುವುದು ತಿಳಿಯಬೇಕಿದೆ. ಒಂದು ವೇಳೆ ಆ ವ್ಯಕ್ತಿ ಸಮದ್, ಹಿಂದೂ ಅಲ್ಲ, ಮುಸ್ಲಿಂ ಎಂದು ಹಿಂದೂ ಯುವತಿಗೆ ಗೊತ್ತಿದ್ದು, ಆತನೊಂದಿಗೆ ಸರಸ ಸಲ್ಲಾಪ ನಡೆಸಲು ರೂಂ ಬುಕ್ ಮಾಡಿದರೆ ಅದಕ್ಕೆ ಕಾನೂನಿನಲ್ಲಿ ಶಿಕ್ಷೆ ಇರುವುದಿಲ್ಲ. ಏಕೆಂದರೆ ಕಾನೂನು ಯುವತಿಯ ಒಪ್ಪಿಗೆ ಮತ್ತು ವಯಸ್ಸನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಒಂದು ವೇಳೆ ಆ ಯುವತಿ ಪ್ರಾಪ್ತ ವಯಸ್ಸಿನವಳಾಗಿದ್ದು, ಅವಳ ಸ್ವಇಚ್ಚೆಯಿಂದಲೇ ಎದುರಿನ ಯುವಕ ತನ್ನ ಧರ್ಮದವನು ಅಲ್ಲ ಎಂದು ಗೊತ್ತಿದ್ದೂ ಅವನೊಂದಿಗೆ ಹೋದರೆ ಅಲ್ಲಿ ನೈತಿಕತೆಯ ವಿಷಯ ಬರುತ್ತದೆ ವಿನ: ಕಾನೂನು ಸಂಬಂಧ ಅದು ಶಿಕ್ಷೆಯ ಪರಿಮಿತಿಯಲ್ಲಿ ಬರುವುದಿಲ್ಲ.